ದಾವಣಗೆರೆ :
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಸುತ್ತ ಪಡಿಸುತ್ತಿರುವ ಗಾಂಧಿಯವರ ಜೀವನ ಸಾಧನೆಯ ವಿವಿಧ ಘಟ್ಟಗಳನ್ನು ಗುರುತಿಸುವ ವಿನೂತನ ಗಾಂಧಿ ಸ್ತಬ್ದಚಿತ್ರ ವಾಹನವು ಇಂದು ನಗರಕ್ಕೆ ಆಗಮಿಸಿ ನಗರದ ಎ.ವಿ.ಕೆ ಕಾಲೇಜಿನ ಮುಂಭಾಗದಲ್ಲಿ ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲ, ಎ.ವಿ.ಕೆ ಕಾಲೇಜು ಪ್ರಾಂಶುಪಾಲರಾದ ಶಿವಪ್ರಸಾದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ, ವಾರ್ತಾಧಿಕಾರಿ ಅಶೋಕ್‍ಕುಮಾರ್ ಗಾಂಧಿವಾದಿಗಳು, ಕಾಲೇಜು ವಿದ್ಯಾರ್ಥಿನಿಯರು, ಸಾರ್ವಜನಿಕರು ಸ್ಥಬ್ದ ಚಿತ್ರಕ್ಕೆ ಪುಷ್ಪ ಸಲ್ಲಿಸುವ ಮೂಲಕ ಸ್ವಾಗತಿಸಿದರು.
ಸ್ತಬ್ದಚಿತ್ರ ವಾಹನದಲ್ಲಿ ಗಾಂಧೀಜಿಯವರ ಬದುಕು, ಬರಹ, ಸ್ವಾತಂತ್ರ್ಯ ಹೋರಾಟ, ಅಹಿಂಸೆ, ಸತ್ಯಾಗ್ರಹಗಳಿಗೆ ಅವರು ನೀಡಿರುವ ಕೊಡುಗೆಗಳು ಅನಾವರಣಗೊಂಡಿದ್ದು, ಸ್ತಬ್ದ ಚಿತ್ರವನ್ನು ನೋಡಿ ರಸ್ತೆಯಲ್ಲಿ ಸಾಗುತ್ತಿದ್ದ ಸಾರ್ವಜನಿಕರು ನಿಂತು ವೀಕ್ಷಿಸಿದರು. ಸಾರ್ವಜನಿಕರು ವಿಧ್ಯಾರ್ಥಿಗಳು ಸ್ತಬ್ದಚಿತ್ರದ ಬಳಿ ಬಂದು ಗಾಂಧಿ ಪ್ರತಿಮೆ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಸ್ತಬ್ದ ಚಿತ್ರವು ಆನಂತರ ನಗರದ ಮುಖ್ಯ ಭಾಗಗಳಲ್ಲಿ ಹಾದು ಜಯದೇವ ಸರ್ಕಲ್‍ನಲ್ಲಿ ಪ್ರದರ್ಶನ ನೀಡಿತು.
ನಂತರ ನಗರದ ಪಿ.ಬಿ ರಸ್ತೆ ಮೂಲಕ ಹಾದು ಹರಿಹರಕ್ಕೆ ಹೋಗುವ ಮಾರ್ಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದಾಗ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಗಾಂಧಿ ಪ್ರತಿಮೆಗೆ ಪುಷ್ಪ ಅರ್ಪಿಸುವ ಮೂಲಕ ಗಾಂಧೀಜಿ ಸ್ತಬ್ದಚಿತ್ರಕ್ಕೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಡಿ.ಸಿ.ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
