ಮುಂದೆ ಗಾಂಧಿ ದೇಶ ಹೋಗಿ ಗೂಡ್ಸೆ ದೇಶವಾಗುತ್ತದೆ : ಸಿ.ಬಿ.ಶಶಿಧರ್

ತಿಪಟೂರು:

    ಪ್ರಪಂಚದ ಯಾವುದೇಶೇಕ್ಕೆ ನಾವು ಹೋದರು ನಮ್ಮದೇಶದ ಹೆಸರಿನ ಬದಲಿಗೆ ಗಾಂಧಿಹೆಸರೇಳಿದರೆ ಭಾರತದೇಶವೆಂದು ಅರ್ಥಮಾಡಿಕೊಳ್ಳುತ್ತಿದ್ದಾರೆ ಆದರೆ ಈಗಿನ ಬಿ.ಜೆ.ಪಿ ಲೋಕಸಭಾ ಅಭ್ಯರ್ಥಿ ಪ್ರಜ್ಞಾ ಸಾಧ್ವಿಸಿಂಗ್ ಇದನ್ನು ಗೂಡ್ಸೆ ದೇಶಮಾಡಲು ಹೊರಟಿರುವ ಹಾಗೆ ಕಾಣುತ್ತಿದೆ ಎಂದು ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ಶಶಿಧರ್ ಆರೋಪಿಸಿದರು.

     ನಗರದ ಖಾಸಗಿ ಹೋಟೆಲ್‍ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಪ್ರಜಾ ಸಾಧ್ವಿಸಿಂಗ್ ಹೇಳಿಕೆಯನ್ನು ಬಿ.ಜೆ.ಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಅದಕ್ಕೋಸ್ಕರ ಸಾಧ್ವಿಸಿಂಗ್ ಮೇಲೆ ಏನೂ ಕ್ರಮತೆಗೆದುಕೊಳ್ಳದೇ ಬರಿ ನೋಟೀಸ್ ನೀಡಿದ್ದಾರೆ ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಯುವಘಟಕಟದ ಅಧ್ಯಕ್ಷನನ್ನು ವಜಾಗೊಳಿಸಲಾಗಿದೆ.

     ಇಷ್ಟು ದಿನ ಶ್ರೀರಾಮನನ್ನು ಗುತ್ತಿಗೆತೆದುಕೊಂಡಂತೆ ಮಾತನಾಡುತ್ತಿದ್ದ ಕೋಮುವಾದಿ ಬಿ.ಜೆ.ಪಿಯವರು ಮರ್ಯಾದಪುರುಷೋತ್ತಮನ ಗುಣಗಳನ್ನೇ ಪಾಲಿಸುತ್ತಿಲ್ಲ ಅಂದು ರಾಮಾಯಣದಲ್ಲಿ ಯುದ್ದಮುಗಿದು ರಾವಣನ ಶವವನ್ನು ವಾನರನು ಒದೆಯಲು ಬಂದಾಗ ಬೇಡ ಅವನು ಚಕ್ರವರ್ತಿ ಅವನ ಸ್ಥಾನ ಅವನಿಗೇ ಇದ್ದೇಇರುತ್ತದೆ ಎಂದು ತನ್ನ ಶಾಲನ್ನು ಶವಕ್ಕೆಹೊದಿಸಿದ ಶ್ರೀರಾಮನೆಲ್ಲಿ ಅವನ್ನ ಹೆಸರೇಳುತ್ತಿರುವ ಇವರೆಲ್ಲಿ ಎಂದು ಗೇಲಿಮಾಡಿದರು.

     ನಮ್ಮ ದೇಶ ಮುಂದುವರೆಯುತ್ತಿದ್ದ ದೇಶವಾಗಿದ್ದು ನಮ್ಮ ದೇಶವನ್ನು ಎಲ್ಲರೂ ಗಮನಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಗಾಂಧಿಯನ್ನು ಪೂಜಿಸುತ್ತಿರುವ ಅವರು ಇದನ್ನು ನೋಡಿ ಗಾಂಧಿಯಂತೆ ಗೂಡ್ಸೆ ದೇಶಭಕ್ತನೆಂದರೆ ಮಿಕ್ಕವೆರೆಲ್ಲಾ ಯಾರು ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೋರಾಟಮಾಡುವುದಾಗಿ ತಿಳಿಸಿದರು.

     ನಗರಸಭೆಯ ಚುನಾವಣೆಯಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಪ್ರಶ್ನಿಸಿದ್ದಕ್ಕೆ ಸ್ವಲ್ಪ ಬಿನ್ನಾಭಿಪ್ರಾಯವಿದೆ ನಮ್ಮ ಕಡೆಯವರಿಗೆ ಟಿಕೆಟ್ ದೊರೆಯದಿರುವುದು ಬೇಸರದ ಸಂಗತಿ ಆದರೆ ಪಕ್ಷದ ಹೈಕಮಾಂಡ್‍ನ ಆದೇಶದಂತೆ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ನಾಯಕರ ಜೊತೆ ಹೋಗಿ ಪಕ್ಷದ ಅಭಿವೃದ್ಧಿಗಾಗಿ ದುಡಿದು ನಗರಸಭೆಯಲ್ಲಿ ಸುಂಆರು 16 ರಿಂದ 18 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

     ಪತ್ರಿಕಾ ಘೋಷ್ಠಿಯಲ್ಲಿ ರಾಜ್ಯ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ನಾರಾಯಣ್ ಮಾತನಾಡಿದ ಒಂದು ಮನೆ ಎಂದಮೇಲೆ ಮನಸ್ತಾಪಗಳಿರುವುದು ಸಹಜ ಆದರೆ ಎಲ್ಲಿ ಕಿತ್ತಾಟ ಮನಸ್ತಾಪಗಳಿರುತ್ತವೆಯೋ ಅಲ್ಲಿ ಪ್ರೀತಿಹೆಚ್ಚಾಗಿರುತ್ತದೆ ನಮ್ಮ ನಾಯಕರಾದ ಜಿ.ಪರಮೇಶ್ವರ್, ಮುದ್ದಹನುಮೇಗೌಡರು ನೀವೆ ಮುಂದೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಹೇಳಿದ್ದು ಅವರ ಅಣತಿಯಂತೆ ಕೆಲಸನಿರ್ವಹಿಸಿ ಪಕ್ಷವನ್ನು ನಗರಸಭೆಯ ಗದ್ದುಗೆ ಏರಿಸುವುದೇ ನಮ್ಮ ಕರ್ತವ್ಯವೆಂದರು.ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡರಾದ ತ್ರಯಂಬಕ, ಪರಮಶಿವಯ್ಯ, ವಿರೂಪಾಕ್ಷಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ಮುಂತಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap