ಪಿಯುಸಿ ಫಲಿತಾಂಶ : ಪ್ರತಿವರ್ಷದಂತೆ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ

ಬೆಂಗಳೂರು :

  ರಾಜ್ಯದಾದ್ಯಂತ ಹಬ್ಬಿರುವ ಕೊರೋನವೈರಸ್ ಸಾಂಕ್ರಾಮಿಕ ರೋಗದ ನಡುವೆ ಯಶಸ್ವಿಯಾಗಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಣೆಯಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

   ಇನ್ನೂ ಶೇಕಡ 61.80ರಷ್ಟು ಫಲಿತಾಂಶ 2019 ಮತ್ತು 20 ನೇ ಸಾಲಿನಲ್ಲಿ ಬಂದಿದೆ.ಇನ್ನು ರಾಜ್ಯದಲ್ಲಿ 1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು, ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಇದರಲ್ಲಿ ಐದು ಲಕ್ಷದ 5,56267 ವಿದ್ಯಾರ್ಥಿಗಳು ಹೊಸಬರಾಗಿದ್ದಾರೆ.

  ಸುಮಾರು 70 ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದ್ದು, 3,84,947ವಿದ್ಯಾರ್ಥಿಗಳುಉತ್ತೀರ್ಣರಾಗಿದ್ದಾರೆ, 91,025 ವಿದ್ಯಾರ್ಥಿಗಳು ಪುನರಾವರ್ತಿತ ಪರೀಕ್ಷೆಯನ್ನು ಬರೆದವರಾಗಿದ್ದಾರೆ. ಇದರಲ್ಲಿ 25,602 ಎರಡು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲಾವಾರು ಫಲಿತಾಂಶ:-

         ಉಡುಪಿ – ಶೇ. 90.71,ದಕ್ಷಿಣ ಕನ್ನಡ- ಶೇ.90.71,ಕೊಡಗು- ಶೇ.81.53, ಉತ್ತರ ಕನ್ನಡ- ಶೇ.80.97 ,ಚಿಕ್ಕಮಗಳೂರು- ಶೇ.79.11,ಬೆಂಗಳೂರು ದಕ್ಷಿಣ- ಶೇ. 77.56,ಬೆಂಗಳೂರು ಉತ್ತರ – ಶೇ.75.54, ಬಾಗಲಕೋಟೆ – ಶೇ.74.59,ಚಿಕ್ಕಬಳ್ಳಾಪುರ- ಶೇ.73.74,ಶಿವಮೊಗ್ಗ- ಶೇ.72.19,ಹಾಸನ – ಶೇ.70.18,ಚಾಮರಾಜನಗರ- ಶೇ.69.29,ಬೆಂಗಳೂರು ಗ್ರಾಮಾಂತರ- ಶೇ.69.02,ಹಾವೇರಿ- ಶೇ.68.01,ಮೈಸೂರು- ಶೇ.67.98,ಕೋಲಾರ ಶೇ.67.42ಧಾರವಾಡ- ಶೇ.67.31,ಬೀದರ್ – ಶೇ.64.61,ದಾವಣಗೆರೆ- ಶೇ.64.09,ಚಿಕ್ಕೋಡಿ- ಶೇ.63.88,ಮಂಡ್ಯ -ಶೇ.63.82,ಗದಗ – ಶೇ.63,ತುಮಕೂರು- ಶೇ.62.26,ಬಳ್ಳಾರಿ- ಶೇ.62.02,ರಾಮನಗರ- ಶೇ.60.96,ಕೊಪ್ಪಳ- ಶೇ.60.09,ಬೆಳಗಾವಿ- ಶೇ.59.07,ಯಾದಗಿರಿ- ಶೇ.58.38,ಕಲಬುರಗಿ- ಶೇ. 58.27,ಚಿತ್ರದುರ್ಗ- ಶೇ.56.08,ರಾಯಚೂರು- ಶೇ.56.22
ವಿಜಯಪುರ- ಶೇ.54.22,

  ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಈ ಎರಡು ಜಿಲ್ಲೆಗಳಲ್ಲಿ ಶೇ. 90.75 ರಷ್ಟು ಫಲಿತಾಂಶ ಬಂದಿದೆ. ವಿಜಯಪುರ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ. ಇನ್ನೂ ಕಲ್ಪತರು ನಾಡೆಂದೇ ಪ್ರಸಿದ್ಧಿಯಾಗಿರುವ  ತುಮಕೂರು- ಶೇ.62.26 ಪಡೆಯುವ ಮೂಲಕ 23ನೇ ಸ್ಥಾನಕ್ಕರ ತೃಪ್ತಿ ಪಟ್ಟುಕೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap