ನಿರ್ಲಕ್ಷಿತ ಜನವಸತಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ : ಕೆ. ಶಿವಮೂರ್ತಿ

ತುಮಕೂರು

   ನೂರಾರು ವರ್ಷಗಳಿಂದ ಜನ ವಾಸಿಸುತ್ತಿರುವ ಗೊಲ್ಲರಹಟ್ಟಿ, ತಾಂಡ್ಯಾ, ವಾಡಿ, ದೊಡ್ಡಿ, ಪಾಳ್ಯ, ವಸ್ತಿ ಮುಂತಾದ ಹೆಸರಿನಲ್ಲಿ ಕರೆಯುವ ಜನವಸತಿ ಪ್ರದೇಶಗಳನ್ನು ಸರ್ಕಾರ ಕಂದಾಯ ಗ್ರಾಮಗಳಾಗಿ ಘೋಷಿಸಿ, ಅಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು. ಈ ಸಂಬಂಧ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಅನುಷ್ಠಾನಗೊಳಿಸಬೇಕು ಎಂದು ಮಾಜಿ ಸಚಿವ ಕೆ. ಶಿವಮೂರ್ತಿ ಒತ್ತಾಯಿಸಿದರು.

     ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ಅಗತ್ಯ ಸೌಲಭ್ಯ ನೀಡಿ, ಅವರ ಮಕ್ಕಳಿಗೆ ಶಿಕ್ಷಣ ದೊರಕಿಸಬೇಕು. ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಸಕಾರವನ್ನು ಆಗ್ರಹಿಸಿದರು.ಹಟ್ಟಿ, ತಾಂಡ್ಯಾ, ವಾಡಿ, ದೊಡ್ಡಿ, ಪಾಳ್ಯ, ವಸ್ತಿ, ಪಾಳ್ಯ ಹೆಸರಿನಲ್ಲಿ ರಾಜ್ಯದಲ್ಲಿ 67 ಸಾವಿರ ಜನವಸತಿಗಳಿವೆ. ತುಮಕೂರು ಜಿಲ್ಲೆಯಲ್ಲಿ 509 ಇಂತಹ ಜನವಸತಿ ತಾಣಗಳಿವೆ.

      ನೂರಾರು ವರ್ಷಗಳಿಂದ ಪಶುಸಾಕಾಣಿಕೆ, ಮೀನುಗಾರಿಕೆ, ಕೂಲಿ, ಮತ್ತಿತರ ಕುಲಕಸುಬು ಮಾಡಿಕೊಂಡು ಬದುಕುತ್ತಿರುವ ಇಲ್ಲಿನ ಜನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ನಿರ್ಲಕ್ಷಕ್ಕೊಳಗಾಗಿದ್ದಾರೆ. ಈ ಜನರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಕಾರ್ಯಕ್ರಮ ಹಾಕಿಕೊಳ್ಳಬೇಕು. ಈ ಹಳ್ಳಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ ಎಲ್ಲಾ ಸವಲತ್ತು ನೀಡಬೇಕು ಎಂದು ಹೇಳಿದರು.

      ತುಮಕೂರು ಜಿಲ್ಲೆಯ 509 ಇಂತಹ ಜನವಸತಿ ಪ್ರದೇಶಗಳ ಬಗ್ಗೆ ಸರ್ಕಾರದ ಪ್ರಾಥಮಿಕ ಅಧಿಸೂಚನೆಗಾಗಿ ಜಿಲ್ಲಾಧಿಕಾರಿಗಳು 439 ಪ್ರಕರಣಗಳನ್ನು ಸರ್ಕಾರಕ್ಕೆ ಕಳಿಸಿದ್ದಾರೆ, ಇನ್ನೂ 70 ಪ್ರಕರಣ ಬಾಕಿ ಇವೆ. ಇದರಲ್ಲಿ 318 ಪ್ರಕರಣಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೆ. ಶಿವಮೂರ್ತಿ ಹೇಳಿದರು.

      ಇಂತಹ ಬಹುತೇಕ ಜನವಸತಿಗಳು ಅರಣ್ಯ ಜಾಗದಲ್ಲೆ ಇರುವುದರಿಂದ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಈ ಸಂಬಂಧದ ಭೂಸುಧಾರಣಾ ಕಾಯ್ದೆ ಅನುಷ್ಠಾನಗೊಳಿಸಲು ಅಲ್ಲಿನ ಸರ್ಕಾರಗಳು ಮುಂದಾಗಿವೆ, ಅದೇ ರೀತಿ ಕರ್ನಾಟಕ ಸರ್ಕಾರವು ಕಾಯ್ದೆ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link