ಕುಣಿಗಲ್
ಅಡುಗೆ ಮಾಡುವ ವೇಳೆ ಗ್ಯಾಸ್‍ಆಫ್ ಮಾಡುವುದನ್ನು ಮರೆತ ಪರಿಣಾಮ ಅನಿರೀಕ್ಷಿತವಾಗಿ ಉಂಟಾದ ಗ್ಯಾಸ್ ಲಿಕೇಜ್‍ನಿಂದ ಬೆಂಕಿ ಕಾಣಿಸಿಕೊಂಡು ಮೆನೆಯಲ್ಲಿದ್ದ ಕೆಲವು ವಸ್ತುಗಳು ಸುಟ್ಟು ಹೋದ ಘಟನೆ ಸಂಭವಿಸಿತು. ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಹಿಂಭಾಗದ ಮುಸ್ಲೀಂ ಬಡಾವಣೆಯ ಮನೆಯೊಂದರಲ್ಲಿ ಚೋಟಿಮಾ ಎಂಬ ಮಹಿಳೆಯೊಬ್ಬಳು ಅಡುಗೆ ಮಾಡುವ ಸಂಬಂಧ ಗ್ಯಾಸ್ ಅಚ್ಚಿದ್ದಾರೆ ಆಫ್ ಮಾಡುವುದನ್ನು ಮರೆತ ಪರಿಣಾಮ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ಮಂಚ,ಹಾಸಿಗೆ ಸೇರಿದಂತೆ ಹಲವು ಪದಾರ್ಥಗಳು ಸುಟ್ಟು ಹೋಗಿವೆ ಎನ್ನಲಾಗಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಮತ್ತು ಪಿ.ಎಸ್.ಐ. ವಿಕಾಸ್‍ಗೌಡ ಆಗಮಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ