ಮುಂದಿನ ಪ್ರಧಾನಿ ರಾಹುಲ್ ಗಾಂಧಿಗೆ ಶಕ್ತಿ ನೀಡಿ : ವೇಣುಗೋಪಾಲ್

ತಿಪಟೂರು :

        ಯುವಕರಿಗೆ ಹೆಚ್ಚಿನ ಒತ್ತನ್ನು ನೀಡುತ್ತಿರುವ ಭಾರತದ ಮುಂದಿನ ಪ್ರಧಾನಿ ರಾಹುಲ್‍ಗಾಂಧಿಗೆ ಶಕ್ತಿ ಕಾರ್ಯಕ್ರಮದಲ್ಲಿ ಹೆಚ್ಚುಹೆಚ್ಚು ಸದಸ್ಯರನ್ನಾಗಿ ಮಾಡುವ ಮೂಲಕ ಶಕ್ತಿನೀಡಬೇಕೆಂದು ವಿಧಾನ ಪರಿಷತ್ ಸದಸ್ಯರಾದ ವೇಣುಗೋಪಾಲ್ ಕಾಂಗ್ರೇಸ್ ಕಾರ್ಯಕರ್ತರಿಗೆ ಕರೆನೀಡಿದರು.

          ಇಂದು ನಗರದ ಗುರುಕುಲಾನಂದಾಶ್ರಮ ಕಲ್ಯಾಣಮಂಟಪದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನಾಯಕರನ್ನು ಹುಟ್ಟುಹಾಕುತ್ತಿರುವ ಪಕ್ಷವೆಂದರೆ ಅದು ಕಾಂಗ್ರೇಸ್ ಪಕ್ಷವೊಂದು ಆದ್ದರಿಂದ ನಮ್ಮ ಪ್ರಧಾನಿ ಅಭ್ಯರ್ಥಿಯಾದ ರಾಹುಲ್‍ಗಾಂಧಿಯವರಿಗೆ ಈ ಶಕ್ತಿಯ ಮೂಲಕ ಅದನ್ನು ಸಾಧಿಸಬೇಕಾಗಿದೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಮತ್ತು ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೇಸ್ ಅಭೂತಪೂರ್ವ ಗೆಲುವನ್ನು ಸಾಧಿಸಿದೆ ಇದರಿಂದಲೇ ತಿಳಿಯುತ್ತದೆ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಬೆಲೆಯಿಲ್ಲ, ಅಧಿಕಾರಕ್ಕೆ ಬಂದಾಗಿನಿಂದ ಅಚ್ಚೇದಿನ್ ಆಯೋಗಾ, ಬ್ಲಾಕ್‍ಮನಿ ಆಯೇಗಾ ಎಂದು ಬರಿ ಸುಳ್ಳಿನ ಅರಮನೆ ಕಟ್ಟುತ್ತಿರುವ ಬಿ.ಜೆ.ಪಿಯನ್ನು ಕಿತ್ತೊಗೆಯಲು ಪ್ರಜೆಗಳು ತೀರ್ಮಾನಿಸಿದ್ದಾರೆ

           ಇದೇ ಮುಂದಿನ ಲೋಕಸಭಾ ಚುನಾವಣೆಗೆ ಮಾರ್ಗಸೂಚಿಯಾಗಲಿದೆ ಎಂದು ತಿಳಿಸಿದ ಅವರು ಲೋಕಸಂಪರ್ಕ ಅಭಿಯಾನ ಕಾರ್ಯಕ್ರಮದ ಅನುಷ್ಠಾನ, ಪ್ರತಿ ಬೂತ್‍ಗೆ 10 ಸಹಯೋಗಿಗಳನ್ನು ನೇಮಕಮಾಡುವುದು, ನಿಧಿಸಂಗ್ರಹ ಮತ್ತು ಮುಂಬರುವ ಲೋಕಸಭೆ ಮತ್ತು ತಿಪಟೂರು ನಗರಸಭಾ ಚುನಾವಣೆ ಬಗ್ಗೆ ಪಕ್ಷವನ್ನು ಸಜ್ಜುಗೊಳಿಸಿ ಪಕ್ಷದ ಶಕ್ತಿ ಯೋಜನೆಗೆ ಕಾರ್ಯಕರ್ತರ ನೊಂದಣಿ ಅಭಿಯಾನವನ್ನು ಚುರುಕುಗೊಳಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು.

            ಸಂಸದ ಮುದ್ದಹನುಮೇಗೌಡ ಮಾತನಾಡಿ ಇಂದು ತಿಪಟೂರಿನಲ್ಲಿ ಚುನಾವಣೆ ಸಂದರ್ಭದಲ್ಲಿ ಆದಂತಹ ಬದಲಾವಣೆ ಆಗದಿದ್ದರೆ ಕಾಂಗ್ರೇಸ್ ಸೋಲುತ್ತಿರಲಿಲ್ಲ ಇಂದು ಸೋತ್ತಿದ್ದರು ತನ್ನ ಶಕ್ತಿಯನ್ನು ಅದು ಕಳೆದುಕೊಂಡಿಲ್ಲ. ಇತಿಹಾಸವೇ ತಿಳಿಸುವಂತೆ ನಮ್ಮ ಪಕ್ಷವು ದೇಶಕ್ಕಾಗಿ ಪ್ರಾಣತ್ಯಾಗವನ್ನು ಮಾಡಿದಂತಹ ಕುಟುಂಬದಿಂದ ಬಂದಿರುವ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ಅದಕ್ಕಾಗಿ ಕಾಂಗ್ರೇಸ್ ಕಾರ್ಯಕರ್ತರೆಲ್ಲಾ ಒಟ್ಟಾಗಿ ದುಡಿದು ಪಕ್ಷಕ್ಕೆ ಶಕ್ತಿಯನ್ನು ತುಂಬಬೇಕಾಗಿದೆ.

             ಈಗ ನಮ್ಮ ಜಿಲ್ಲೆಯಲ್ಲಿ ಕೊರಟಗೆರೆ ಶಕ್ತಿ ಕಾರ್ಯಕ್ರಮದಲ್ಲಿ ಸುಮಾರು 6500 ಸದಸ್ಯರನ್ನು ನೊಂದಣಿಮಾಡಿಸಿದ್ದಾರೆ ಈಗ ನಿಮ್ಮ ತಿಪಟೂರಿನಲ್ಲಿ ಸುಮಾರು 6000 ಜನ ಸದಸ್ಯರನ್ನು ನೊಂದಾಯಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಳ್ಳಿ ಎಂದ ಅವರು ನಾನು ಕಲ್ಪತರು ನಾಡಿನಲ್ಲಿ ತೆಂಗು ಬೆಳೆಯುವ ರೈತರು ಆತ್ಮಹತ್ಯೆಮಾಡಿಕೊಳ್ಳುತ್ತಿರುವುದನ್ನು ಕಂಡು ಮಾಜಿ ಪ್ರದಾನಿ ದೇವಗೌಡರೊಂದಿಗೆ ನಮ್ಮ ರೈತರ ಸಮಸ್ಯೆಗಳನ್ನು ತಿಳಿಸಿ ಅವರೊಂದಿಗೆ ಕೇಂದ್ರದ ಮಂತ್ರಿಗಳ ಸಭೆಯಲ್ಲಿ ಕೊಬ್ಬರಿ ಧಾರಣೆಯಬಗ್ಗೆ ಚರ್ಚಿಸಿ ಇಂದು ರೈತರ ಕೊಬ್ಬರಿಗೆ ಕ್ವಿಂಟಾಲ್‍ಗೆ 16000 ರೂ ದೊರೆಯುತ್ತಿದೆ ಎಂದರು.

            ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಷಡಕ್ಷರಿ ತಾಲ್ಲೂಕಿನಲ್ಲಿ ಷಡಕ್ಷರಿಯಿಂದ ಕಾಂಗ್ರೇಸ್ ಇಲ್ಲಿ ಕಾಂಗ್ರೇಸ್‍ನಿಂದ ಷಡಕ್ಷರಿ ಇದ್ದಾನೆ ಇದು ನನ್ನ ಕರ್ಮಭೂಮಿ, ಕಾಂಗ್ರೇಸ್ ಪಕ್ಷಕ್ಕೆ ದ್ರೋಹ ಬಗೆದರೆ ಯಾರು ಉದ್ದಾರವಾದ ಉದಾಹರಣೆಯೇ ಇಲ್ಲ. ನಮ್ಮ ನಾಯಕರ ತ್ಯಾಗ ಬಲಿದಾನದಿಂದ ಇಂದು ನಮ್ಮ ಪಕ್ಷ ಈ ಸ್ಥಾನಕ್ಕೆ ಬಂದಿದೆ. ನಾವು ತಾಲ್ಲೂಕಿನಲ್ಲಿ ಮಾಡಿರುವ ಅಭಿವೃದ್ಧಿಕಾರ್ಯಗಳೇ ನಮ್ಮ ಶ್ರೀರಕ್ಷೆ. ಇಂದಿಗೂ ತಾಲ್ಲೂಕಿನಲ್ಲಿ ಕಾಂಗ್ರೇಸ್ ಸೋತಿರಬಹುದು ಆಂದರೆ ಶಾಸಕ ಸ್ಥಾನವನ್ನು ಬಿಟ್ಟು ಗ್ರಾ.ಪಂ, ತಾ.ಪಂ, ಎ.ಪಿ.ಎಂ.ಸಿ., ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷವೇ ಇದೆ ಇನ್ನೆಲ್ಲಿ ಕಾಂಗ್ರೇಸ್ ಸೋತಿದೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರು ಉತ್ತಮವಾದ ಆಡಳಿತನ್ನು ನಡೆಸುತ್ತಿದೆ ಇದು ನಮಗೆ ಸಕಾರವಾಗಿ ಸ್ಪಂದಿಸುತ್ತಿದ್ದು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಶ್ರಮಿಸುವುದಾಗಿ ಹೇಳಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

           ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಆರ್.ರಾಮಕೃಷ್ಣ, ತುಳಸೀರಾಮ್, ಹನುಮಂತಯ್ಯ, ತಾ.ಪಂ ಅಧ್ಯಕ್ಷ ಎನ್.ಎಂ.ಸುರೇಶ್, ತಾ.ಪಂ ಉಪಾಧ್ಯಕ್ಷ ಶಂಕರ್, ಎಪಿ.ಎಂ.ಸಿ ಅಧ್ಯಕ್ಷ ರವಿ, ಉಪಾಧ್ಯಕ್ಷ ಮಂಜುನಾಥ್, ನಗರಸಭೆ ಅಧ್ಯಕ್ಷ ಮತ್ತು ನಗರ ಕಾಂಗ್ರೇಸ್ ಅಧ್ಯಕ್ಷ ಟಿ.ಎನ್.ಪ್ರಕಾಶ್, ತಾ.ಬ್ಲಾಕ್ ಅಧ್ಯಕ್ಷ ಎಂ.ಎನ್.ಕಾಂತರಾಜು, ಸಿ.ಬಿ.ಶಶಿಧರ್, ನಗರಸಭೆ ಸದಸ್ಯರುಗಳು, ಅಲ್ಪಸಂಖ್ಯಾತರ ಸೆಲ್ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಎಸ್.ಸಿಎಸ್.ಟಿ ಪಂಗಡಗಳ ಪದಾಧಿಕಾರಿಗಳು ಎ.ಪಿ.ಎಂ.ಸಿ ಸದಸ್ಯರುಗಳು ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link