ಪಾವಗಡ
ತಾಲ್ಲೂಕಿನ ಗೌಡೇಟಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರ ಶಿಡ್ಲೆಕೋಣ ವಾಲ್ಮೀಕಿ ಗುರುಪೀಠದ ಸಂಜಯ ಕುಮಾರ್ ಸ್ವಾಮೀಜಿ ನೆರವೇರಿಸಿ, ರಾಜ್ಯ ಸಮ್ಮಿಶ್ರ ಸರ್ಕಾರ ಪ.ಜಾ ಮತ್ತು ಪ.ಪಂ ದ ಬಡ್ತಿ ಮೀಸಲಾತಿಯನ್ನು ಜಾರಿಗೊಳಿಸದಿದ್ದರೆ ರಾಜ್ಯದಾದ್ಯಂತ ಸರ್ಕಾರದ ವಿರುದ್ದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪ.ಪಂ. ಕ್ಕೆ 7.5% ಮೀಸಲಾತಿಯನ್ನು ನೀಡಿದ್ದು, ರಾಜ್ಯ ಸರ್ಕಾರ ಕೇವಲ 3% ಮೀಸಲಾತಿ ನೀಡುತ್ತಿದ್ದು, ರಾಜ್ಯ ಹೈಕೋರ್ಟ್ ಪ.ಪಂ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಸರ್ಕಾರ ಈ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾಲ್ಮೀಕಿ ಪುರಸ್ಕೃತರಾದ ನಾಯಕ ನೌಕರರ ಸಂಘದ ಅಧ್ಯಕ್ಷ ಎಂಜಿನಿಯರ್ ಅನಿಲ್ ಕುಮಾರ್ ರವರನ್ನು ವಾಲ್ಮೀಕಿ ಸಂಜಯ ಕುಮಾರ್ ಸ್ವಾಮೀಜಿ ಸೇರಿದಂತೆ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಾಯಕ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ, ಶಿಕ್ಷಕರಾದ ನಟರಾಜ್, ಪ್ರಕಾಶ್, ಕನ್ನಮೇಡಿ ಸುರೇಶ್, ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್, ಮುಖಂಡರುಗಳಾದ ಗ್ರಾ.ಪಂ ಸದಸ್ಯ ರಾಮಾಂಜಿ, ಮೂರ್ತಿ, ಉಗ್ರಪ್ಪ, ವೆಂಕಟೇಶ್, ಓಬಣ್ಣ, ಓಬಳೇಶಪ್ಪ, ನಾಗರಾಜಪ್ಪ, ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು.