ಕೊರಟಗೆರೆ ಯಲ್ಲಿ ಹೆಣ್ಣು ಮಗುವಿಗೆ ಕಲ್ಲು ಕಟ್ಟಿ ಬಾವಿಗೆಸೆದ ಪಾಪಿಗಳು….!!!

ಕೊರಟಗೆರೆ

       ಲೋಕಜ್ಞಾನವಿಲ್ಲದ ಹಸುಗೂಸನ್ನು ಕಲ್ಲುಕಟ್ಟಿ ಬಾವಿಗೆ ಎಸೆದಿರುವಂತಹ ಹೃದಯ ವಿದ್ರ್ರಾವಕ ಘಟನೆ ಸೋಮವಾರ ಕೊರಟಗೆರೆ ತಾಲ್ಲೂಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ

      ತಾಲ್ಲುೂಕಿನ ಕೋಳಾಲ ಹೋಬಳಿಯ ಟಿ.ವೆಂಕಟಾಪುರ ಗ್ರಾಮದ ಪುಟ್ಟಚೌಡಯ್ಯಗೆ ಸೇರಿದ ಬಾವಿಯಲ್ಲಿ ಈ ಘಟನೆಜರುಗಿದ್ದು, 3 ವರ್ಷದ ಹೆಣ್ಣು ಅಸುಗೂಸು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 3-4 ದಿನಗಳ ಹಿಂದೆ ಈ ಘಟನೆ ಜರುಗಿರಬಹುದು ಎನ್ನಲಾಗಿದೆ.
ಹೆಣ್ಣುಗೂಸಿಗೆ ದಾರದಿಂದ ಭದ್ರವಾಗಿ ಕೈಕಾಲು ಆಡದಂತೆ ಕಟ್ಟಲಾಗಿ ಮಗು ತೇಲಬಾರದು ಎಂಬ ದೃಷ್ಟಿಯಿಂದ ಮಗುವಿನ ಹೊಟ್ಟೆಯ ಭಾಗಕ್ಕೆ ಬಟ್ಟೆಯಿಂದ ತೂಕವಾದ ಕಲ್ಲಿನಿಂದ ಕಟ್ಟಿ, ಬಾವಿಗೆ ಎಸೆದು ಕೊಲೆ ಮಾಡಲಾಗಿದೆ ಎಂದು ಊಹಿಸಲಾಗಿದೆ.

          ಅನೈತಿಕ ಸಂಬಂಧ ಇಲ್ಲವೇ ಯಾವುದೋ ವೈಯುಕ್ತಿಕ ದ್ವೇಷದಿಂದ ಈ ಕೊಲೆ ನಡೆದಿರಬಹುದೆಂದು ಊಹಿಸಲಾಗಿದ್ದು, ಸ್ಥಳೀಯವಾಗಿ ಯಾವುದಾದರೂ ಮಗು ಕಾಣೆಯಾಗಿರುವ ಬಗ್ಗೆ ಅಂಗನವಾಡಿ ಮತ್ತು ತಾಲ್ಲೂಕಿನ ಇತರೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲಾಗಿದೆ. ಮಗು ಹೊರಗಿನದಾಗಿದೆ ಎಂದು ಶಂಕಿಸಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

         ಪ್ರಾರಂಭಿಕ ಹಂತದಲ್ಲಿ ಮಗುವಿನ ಶವ ತೇಲಿದ್ದನ್ನು ಕಂಡ ಪೊಲೀಸರು ತಾಯಿ ಮಗು ಇಬ್ಬರು ಬಟ್ಟೆ ಕಟ್ಟಿಕೊಂಡು ಸಾವನ್ನಪ್ಪಿರಬಹುದೆಂದು ಊಹಿಸಿ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಲಾಗಿ, ಮಗುವನ್ನು ಉದ್ದೇಶಪೂರ್ವಕವಾಗಿ ಎಸೆದು ಕೊಲೆ ಮಾಡಿರಬಹುದು ಎನ್ನಲಾಗಿದೆ.

          ಘಟನಾ ಸ್ಥಳಕ್ಕೆ ತುಮಕೂರು ಎಸ್‍ಪಿ ಡಾ.ದಿವ್ಯಾಗೋಪಿನಾಥ್, ಮಧುಗಿರಿ ಡಿವೈಎಸ್‍ಪಿ ಧರಣೀಶ್, ಕೊರಟಗೆರೆ ಪ್ರಭಾರ ಸಿಪಿಐ ಪ್ರಭಾಕರ, ಕೋಳಾಲ ಪಿಎಸೈ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

 

Recent Articles

spot_img

Related Stories

Share via
Copy link