ಗಿಡ ಮರ ಬೆಳೆಸಿ, ಜೀವ ಸಂಕುಲ ಉಳಿಸಿ

ಹುಳಿಯಾರು:

     ಅಭಿವೃದ್ದಿಯ ಹೆಸರಲ್ಲಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವ ಮರಗಳ ಮಾರಣ ಹೋಮ ನಿಂತು, ಪ್ರತಿಯೊಬ್ಬರಲ್ಲೂ ಗಿಡಮರ ಬೆಳೆಸುವ ಮನೋಭಾವ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಆಗಲಿದೆ ಎಂದು ಕೆಂಕೆರೆ ಗ್ರಾಪಂ ಅಧ್ಯಕ್ಷ ಆಶಾಉಮೇಶ್ ಅಭಿಪ್ರಾಯಪಟ್ಟರು.

     ಕೆಂಕೆರೆ ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕೆಂಕೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ವಕೀಲರಾದ ಕೆ.ಆರ್.ಚನ್ನಬಸವಯ್ಯ ಅವರು ಮಾತನಾಡಿ ವಾತಾವರಣದ ಸಮತೋಲನ ಕಾಪಾಡುವಲ್ಲಿ ಗಿಡ ಮರಗಳು ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ಎಲ್ಲರೂ ಗಿಡ ಮರ ರಕ್ಷಣೆಗೆ ಯತ್ನಿಸಬೇಕು. ಸರ್ಕಾರ ಹಸಿರು ಹೊನ್ನು ಮತ್ತು ಕೃಷಿ ಅರಣ್ಯ ಯೋಜನೆಯಡಿ ಗಿಡಗಳನ್ನು ನೀಡುತ್ತಿದ್ದು, ಕೃಷಿಕರು ಸಸಿ ಪಡೆದು ಕೃಷಿ ಭೂಮಿಯ ಅಂಚಿನಲ್ಲಿ ಬೆಳೆಸಿ, ಲಾಭಗಳಿಸುವ ಜತೆಗೆ ಪರಿಸರ ಸಂರಕ್ಷಣೆಯ ಕೊಡುಗೆ ನೀಡಬೇಕು ಎಂದರು.

      ವಕೀಲರಾದ ಕೆ.ಸಿ.ವಿಶ್ವನಾಥ್ ಅವರು ಮಾತನಾಡಿ ಗಿಡ ಮರ ಬೆಳೆಸುವ, ಪರಿಸರ ಉಳಿಸುವ, ವನ್ಯಪ್ರಾಣಿಗಳ ಸಂರಕ್ಷಿಸುವ ನಿಟ್ಟಿನಲ್ಲಿ ತಮ್ಮ ಜೀವನವಿಡೀ ಹೋರಾಟ ನಡೆಸಿರುವ ಮೇಧಾ ಪಾಟ್ಕರ್, ಪಾಂಡುರಂಗ ಹೆಗಡೆ, ಸಾಲುಮರದ ತಿಮ್ಮಕ್ಕ ಅವರ ಸಾಧನೆ ನಮಗೆ ಆದರ್ಶವಾಗಿದ್ದು, ಅವರ ದಾರಿಯಲ್ಲಿ ನಡೆದು ಪರಿಸರ ಉಳಿಸುವ ಕೆಲಸ ಕೈಗೊಳ್ಳಬೇಕಿದೆ ಎಂದರು.

      ಈ ಸಂದರ್ಭದಲ್ಲಿ ಗ್ರಾಪಂ ಪಿಡಿಓ ತೇಜಸ್ವಿ, ಶಿಕ್ಷಕರಾದ ಕಾಂತರಾಜು, ಜಯಣ್ಣ, ತಮ್ಮಯ್ಯ, ಕುಮಾರ್, ಸೇರಿದಂತೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಪಂಚಾಯಿತಿ ಸದಸ್ಯರುಗಳು, ಸಿಬ್ಬಂಧಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link