ತಿಪಟೂರು
ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಚುನಾವಣಾ ಅಕ್ರಮಗಳು ಕಂಡು ಬಂದರೆ 1950 ಕ್ಕೆ ಕರೆಮಾಡಿ ದೂರು ಸಲ್ಲಿಸಬಹುದು ಮತ್ತು ಅವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದೆಂದು ಉಪವಿಭಾಗಾಧಿಕಾರಿ ಪೂವಿತ ತಿಳಿಸಿದರು.
ನಗರ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿದ್ದ ಪತ್ರಿಕಾಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಾಗಬೇಕೆಂದರೆ ಚುನಾವಣೆ ಅತಿ ಮುಖ್ಯ, ಆದರೆ ಚುನಾವಣೆ ಸುಸೂತ್ರವಾಗಿ ನಡೆಯಬೇಕೆಂದರೆ ಪ್ರಜೆಗಳು ಮುಕ್ತವಾಗಿ, ನಿರ್ಭೀತಿಯಿಂದ, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದಂತೆ ಮತಚಲಾವಣೆ ಮಾಡಿದರೆ ಸುಭದ್ರ ಸರ್ಕಾರ ನಿರ್ಮಾಣವಾಗುತ್ತದೆ. ಅದಕ್ಕಾಗಿಯೇ ಚುನಾವಣಾ ನೀತಿಸಂಹಿತೆಯು ಜಾರಿಯಲ್ಲಿದೆ. ಚುನಾವಣಾ ಅಕ್ರಮಗಳು ಕಂಡುಬಂದರೆ ಬಿ.ಎಸ್.ನೇಗಿಯವರನ್ನು ಮೊಬೈಲ್ ಸಂಖ್ಯೆ6364368343 ಗೆ ಕರೆಮಾಡಿ ದೂರ ಸಲ್ಲಿಸಬಹುದು.
ಮದುವೆ ಮುಂತಾದ ಸಮಾರಂಭಗಳಿಗೆ ಕಾರ್ಯಕ್ರಮಗಳಿಗೆ ಇದು ಅನ್ವಯಿಸುವುದಿಲ್ಲ. 10 ರಿಂದ 50 ಸಾವಿರಗಳನ್ನು ಸಾಗಿಸುವಾಗ ಅದಕ್ಕೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕೆಂದು ತಿಳಿಸಿದರು.
ಒಬ್ಬ ಅಭ್ಯರ್ಥಿಗೆ 70 ಲಕ್ಷ ಹಣವನ್ನು ಚುನಾವಣಾ ಖರ್ಚಿಗಾಗಿ ಬಳಸಬಹುದು, ಅಭ್ಯರ್ಥಿಗಳು ಚುನಾವಣಾ ಪ್ರಚಾರಮಾಡಲು 48 ಗಂಟೆಗಳ ಮೊದಲು ಸುವಿಧ ಆಪ್‍ನಲ್ಲಿ ಅರ್ಜಿಸಲ್ಲಿಸಬೇಕು. ಇದರಲ್ಲೇ ಎಲ್ಲಾ ಇಲಾಖೆಗಳು ಅನುಮತಿಯನ್ನು ನೀಡುತ್ತವೆಂದು ತಿಳಿಸಿದರು.
ತಾಲ್ಲೂಕಿನಲ್ಲಿ ಜನವರಿ 16ರಲ್ಲಿ ಇದ್ದಂತೆ 88559 ಪುರುಷರು ಮತ್ತು 92108 ಮಹಿಳಾ ಮತದಾರಿದ್ದಾರೆ. ಮಾರ್ಚ್ 28ರಂದು ಇತ್ತೀಚಿನ ಅಂಕಿಅಂಶಗಳನ್ನು ತಿಳಿಸಲಾಗುವುದೆಂದು ತಿಳಿಸಿದರು. ಪತ್ರಿಕಾಘೋಷ್ಟಿಯಲ್ಲಿ ತಾಲ್ಲೂಕು ದಂಡಾಧಿಕಾರಿ ಆರತಿ.ಬಿ. ಉಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








