ಉತ್ತಮ ಸೇವೆ ನೀಡಿ ಜನರ ನಂಬಿಕೆ ಗಳಿಸಿ: ಸುರೇಶ್ ಕುಮಾರ್

ಬೆಂಗಳೂರು

     ಸರ್ಕಾರಿ ಇಲಾಖೆಗಳ ಬಗ್ಗೆ ಜನರಲ್ಲಿ ನಂಬಿಕೆ ಇಲ್ಲದಂತಾಗಿದ್ದು ರಾಜಕಾರಣಿಗಳ ಬಗ್ಗೆಯೂ ನಂಬಿಕೆ ಕಳೆದುಕೊಂಡಿದ್ದು ಅದನ್ನು ಸರಿಪಡಿಸುವಂತಹ ಸೇವೆ ಒದಗಿಸಬೇಕಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

      ಕೆಜಿ ರಸ್ತೆಯ ಶಿಕ್ಷಕರ ಸದನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘ ಆಯೋಜಿಸಿದ್ದ,ಆನ್ ಲೈನ್ ಸೇವೆ ಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ಶಿಕ್ಷಕರು ಸೇರಿದಂತೆ ಸಾಮಾನ್ಯ ಜನರು ಸರ್ಕಾರಿ ಇಲಾಖೆಗಳಿಗೆ ಓಡಾಡುವುದನ್ನು ನಿಲ್ಲಿಸಬೇಕು ಎಂದರು
ಶಿಕ್ಷಣ ಇಲಾಖೆಯ ಬೋಧಕೇತರ ನೌಕರರಿಗೆ ದೈನಂದಿನ ಆಡಳಿತ ವ್ಯವಹಾರಣೆಯಲ್ಲಿ ಆಗಬೇಕಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಹೇಳಿದರು.

       ಆನ್ ಲೈನ್ ಮೂಲಕ ಸೇವೆಗಳನ್ನು ನೀಡಬೇಕು ಎಂಬುದು ಮಹತ್ವದ ಹಾಗೂ ಪ್ರಚಲಿತವಿರುವ ಉದ್ದೇಶ. ಹಾಗಾಗಿ ಪ್ರಮಾಣ ವಚನ ಸ್ವೀಕರಾದ ನಂತರ ನೀವು ಯಾವುದೇ ಖಾತೆ ನೀಡದಿದ್ದರೂ, ಸಕಾಲ ನೀಡಿ ಎಂದು ಹೇಳಿದ್ದೇ.ಇದರಿಂದ ಸಿಎಂ, ಜನರಿಗೆ ಬೇಕಾದ ಸೇವೆಗಳನ್ನು ಸುಲಭವಾಗಿ ತಲುಪಿಸಲು ಉಪಕಾರವಾಗಲಿದೆ ಎಂದರು.

     ಇದಕ್ಕೂ ಮೊದಲು ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಬೋಧಕೇತರ ವೃಂದದ ನೌಕರರ ಸಲುವಾಗಿ ಕನಿಷ್ಠ ಒಂದು ವಾರ,ಕಚೇರಿ ಕೈಪಿಡಿ, ಹಾಗೂ ಕಡತ ನಿರ್ವಹಣೆ, ಸಿಸಿಎ ನ್ಯಾಯಾಲಯದ ಪ್ರಕರಣ, ಆರ್ ಟಿಐ ಬಗ್ಗೆ ಕಾಲ ಕಾಲಕ್ಕೆ ಕಾರ್ಯಾಗಾರ, ಮಾಹಿತಿ ನೀಡಬೇಕು.

     ಮೂಲಸೌಕರ್ಯ, ಕಂಪ್ಯೂಟರ್ ನಿರ್ವಹಣೆ ಸೇರಿದಂತೆ ಅನುದಾನ ಹೆಚ್ಚಳ ಹಾಗೂ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಕಾಗದ ರಹಿತ ಸೇವೆ:

     ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲಾ ಮಾತನಾಡಿ, ಆಡಳಿತದಲ್ಲಿ ತಂತ್ರಜ್ಞಾನ ಬಳಕೆ. ಗುಣಾತ್ಮಕ ಸೇವೆ ನೀಡಲು ಶಿಕ್ಷಣ ಇಲಾಖೆ ವಹಿಸಿರುವ ಮುತುವರ್ಜಿ ಅಪಾರ ಎಂದು ಹೇಳಿದರು.

    ನಮ್ಮ ಇಲಾಖೆಯಲ್ಲಿರುವ ಅನೇಕ ಸೇವೆಗಳನ್ನು ಆನ್ ಲೈನ್ ಗೆ ಒಳಪಡಿಸಲಾಗಿದೆ. ಸೇವೆ ಪಡೆಯಲು ಬಿಇಒ ಆಫೀಸ್ ಗೆ ಕಚೇರಿಗೆ ಅರ್ಜಿ ಕೊಡುವುದರಿಂದ ಹಿಡಿದು ಎಲ್ಲ ಪ್ರಕ್ರಿಯೆ ಯನ್ನು ಪೇಪರ್ ರಹಿತ ಕಚೇರಿ ಮಾಡಲಾಗಿದೆ. ಅಷ್ಟೇ ಅಲ್ಲದೆ,ಆರು ತಿಂಗಳ ಕಾಲ ಸುದೀರ್ಘವಾದ ಚರ್ಚೆಯ ನಂತರ ಮಾಡಲಾಗಿದೆ ಎಂದರು.

    ಆಡಳಿತ ಚುರುಕು ಆಗಲು ಸ್ಮಾರ್ಟ್ ಆಗಬೇಕಿದೆ. ಆಗಸ್ಟ್ ನಿಂದ ಆರಂಭವಾಗ್ತಿದ್ದ ಎಸ್‍ಎಸ್‍ಎಲ್ ಸಿ ಮೌಲ್ಯಮಾಪನ, ಪ್ರವೇಶ, ಅಂಕ ಪಟ್ಟಿಗಳನ್ನು ಆನ್ ಲೈನ್, ಮರು ಮೌಲ್ಯ ಮಾಪನ, ಅಂಕಪಟ್ಟಿಗಳು ಡಿಜಿಟಲ್ ಮಾಡಲಾಗಿದೆ. ಯಾವುದೇ ಮೂಲೆಯಲ್ಲಿ ಇದ್ದರೂ ಪಡೆಯಬಹುದು ಎಂದು ಮಾಹಿತಿ ನೀಡಿದರು.

   ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್.ಉಮಾಶಂಕರ್, ಸಂಘದ ಅಧ್ಯಕ್ಷ ಎಸ್.ಎನ್.ಸುರೇಶ್, ಖಜಾಂಚಿ ಕೆ.ಎಸ್. ಪ್ರಸಾದ್ ಸೇರಿದಂತೆ ಪ್ರಮುಖರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link