ಹೊನ್ನಾಳಿ:
ಇಂಧನ ಬಳಕೆಯ ಹಾಗೂ ನವೀಕರಣ ಬಗ್ಗೆ ಎಲ್ಲರೂ ಜಾಗೃತಿ ಹೊಂದಬೇಕು ಎಂದು ಬೆಂಗಳೂರಿನ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಹೇಳಿದರು.
ತಾಲೂಕಿನ ಹೊಸಮಳಲಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನವೀಕರಿಸಬಹುದಾದ ಇಂಧನ ಮತ್ತು ಘನತ್ಯಾಜ್ಯ ನಿರ್ವಹಣೆಯ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೆಟ್ರೋಲ್, ಡೀಸೆಲ್ ಮತ್ತಿತರ ಇಂಧನಗಳು ನವೀಕರಿಸಲಾಗದ ಇಂಧನಗಳಾಗಿವೆ. ಸೀಮಿತ ಅವಧಿಯವರೆಗೆ ಮಾತ್ರ ಇವುಗಳು ಮನುಷ್ಯನ ಬಳಕೆಗೆ ಲಭ್ಯ ಇವೆ. ಆದ್ದರಿಂದ, ನವೀಕರಿಸಬಹುದಾದ ಇಂಧನ ಮೂಲಗಳ ಸದ್ಬಳಕೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು,. ವಿಶೇಷವಾಗಿ ಸೌರಶಕ್ತಿಯನ್ನು ವಿವಿಧ ಶಕ್ತಿ ಮೂಲಗಳನ್ನಾಗಿ ಬಳಸಲು ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
ಮಹಾತ್ಮಾ ಗಾಂಧಿ ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಯ ನಿರ್ದೇಶಕ ವಿಜಯ್‍ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜಪ್ಪ, ಹೊಸಮಳಲಿ ಮಹಿಳಾ ಸಂಘದ ಸದಸ್ಯೆಯರಾದ ಶೀಲಾ, ಅಂಬಿಕಾ, ಮಮತ ಮತ್ತಿತರರು ಉಪಸ್ಥಿತರಿದ್ದರು.ಹೊಸಮಳಲಿ ಗ್ರಾಮದ ವಿವಿಧ 5 ಮಹಿಳಾ ಸಂಘಗಳ 50ಕ್ಕೂ ಹೆಚ್ಚು ಸದಸ್ಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ