ಜಾಗತಿಕ ಆರ್ಥಿಕ ಹಿನ್ನೆಡೆಯಿಂದ ಜಿಡಿಪಿ ದರ ಕಡಿಮೆಯಾಗಿದೆ : ಡಿ.ವಿ. ಸದಾನಂದಗೌಡ

ಬೆಂಗಳೂರು

     ಜಾಗತಿಕವಾಗಿ ಆರ್ಥಿಕ ಹಿನ್ನೆಡೆಯ ಪರಿಣಾಮದಿಂದ ಭಾರತದಲ್ಲೂ ದೇಶದ ಅಭಿವೃದ್ಧಿ ದರ(ಜಿಡಿಪಿ) ದರ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಜಿಡಿಪಿ ಬೆಳವಣಿಗೆ ಏರುಗತಿಯಲ್ಲಿ ಆಗಲಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

     ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆ ನಗರದಲ್ಲಿಂದು ಆಯೋಜಿಸಿದ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರ್ಥಿಕ ಹಿನ್ನೆಡೆಯಿಂದ ಜಿಡಿಪಿ ದರ ಕಡಿಮೆಯಾಗಿರುವುದು ತಾತ್ಕಾಲಿಕವಾಗಿದ್ದು ಮುಂದಿನ ದಿನಗಳಲ್ಲಿ ಬೆಳವಣಿಗೆ ಉತ್ತಮವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಜಾಗತಿಕ ಆರ್ಥಿಕ ಹಿನ್ನೆಡೆಯ ನಡುವೆಯೂ ಭಾರತ ವಿಶ್ವದಲ್ಲೇ 5ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಮುಂದಿನ ದಿನಗಳಲ್ಲಿ ಭಾರತ ಆರ್ಥಿಕವಾಗಿ ಮತ್ತಷ್ಟು ಪ್ರಗತಿ ಕಾಣಲಿದೆ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಧಾನಿ ನರೇಂದ್ರಮೋದಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.

      ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವನ್ನಾಗಿಸುವ ಹೆಬ್ಬಯಕೆಯನ್ನು ಹೊಂದಿದ್ದಾರೆ. ಇದು ಈಡೇರಲು ವೃತ್ತಿಪರರಾದಂತಹ ನಿಮ್ಮಂತಹ ಸಂಸ್ಥೆಗಳ ಪಾತ್ರವು ಮಹತ್ವದಿದೆ ಎಂದು ಅವರು ಹೇಳಿದರು.ಪ್ರಧಾನಿ ನರೇಂದ್ರಮೋದಿ ಅವರು 2014ರಲ್ಲಿ ನನಗೆ ಆಶೀರ್ವಾದ ಮಾಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ಕಳೆದ ಐದೂವರೆ ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತವನ್ನು ನೀಡಿ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

      ಸಾಮಾಜಿಕ ಅಭಿವೃದ್ಧಿಯಾಗದೆ ಆರ್ಥಿಕಾಭಿವೃದ್ಧಿ ಸಾಧ್ಯವಿಲ್ಲ, ಹಾಗಾಗಿಯೇ ಕೇಂದ್ರ ಸರ್ಕಾರ ಸಾಮಾಜಿಕ ಅಭಿವೃದ್ಧಿಗೂ ಒತ್ತು ನೀಡಿದೆ. ಎಲ್ಲ ವರ್ಗದ, ಬಡವರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.ವೃತ್ತಿಪರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳೂ ಸಾಮಾಜಿಕ ಅಭಿವೃದ್ಧಿಯತ್ತ ಗಮನ ನೀಡಬೇಕು. ಸಿಎಸ್‌ಆರ್ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಕಂಪನಿ ಸಂಸ್ಥೆಗಳಿಗೆ ಕರೆ ನೀಡಿದರು.

ಭ್ರಷ್ಟಾಚಾರದ ಇಳಿಮುಖ

     ದೇಶದಲ್ಲಿ ನೋಟು ಅಮ್ಯಾನೀಕರಣದ ಬಳಿಕ ಕಪ್ಪು ಹಣ ಅವ್ಯವಹಾರವನ್ನು ತಡೆಗಟ್ಟಾಗಲಾಗಿದ್ದು ದೇಶದಲ್ಲಿ ಭ್ರಷ್ಟಾಚಾರದ ಪ್ರಮಾಣ ಇಳಿಮುಖವಾಗಿದೆ ನೋಟು ಅಮ್ಯಾನೀಕರಣದ ಬಳಿಕ ದೇಶದಲ್ಲಿ ಒಂದೇ ಒಂದು ಹಗರಣಗಳು ನಡೆದಿಲ್ಲ ಎಂದು ಅವರು ತಿಳಿಸಿದರು.

    ದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಆರ್ಥಿಕ ಶಿಸ್ತು ತರಲಾಗಿದೆ.ಜಿಎಸ್‌ಟಿ ಅನುಷ್ಠಾನದ ಬಳಿಕ ದೇಶ ಹಣಕಾಸು ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿದೆ ಕಳೆದ ಐದೂವರೇ ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿ ಪಡಿಸುವಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ದೇಶದ ಕಡೆಗೆ ವಿಶ್ವವೇ ಎದುರು ನೋಡುವಂತಾಗಿದೆ ಎಂದು ಅವರು ಹೇಳಿದರು.

     ದೇಶದಲ್ಲಿ ಉತ್ತಮ ಆಡಳಿತದಿಂದಾಗಿ ಇಂದು ಸಾಕಷ್ಟು ಅಭಿವೃದ್ಧಿ ಪ್ರಗತಿಯ ಹಾದಿಯಲ್ಲಿ ಸಾಗಿದೆ. ಕೆಲವು ಸಣ್ಣ ಪುಟ್ಟ ಲೋಪದೋಷಗಳು ತಾತ್ಕಾಲಿಕವಾದದ್ದು ಮುಂದಿನ ದಿನಗಳಲ್ಲಿ ಜಿಡಿಪಿ ಬೆಳವಣಿಗೆ ಏರುಗತಿಯಲ್ಲಿ ಆಗಲಿದೆ ಎಂದರು.

ಅಭಿವೃದ್ಧಿಗೆ ಒತ್ತು

     ಸಾಮಾಜಿಕ ಅಭಿವೃದ್ಧಿಯಾಗದೆ ಆರ್ಥಿಕಾಭಿವೃದ್ಧಿ ಸಾಧ್ಯವಿಲ್ಲ, ಹಾಗಾಗಿಯೇ ಕೇಂದ್ರ ಸರ್ಕಾರ ಸಾಮಾಜಿಕ ಅಭಿವೃದ್ಧಿಗೂ ಒತ್ತು ನೀಡಿದೆ. ಎಲ್ಲ ವರ್ಗದ, ಬಡವರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.

     ವೃತ್ತಿಪರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳೂ ಸಾಮಾಜಿಕ ಅಭಿವೃದ್ಧಿಯತ್ತ ಗಮನ ನೀಡಬೇಕು. ಸಿಎಸ್‌ಆರ್ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಕಂಪನಿ ಸಂಸ್ಥೆಗಳಿಗೆ ಕರೆ ನೀಡಿ ಭಾರತೀಯ ವೆಚ್ಚ ಲೆಕ್ಕಿಗರು ದೇಶವನ್ನು ಆರ್ಥಿಕ ಶಿಸ್ತಿನತ್ತ ಕೊಂಡ್ಯೋಯಲು ಶ್ರಮ ವಹಿಸಬೇಕು ಎಂದು ಅವರು ಹೇಳಿದರು.

    ಸಮಾರಂಭದಲ್ಲಿ ಬೆಂಗಳೂರು ಘಟಕದ ಅಧ್ಯಕ್ಷ ಎಚ್.ಆರ್.ಶ್ರೀಪಾದ, ಮೈಸೂರು ಘಟಕದ ಅಧ್ಯಕ್ಷ ಎಂ.ಅಶೋಕ್ ಕುಮಾರ್, ಎಸ್.ಐ.ಆರ್.ಸಿ. ಖಜಾಂಚಿ ವಿಶ್ವನಾಥ್ ಆರ್.ಭಟ್, ಮತ್ತಿತರರು ಉಪಸ್ಥಿತರಿದ್ದರು.ಸಮಾರಂಭದಲ್ಲಿ ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಅಧ್ಯಕ್ಷ ಬಲ್ವಿಂಧರ್ ಸಿಂಗ್, ಬೆಂಗಳೂರು ವಿಭಾಗದ ಅಧ್ಯಕ್ಷ ಹೆಚ್.ಆರ್. ಶ್ರೀಪಾದ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap