ಬೆಂಗಳೂರು
ಮಾದಕ ಗಾಂಜಾ ಹಾಗೂ ಎಲ್‍ಎಸ್‍ಡಿ ಪೇಪರ್‍ಗಳನ್ನು ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಕಾರ್ಯಕ್ರಮ ಸಂಯೋಜಕನೊಬ್ಬನನ್ನು ಸುದ್ದಗುಂಟೆಪಾಳ್ಯದ ಪೊಲೀಸರು ಬಂಧಿಸಿ, 3.50 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಸ್ಟೀನ್ ಟೌನ್‍ನ ವಿಕ್ಟೋರಿಯಾ ಲೇಔಟ್‍ನ ಓಂ ಪ್ರಕಾಶ್ (40) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 3.5 ಲಕ್ಷ ರೂ. ಮೌಲ್ಯದ 2 ಕೆಜಿ ಗಾಂಜಾ, 20 ಎಲ್‍ಎಸ್‍ಡಿ ಪೇಪರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯು ಔಷಧಿ ಪೂರೈಕೆದಾರನಾಗಿ ಹಾಗೂ ಕಾರ್ಯಕ್ರಮ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದು, ಅಲ್ಲಿ ತನಗೆ ಪರಿಚಯವಾದ ಯುವಕರಿಗೆ ಗಾಂಜಾ ಹಾಗೂ ಎಲ್‍ಎಸ್‍ಡಿ ಪೇಪರ್‍ಗಳನ್ನು ಮಾರಾಟ ಮಾಡುತ್ತಿದ್ದ. ಸುಲಭವಾಗಿ ಹಣ ಗಳಿಸಿ ಮೋಜಿನ ಜೀವನ ನಡೆಸಲು ಈ ಕೃತ್ಯದಲ್ಲಿ ತೊಡಗಿದ್ದ.
ಗಿರಾಕಿಯೊಬ್ಬ ನೀಡಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸುದ್ದಗುಂಟೆಪಾಳ್ಯ ಪೊಲೀಸ್ ಇನ್ಸ್‍ಪೆಕ್ಟರ್ ಮಹಮದ್, ಮತ್ತವರ ಸಿಬ್ಬಂದಿ, ಆರೋಪಿಯನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಹೊಸಕೋಟೆ ಕಡೆಯಿಂದ ಗಾಂಜಾ ತರುವುದು ಎಲ್‍ಎಸ್‍ಡಿ ಪೇಪರ್‍ನ್ನು ಬೆರೇಡೆಯಿಂದ ತರುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ ಆರೋಪಿಯನ್ನು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








