ಬೀಜಿಂಗ್: 

ಯಾವುದೇ ಕಾರಣಗಳಿದ್ದೇ ಸುಮ್ಮ ಸುಮ್ಮನೇ ಭಾರತದ ಗಡಿ ಅತಿಕ್ರಮ ಪ್ರವೇಶಿಸುವ ಚೀನಾ ಸೇನೆಗೆ ಸೇನಾ ಮುಖ್ಯಸ್ಥ ಕ್ಸಿ ಜಿನ್‌ಪಿಂಗ್ ಯುದ್ಧಕ್ಕೆ ಸಿದ್ಧರಾಗಿರಿ ಎಂದು ಆದೇಶಿಸಿದ್ದಾರೆ.
ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಕೊಳ್ಳುತ್ತಿದು ಹಾಗೂ ತುರ್ತು ಯುದ್ಧಕ್ಕಾಗಿ ಸೇನೆ ಯಾವಾಗಲೂ ತಯಾರಿರುವಂತೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಜಿನ್ಪಿಂಗ್ ತಮ್ಮ ಅಧೀನದಲ್ಲಿರುವ ಚೀನಾ ಸೇನೆಯ ಕಾರ್ಯತಂತ್ರ ಮತ್ತು ಯುದ್ಧತಂತ್ರದ ಯೋಜನೆಯನ್ನು ಹೆಚ್ಚಿಸಲು ಹಾಗೂ ಜಂಟಿ ಕಾರ್ಯಾಚರಣೆ ಸಾಮರ್ಥ್ಯ ಮತ್ತು ತುರ್ತು ಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಸಿದ್ಧತೆಗಳನ್ನು ಹೆಚ್ಚಿಸಲು ಸೇನೆಗೆ ಆದೇಶಿಸಲಾಗಿದೆ ಎಂದು ಸರ್ಕಾರಿ ಒಡೆತನದ ಚೀನಾ ಡೈಲಿ ನ್ಯೂಸ್ ಪೇಪರ್ ವರದಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
