ಇದ್ದಲ್ಲೇ ಸೌಲಭ್ಯ ಕಲ್ಪಿಸಿ, ಬೇರೆ ಜಿಲ್ಲೆಗೆ ಬಿಡಬೇಡಿ

ದಾವಣಗೆರೆ:

     ಜಿಲ್ಲೆಯಲ್ಲಿರುವ ವಲಸಿಗರಿಗೆ ಇರುವಲ್ಲಿಯೇ ಊಟ, ವಸತಿ ಸೇರಿದಂತೆಅಗತ್ಯ ಮೂಲಭೂತ ಸೌಕರ್ಯಕಲ್ಪಿಸಿ, ವಲಸಿಗರು ಪಕ್ಕದ ಜಿಲ್ಲೆಗಳಿಗೆ ತೆರಳದಂತೆ ನೋಡಿಕೊಳ್ಳಿ ಎಂದುಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್‍ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

    ಸೋಮವಾರ ರಾಜ್ಯದಎಲ್ಲಾ ಜಿಲ್ಲಾಧಿಕಾರಿಗಳು ಸೇರಿದಂತೆಇತರೆ ಅಧಿಕಾರಿಗಳೊಂದಿಗೆ ವಿಡಿಯೋಕಾನ್ಪರೆನ್ಸ್‍ನಲ್ಲಿಚರ್ಚೆ ನಡೆಸಿದ ಅವರು,ತಮ್ಮ ಕೆಲಸದ ಸ್ಥಳ ಮತ್ತು ವಾಸ ಸ್ಥಳದಿಂದ ಅವರು ಬೇರೆ ಊರುಗಳಿಗೆ ಹೈವೇ ಮೂಲಕ ತೆರಳುತ್ತಿರುವುದು ಕಂಡು ಬಂದಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಹಾನಗರಪಾಲಿಕೆ ಕ್ರಮವಹಿಸಿ ವಲಸಿಗರು ಬೇರೆ ಜಿಲ್ಲೆಗಳಿಗೆ ತೆರಳದಂತೆ ನೋಡಿಕೊಳ್ಳಬೇಕು ಎಂದುಸೂಚನೆ ನೀಡಿದರು.

   ಜಿಲ್ಲೆಗಳಲ್ಲಿರುವ ವಲಸಿಗರಿಗೆ ಆಯಾ ಜಿಲ್ಲೆಗಳ ಶಾಲೆ, ಕಾಲೇಜು, ಕಲ್ಯಾಣ ಮಂಟಪ, ಓಪನ್ ಫೀಲ್ಡ್‍ಗಳಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಿಕೊಟ್ಟು ಇಂದಿರಾಕ್ಯಾಂಟೀನ್, ಸ್ಕೂಲ್‍ಗಳಲ್ಲಿ ಬಿಸಿಯೂಟದ ಕೇಂದ್ರಗಳನ್ನು ತೆರೆದುಊಟದ ವ್ಯವಸ್ಥೆ ಮಾಡಬೇಕು. ವಲಸಿಗರ ಬಳಿ ರೇಷನ್‍ಕಾರ್ಡ್‍ಇದ್ದರೆಅವರಿಗೆರೇಷನ್ ವ್ಯವಸ್ಥೆ ಕಲ್ಪಿಸಬೇಕು. ಅವರ ಬಳಿ ರೇಷನ್‍ಕಾರ್ಡ್‍ಇಲ್ಲದಿದ್ದಲ್ಲಿ ಸರ್ಕಾರದಅನುಮತಿ ಪಡೆದುಕೊಂಡುರೇಷನ್ ಪ್ಯಾಕ್ ನೀಡಬಹುದು.ರೇಷನ್ ಅಂಗಡಿಗಳಲ್ಲಿ ಜನರಿಗೆಯಾವುದೇ ಸಮಸ್ಯೆಯಾಗದಂತೆ ಪಡಿತರ ವಿತರಣೆ ಮಾಡಬೇಕುಎಂದರು.

     ಎಪಿಎಂಸಿಗಳನ್ನು ತೆರೆಯಲುಕೇಂದ್ರ ಸರ್ಕಾರದಿಂದಲೇಅವಕಾಶವಿದ್ದು, ಎಲ್ಲಾ ಎಪಿಎಂಸಿಗಳಲ್ಲಿ ಸಾಮಾಜಿಕ ಅಂತರಕಾಯ್ದುಕೊಂಡು ಎಂದಿನಂತೆಕಾರ್ಯನಿರ್ವಹಿಸಬೇಕು.ಆಯಾಜಿಲ್ಲೆಯಲ್ಲಿರುವರೈಸ್ ಮಿಲ್‍ಗಳು, ಬೇಳೆ ಮಿಲ್‍ಗಳನ್ನು ತೆರೆದುಆಹಾರ ಸಗಟಿನಲ್ಲಿಜನರಿಗೆಯಾವುದೇರೀತಿಯತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

     ಸಗಟು ಸಾಗಾಣಿಕೆ ಸಾರಿಗೆಯವರುತೊಂದರೆಯಾಗುತ್ತದೆಂದು ಭಯದಿಂದ ಕೆಲಸವನ್ನು ನಿಲ್ಲಿಸಿರುವುದರಿಂದ ಜಿಲ್ಲಾಧಿಕಾರಿಗಳು ತಮ್ಮಜಿಲ್ಲೆಯಲ್ಲಿರುವ ಸಾಗಾಣಿಕೆ ಸಾರಿಗೆಯವರಿಗೆ ಜಿಲ್ಲಾಡಳಿತದ ವತಿಯಿಂದ ಪಾಸ್ ನೀಡಿಕಾರ್ಯನಿರ್ವಹಿಸಲು ಸೂಚಿಸಬೇಕು.ರೈತರ ಹಿತದೃಷ್ಠಿಯಿಂದ ಫರ್ಟಿಲೈಸರ್ ಅಂಗಡಿಗಳು ಮತ್ತು ಮೇವು ಒದಗಿಸುವ ಅಂಗಡಿಗಳನ್ನು ತೆರೆಸುವಂತೆ ಸೂಚಿಸಿದರು.

     ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪಕ ಹೊಂದಿರುವವರ ಕೈಗಳ ಮೇಲೆ ಸೀಲ್ ಹಾಕಿ ಅವರ ಮನೆಯ ಗೋಡೆಗಳ ಮೇಲೆ ಸ್ಟಿಕರ್ ಅಂಟಿಸಬೇಕು.ಪ್ರಾಥಮಿಕ ಸಂರ್ಪಕದಲ್ಲಿದವರನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅವಲೋಕನದಲ್ಲಿ ರಿಸಬೇಕು.ದ್ವಿತೀಯ ಸಂರ್ಪಕದಲ್ಲಿದವರನ್ನು ಮನೆಗಳಲ್ಲೇ ಅವಲೋಕನದಲ್ಲಿರಿಸಿ ಅವಧಿ ಮುಗಿಯುವವರೆಗೆ ಪಿಡಿಒಗಳಿಗೆ ಅವರ ಮೇಲೆ ನಿಗಾವಹಿಸಲು ಸೂಚಿಸಬೇಕುಎಂದರು.

     ಸಭೆಯಲ್ಲಿ ಪೊಲೀಸ್ ವÀರಿಷ್ಠಾಧಿಕಾರಿ ಹನುಮಂತರಾಯ, ಜಿಪಂ ಮುಖ್ಯಕಾರ್ಯನಿರ್ವಾಹಕಧಿಕಾರಿ ಪದ್ಮಾ ಬಸವಂತಪ್ಪ, ಅಪರಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ವಿಶೇಷ ಭೂಸ್ವಾಧೀನಾಧಿಕಾರಿರೇಷ್ಮಾ ಹಾನಗಲ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಗರಾಭಿವೃದ್ದಿಕೋಶದಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓಡಾ. ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಡಾ.ರಾಘವನ್‍ಇತರೆಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link