ಮಿಡಿಗೇಶಿ
ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿಗೆ 2018-19 ನೇ ಸಾಲಿನ ಯೋಜನೆಯಡಿಯಲ್ಲಿ ಸಾಮಾನ್ಯವರ್ಗದ ವಾಸಕ್ಕೆ ಮನೆಯಿಲ್ಲದವರಿಗೆ ಘನ ಸರ್ಕಾರದಿಂದ ಮನೆಗಳ ಮಂಜೂರಾತಿಯ (ಬೇಡಿಕೆ) 2196 ಬೇಡಿಕೆಯಿಟ್ಟಿದ್ದು ಸರ್ಕಾರ ಈಗಾಗಲೇ 1160 ಮನೆಗಳ ಮಂಜೂರಾತಿಗೆ ಅನುಮೋದನೆ ದೊರೆತಿರುತ್ತದೆ. ಅಂಬೇಡ್ಕರ್ ಯೋಜನೆಯಡಿಯಲ್ಲಿ 800 ಮನೆಗಳ ಗುರಿಯಿದ್ದು ತಾಲ್ಲೂಕು ಪಂಚಾಯಿತಿಯ ಅನುಮೋದನೆಯಾಗಬೇಕಿದೆ. ಇದು ಅಲ್ಲದೆಯೇ ಅಂಬೇಡ್ಕರ್ ಮನೆಗಳ ಅವಶ್ಯಕತೆಯಿರುವ ಎಷ್ಠೇ ಫಲಾನುಭವಿಗಳಿದ್ದರೂ ಸಹ ಮನೆಗಳ ಮಂಜೂರಾತಿ ಮಾಡುತ್ತಾರೆ.
1160 ಮನೆಗಳು ಸಾಮಾನ್ಯ ವರ್ಗದ ಮನೆಗಳ ಮಂಜೂರಾತಿ ಆದೇಶ ಜಾರಿಯಾಗಿದ್ದು ಎಂಟತ್ತು ದಿನಗಳ ಕಾಲಾವಧಿಯಲ್ಲಿ ಇನ್ನು 837 ಮನೆಗಳ ಮಂಜೂರಾತಿ ಆದೇಶ ಹೊರಬೀಳಲಿದೆ. ಸದರಿ ಮನೆಗಳ ಮಂಜೂರಾತಿ ಆದೇಶಗಳು ಫಲಾನುಭವಿಗಳಿಗೆ ಹಂಚಿಕೆಯಾಗುತ್ತಿದ್ದು ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ.
ತಾಲ್ಲೂಕಿನ ಪುರವಾರ ಹೋಬಳಿಯಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಫಲಾನುಭವಿಗಳಿಗೆ, ಐ.ಡಿ.ಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ, ಸಿಂಗನಹಳ್ಳಿ, ಬ್ಯಾಲ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯ ಮನೆ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಗಿರುತ್ತದೆ. ಘನ ಸರ್ಕಾರದಿಂದ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಅಲ್ಪಸಂಖ್ಯಾತರಲ್ಲದವರಿಗೂ ಮನೆಗಳ ಮಂಜೂರಾತಿ ಬಂದಿದ್ದು ಸರಿಯಷ್ಟೆ, ಅಲ್ಪ ಸಂಖ್ಯಾತ ಜನಾಂಗದವರಿಲ್ಲದ ಗ್ರಾಮಗಳನ್ನು ಬಿಟ್ಟು ಅಲ್ಪಸಂಖ್ಯಾತರ ಜನಾಂಗವಿರುವ ಗ್ರಾಮಗಳಿಗೆ ಮಂಜೂರಾತಿ ಮನೆಗಳ ವರ್ಗಾವಣೆಯನ್ನು ಮಾಡಲಾಗುತ್ತದೆ.
(ಮರು ಬದಲಾವಣೆ), ಮರು ಬದಲಾವಣೆ ಬಗ್ಗೆ ಬೋರ್ಡ್‍ಗೆ ಪ್ರಪೋಸಲ್ ತಾಲ್ಲೂಕು ಪಂಚಾಯಿತಿಯಿಂದ ಕಳುಹಿಸಲಾಗುತ್ತದೆ. 237 ಮನೆಗಳು ತಾಲ್ಲೂಕು ಪಂಚಾಯಿತಿ ಲಾಗಿನ್ ನಲ್ಲಿವೆ. 600 ಮನೆಗಳು ಜಿಲ್ಲಾಪಂಚಯಿತಿಯ ಲಾಗಿನ್‍ನಲ್ಲಿರುತ್ತವೆ. ಆದ್ದರಿಂದ ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರಗಳನ್ನು ತಾಲ್ಲೂಕು ಪಂಚಾಯಿ ವತಿಯಿಂದ ನೀಡಲಿದ್ದು ಫಲಾನುಭವಿಗಳು ಶೀಘ್ರದಲ್ಲಿ ಮನೆಗಳ ನಿರ್ಮಾಣ ಮಾಡಿಕೊಳ್ಳಲು ಮುಂದಾಗಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








