ಬೆಂಗಳೂರು
ಮನೆಕೆಲಸ ಮಾಡುತ್ತಿದ್ದ ಬಾಲಕಿಯೊಬ್ಬಳು ಮಾಲೀಕರ ಮನೆಯ ಮುಂಭಾಗದ ಸಂಪ್‍ನಲ್ಲಿ ಮುಳುಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರು ಮೂಲದ ಪಾರ್ವತಮ್ಮ ಮತ್ತು ಬುಗ್ಗಪ್ಪ ದಂಪತಿಯ ಪುತ್ರಿ ಜ್ಯೋತಿ(12) ಎಂದು ಮೃತ ಬಾಲಕಿಯನ್ನು ಗುರುತಿಸಲಾಗಿದೆ.ರಾಜಗೋಪಾಲನಗರದ ಅಲ್ಪನಾಥ್ ಎಂಬುವರ ಮನೆಯ ಸಂಪ್‍ನಲ್ಲಿ ಮಂಗಳವಾರ ಬೆಳಿಗ್ಗೆ ಜ್ಯೋತಿಯ ಶವ ಪತ್ತೆಯಾಗಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಅಲ್ಪನಾಥ್ ಮನೆಯಲ್ಲಿ ಹಲವು ದಿನಗಳಿಂದ ಮನೆ ಕೆಲಸ ಮಾಡಿಕೊಂಡಿದ್ದ ಬಾಲಕಿಯ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಲಕಿ ಸಂಪ್‍ನಲ್ಲಿ ಬಿದ್ದಿರುವುದು ನೋಡಿದ ಆಕೆಯ ಆರು ವರ್ಷದ ತಂಗಿ ಮನೆ ಮಾಲೀಕನನ್ನು ಸಂಪ್‍ನ ಬಾಗಿಲು ತೆರೆಯುವಂತೆ ಕೂಗಿ ಕರೆದಿದ್ದಾಳೆ. ಆದರೆ ಮಾಲೀಕ ಬಾಗಿಲು ತೆರೆಯಲು ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಜ್ಯೋತಿ ಅವರ ತಾಯಿ ಪಾರ್ವತಮ್ಮ ಬಂದು ಗಲಾಟೆ ಮಾಡಿದ್ದು, ತಕ್ಷಣವೇ ಆಕೆಯ ಮೈದುನ ಕೂಡ ಸ್ಥಳಕ್ಕಾಗಮಿಸಿ ಮಾಲೀಕನನ್ನು ತಳ್ಳಿ ಸಂಪ್‍ನ ಬಾಗಿಲು ತೆರೆದು ಶವವನ್ನು ಹೊರತೆಗೆದಿದ್ದಾರೆ ಎಂದು ಹೇಳಲಾಗಿದೆ.
ಪೆÇಲೀಸರು ಸ್ಥಳಕ್ಕಾಗಮಿಸಿ ಮಾಲೀಕ ಅಲ್ಪನಾಥ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಆತ ನೀಡಿರುವ ಹೇಳಿಕೆಯಲ್ಲಿ ನಾನು ನೋಡುವ ವೇಳೆಗಾಗಲೇ ಬಾಲಕಿ ಮೃತಪಟ್ಟಿದ್ದಳು. ಹಾಗಾಗಿ ಪೊಲೀಸರೇ ಬಂದು ಶವ ಹೊರತೆಗೆಯಲಿ ಎಂಬ ಕಾರಣಕ್ಕಾಗಿ ಬಾಗಿಲು ತೆರೆಯಲಿಲ್ಲ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜ್ಯೋತಿ ಪೋಷಕರು ಅಲ್ಪನಾಥ್‍ನೇ ತಮ್ಮ ಮಗಳನ್ನು ಕೊಲೆ ಮಾಡಿ ಸಂಪ್‍ನಲ್ಲಿ ಹಾಕಿದ್ದಾನೆ.ನಮಗೆ ಆಕೆಯನು ಉಳಿಸಿಕೊಳ್ಳಲು ಅವಕಾಶ ಕೊಡಲಿಲ್ಲ. ಸಂಪ್‍ನಲ್ಲಿ ಕೇವಲ 6 ರಿಂದ 7 ಅಡಿ ನೀರಿದ್ದು, ಅದರಲ್ಲಿ ಬಾಲಕಿ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ. ಇದು ಕೊಲೆ ಎಂದು ಪೋಷಕರು ಆರೋಪಿಸಿ ದೂರು ನೀಡಿ ಮಾಲೀಕನ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








