ಚಳ್ಳಕೆರೆ
ನಗರದ 3ನೇ ವಾರ್ಡ್ ವ್ಯಾಪ್ತಿಯ ಪಾವಗಡ ರಸ್ತೆಯ ಸಾಮೀಲ್ ಹಿಂಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆಗೀಡಾಗಿದ್ದು, ಕೂಡಲೇ ಈ ಭಾಗದಲ್ಲಿ ಚರಂಡಿ ನಿರ್ಮಿಸಿಕೊಡುವಂತೆ ವಾರ್ಡ್ ಸದಸ್ಯ ಆರ್.ರುದ್ರನಾಯಕ ನಗರಸಭೆಯನ್ನು ಒತ್ತಾಯ ಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮತ್ತು ಸಹಾಯಕ ಇಂಜಿನಿಯರ್ ವಿನಯ್ ಹಾಗೂ ಸಿಬ್ಬಂದಿ ಸೋಮವಾರ ಸ್ಥಳ ತನಿಖೆ ನಡೆಸಿದರು. ನಗರಸಭೆ ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ಪೌರಾಯುಕ್ತ ಜೆ.ಟಿ.ಹನುಮಂತರಾಜು ಸ್ಥಳ ತನಿಖೆ ನಡೆಸುವ ಸಂದರ್ಭದಲ್ಲಿ ಪತ್ರಿಕೆಗೆ ಮಾಹಿತಿ ನೀಡಿ, ಇಲ್ಲಿ ಚರಂಡಿ ಅವಶ್ಯಕತೆ ಹೆಚ್ಚಿದ್ದು, ಹಳೇ ಟೌನ್ ವ್ಯಾಪ್ತಿಯ ಬಹುತೇಕ ಎಲ್ಲಾ ನೀರು ಈ ರಸ್ತೆ ಮೂಲಕವೇ ಇಲ್ಲಿನ ಹಳ್ಳಕ್ಕೆ ಸೇರುತ್ತದೆ. ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ಜನರಿಗೆ ತೊಂದರೆ ಯಾಗಿದೆ. ಚರಂಡಿಗಳ ಬದಿಯಲ್ಲಿ ಬೆಳೆದ ಗಿಡಗಳಿಂದ ಸೊಳ್ಳೆಯ ಕಾಟವೂ ಸಹ ಹೆಚ್ಚಿದ್ದು, ನೈರ್ಮಲ್ಯವೂ ಸಹ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ ಕುರಿತು ಯೋಜನೆಯನ್ನು ತಯಾರಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಸ್ಥಳದಲ್ಲಿ ಹಾಜರಿದ್ದ ನಗರಸಭಾ ಸದಸ್ಯ ಆರ್.ರುದ್ರನಾಯಕ ಮಾತನಾಡಿ, ನಗರದ ಮೂರನೇ ವಾರ್ಡ್‍ನಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಈ ಭಾಗದ ಕೆಲವು ರಸ್ತೆಗಳು ಹದಗೆಟ್ಟಿದ್ದು, ದುರಸ್ಥಿ ಪಡಿಸಿಬೇಕಿದೆ. ಇನ್ನೂ ಕೆಲವು ರಸ್ತೆಗಳಲ್ಲಿ ಲೈಟ್‍ಗಳ ಅಭಾವವಿದೆ, ನೀರಿನ ತೊಂದರೆ ನಿಯಂತ್ರಣದಲ್ಲಿದ್ದು, ವಾರ್ಡ್‍ನ ವಿವಿಧ ರಸ್ತೆಗಳಿಗೆ ಹೊಂದಿಕೊಂಡಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಚರಂಡಿಗಳನ್ನು ನಿರ್ಮಿಸಿಕೊಡುವಂತೆ ಪೌರಾಯುಕ್ತರನ್ನು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ