ರೈಲಿನಲ್ಲಿ ಗಾಂಜಾ ಮಾರಾಟ…!!!!

ಬೆಂಗಳೂರು

         ತ್ರಿಪುರದಿಂದ ರೈಲಿನಲ್ಲಿ ಗಾಂಜಾ ಸಾಗಿಸಿಕೊಂಡು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಬಂಡೆಪಾಳ್ಯ ಪೆÇಲೀಸರು 10 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಗಾಂಜಾ ಮಾರಾಟ ಮಾಡುತ್ತಿದ್ದ ರೂಪೇನ ಅಗ್ರಹಾರದ ಬಿಕಾಸ್ ದಾಸ್ (20), ಎಇಸಿಎಸ್ ಲೇಔಟ್‍ನ ತಪನ್ ಸರ್ಕಾರ್ (21) ಹಾಗೂ ಕೂಡ್ಲುಗೇಟ್‍ನ ಅಕ್ಷಯದತ್ತ(19)ನನ್ನು ಬಂಧಿಸಿ ಎರಡೂವರೆ ಲಕ್ಷ ಮೌಲ್ಯದ 11 ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

        ಆರೋಪಿಗಳಲ್ಲಿ ಬಿಕಾಸ್ ದಾಸ್ ಹಾಗೂ ತಪನ್ ಸರ್ಕಾರ್ ತ್ರಿಪುರ ಮೂಲದವರಾಗಿದ್ದು, ಅಲ್ಲಿಂದ ಗಾಂಜಾ ತಂದು ಸ್ಥಳೀಯನಾಗಿದ್ದ ಅಕ್ಷಯ್ ದತ್ತಾ ಜತೆ ಸೇರಿ ಎಚ್‍ಎಸ್‍ಆರ್ ಲೇಔಟ್, ಬಂಡೇಪಾಳ್ಯ, ಪರಪ್ಪನ ಅಗ್ರಹಾರ, ಬೊಮ್ಮನಹಳ್ಳಿ ಇನ್ನಿತರ ಕಡೆಗಳಲ್ಲಿ ಓಡಾಡುತ್ತ ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು.

       ಆರೋಪಿಗಳು ರೈಲಿನಲ್ಲಿ ಗಾಂಜಾ ತೆಗೆದುಕೊಂಡು ಬರುತ್ತಿದ್ದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಮೊದಲ ಬಾರಿ ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link