ಕಾಪು:
ಕಾಪುವಿನ ಬಳಿ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ ಸುತ್ತಮುತ್ತಲ ಪರಿಸರದಲ್ಲಿ ಆತಂಕ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.
ಮುಂಜಾನೆ 5.30ಕ್ಕೆ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಸಂಚಾರವನ್ನು ನಿಷೇಧಿಸಿ ಪೊಲೀಸರು ಮಧ್ಯಾಹ್ನ 12.30ರ ಸುಮಾರಿಗೆ ಟ್ಯಾಂಕರ್ ತೆರವುಗೊಳಿಸಿದ್ದಾರೆ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಎರಡೂ ಬದಿಯ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿದು ಬಂದಿದೆ. .
ಟ್ಯಾಂಕರ್ ಚಾಲಕ ಮತ್ತು ಟ್ಯಾಂಕರ್ ಮಾಲೀಕನ ನಡುವಿನ ಮೊಬೈಲ್ ಮಾತುಕತೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಟ್ಯಾಂಕರ್ ಚಾಲಕ ಎಟಿಎಂ ಕಾರ್ಡನ್ನು ಮರೆತು ಮಂಗಳೂರಿನಲ್ಲಿ ಬಿಟ್ಟು ಬಂದಿದ್ದು, ಡೀಸೆಲ್ ತುಂಬಿಸಲು ಬಂಕ್‌ಗೆ ಹೋದಾಗ ಕಾರ್ಡ್ ಬಿಟ್ಟು ಬಂದಿರುವುದು ಗಮನಕ್ಕೆ ಬಂದಿತ್ತು.ಮರಳಿ ಮಂಗಳೂರಿಗೆ ಹೋಗಲೆಂದು ಬಲಾಯಿಪಾದೆ ಜಂಕ್ಷನ್ ಬಳಿ ಹಠಾತ್ ಆಗಿ ಟ್ಯಾಂಕರನ್ನು ಬಲಕ್ಕೆ ತಿರುಗಿಸಿದ್ದರಿಂದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದಿದ್ದೆ ಎನ್ನಲಾಗಿದೆ. ಮಗುಚಿ ಬಿದ್ದಾಗ ಭಾರೀ ಸದ್ದು ಕೇಳಿ ಬಂದಿದ್ದು, ಗ್ಯಾಸ್ ಸೋರಿಕೆಯ ಭೀತಿ ಎದುರಾಗಿತ್ತು ಸ್ಥಳೀಯರು ತಿಳಿಸಿದ್ದಾರೆ.