ಚೇಳೂರು
ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರದ ಆದೇಶದ ಮೇರೆಗೆ ರೈತರ ಸಾಲಮನ್ನಾ ಸ್ವಯಂ ಘೋಷಣಾ ಅರ್ಜಿಯನ್ನು ಸೂಕ್ತ ದಾಖಲೆಯೊಂದಿಗೆ ನಾಡಕಚೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ನೀಡಿ ಸೌಕರ್ಯವನ್ನು ಪಡೆಯಬಹುದು ಎಂದು ಚೇಳೂರಿನ ಉಪತಹಸೀಲ್ದಾರ್ ಬಿ.ಕೆ.ವೆಂಕಟರಂಗನ್ ಹೇಳಿದರು.
ಚೇಳೂರಿನ ನಾಡ ಕಚೇರಿಯಲ್ಲಿ ಸ್ವೀಕೃತ ಕೇಂದ್ರದ ಆರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಸರ್ಕಾರದ ಯೋಜನೆಯಾಗಿದ್ದು ಅರ್ಹ ರೈತರು ಸೂಕ್ತ ದಾಖಲೆಗಳನ್ನು ನಾಡ ಕಚೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ನೀಡಿ, ದಾಖಲು ಮಾಡಿಸಿ, ಈ ಸೌಕರ್ಯವನ್ನು ರೈತರಿಗಾಗಿ ಮಾಡಿರುವುದು ಇದರ ಸದುಪಯೋಗವನ್ನು ಅರ್ಹ ರೈತರು ಪಡೆಯಿರಿ ಎಂದರು.
ಈ ಕಾರ್ಯಕ್ರಮದಲ್ಲಿ ಕಂದಾಯಾಧಿಕಾರಿ ನಟರಾಜ್, ಗ್ರಾಮಲೆಕ್ಕಧಿಕಾರಿಗಳಾದ ಸುಮತಿ, ಪ್ರಸನ್ನಕುಮಾರ್, ತಾರಚಂದ್ರ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
