ಶಿಕ್ಷಕರ ವರ್ಗಾವಣೆಯಲ್ಲಿ ವಿಕಲಚೇತನ ಶಿಕ್ಷಕರಿಗೆ ವಿನಾಯತಿಗೆ: ಬೀರಪ್ಪ ಅಂಡಗಿ

ಬೆಂಗಳೂರು

       ಶಿಕ್ಷಕರ ವರ್ಗಾವಣೆಯಲ್ಲಿ ಅನುಸರಿಸಲಾಗುವ ನಿಯಮಾವಳಿಗಳಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

       ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆಯಲ್ಲಿ ಒಂದು ಸ್ಥಳದಲ್ಲಿ 3 ವರ್ಷ ಸೇವೆಯನ್ನು ಸಲ್ಲಿಸಿದ್ದರೇ ಮಾತ್ರ ವರ್ಗಾವಣೆಯಲ್ಲಿ ಅವಕಾಶ ಎಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಿ ಪ್ರತಿ ವರ್ಷ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ವರ್ಗಾವಣೆಯಲ್ಲಿ ಪತಿ ಮತ್ತು ಪತ್ನ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ ಶಿಕ್ಷಕರಿಗೆ ಪ್ರತಿ ವರ್ಷ ವರ್ಗಾವಣೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಘಟಕ ಹೊರಗೆ ಒಂದು ಭಾರಿ ಮಾತ್ರ ವರ್ಗಾವಣೆಯನ್ನು ಪಡೆಯಬೇಕು ಎಂಬ ನೀಯಮದಿಂದಲೂ ಕೂಡಾ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು ಎಂದರು.

ಆದರೇ ವಿಕಲಚೇತನರಿಗೆ ಮಾತ್ರ 3 ವರ್ಷದ ಮಿತಿಯನ್ನು ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ. ಸರಕಾರ ನೌಕರರಲ್ಲೇ ತಾರತಮ್ಯವನ್ನು ಉಂಟು ಮಾಡಿದಂತಾಗುತ್ತದೆ. ಈ ತಾರತಮ್ಯದ ನೀತಿಯನ್ನು ಸರಕಾರವು ಕೈ ಬಿಟ್ಟು ವಿಕಲಚೇತನ ಶಿಕ್ಷಕರಿಗೂ ವಿನಾಯತಿಯನ್ನು ನೀಡಬೇಕು ಇಲ್ಲದಿದ್ದರೆ ಸಂಘದ ವತಿಯಿಂದ ಮಾರ್ಚ ಮೊದಲನೇ ವಾರದಲ್ಲಿ ಬೆಂಗಳೂರು ನಗರದ ಪ್ರೀಡಂ ಪಾಕ್ರ್ನಲ್ಲಿ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

       ವೈದ್ಯಕೀಯ ಪ್ರಮಾಣ ಪತ್ರ ತರಲು ಸೂಚಿಸುವುದನ್ನು ನಿಲ್ಲಿಸಬೇಕು: ಶಿಕ್ಷಕರ ವರ್ಗಾವಣೆ ಸೇರಿದಂತೆ ವಿಕಲಚೇತನರ ಅನೇಕ ಸೌಲಭ್ಯಗಳನ್ನು ಪಡೆಯಲು ಪದೇ ಪದೇ ಅಂಗವಿಕಲತೆಗೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣ ಪತ್ರವನ್ನು ತರಲು ಸೂಚಿಸುವುದನ್ನು ಕೂಡಲೇ ಅಧಿಕಾರಿಗಳು ನಿಲ್ಲಿಸಬೇಕು. ವಿಕಲಚೇತನ ನೌಕರರ ನೇಮಕಾತಿಯ ಪೂರ್ವದಲ್ಲಿ ನೀಡಿದ ಅಂಗವಿಕಲತೆಗೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣಪತ್ರದ ನೈಜ ವರದಿಗಾಗಿ ವಿಕಲಚೇತನ ಅಭ್ಯರ್ಥಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರವೇ ನೇಮಕಾತಿ ಆದೇಶವನ್ನು ನೀಡುತ್ತಾರೆ. ಹೀಗೀರುವಾಗ ವರ್ಗಾವಣೆ ಮತ್ತು ವಿವಿಧ ಸೌಲಭ್ಯಗಳನ್ನು ಪಡೆಯಲು ಯಾಕೇ ಪದೇ ಪದೇ ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರವನ್ನು ತರಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap