ಜಿಲ್ಲೆ ಅಭಿವೃದ್ಧಿ ಆಗುವುದಕ್ಕೆ ದೇವೇಗೌಡರಿಗೆ ಬೆಂಬಲ ನೀಡಿ: ಎಂ.ವಿ. ವೀರಭದ್ರಯ್ಯ.

ಐ.ಡಿ.ಹಳ್ಳಿ :
      ಹೋಬಳಿಯ ಐದು ಗ್ರಾಮ ಪಂಚಾಯಿತಿಗಳಿಗೆ ಗುರುವಾರದಂದು ಭೇಟಿ ನೀಡಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಮಾಜಿ ಪ್ರಧಾನಿ ದೇವೇಗೌಡರಿಗೆ ಬೆಂಬಲ ನೀಡಿದರೆ ಜಿಲ್ಲೆ ತನ್ನಷ್ಟಕ್ಕೆ ತಾನೇ ಅಭಿವೃದ್ಧಿಯಾಗುತ್ತದೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್  ಕಾರ್ಯಕರ್ತರಿಗೆ ಹೇಳಿ ಮಾತನಾಡಿದರು.
        ತುಮಕೂರು ಜಿಲ್ಲೆಯನ್ನು ಇಂದು ಇಡೀ ದೇಶವೇ ತಲೆ ಎತ್ತಿ ನೋಡುತ್ತಿದೆ. ಆದ್ದರಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಸೇರಿ ದೇವೇಗೌಡರಿಗೆ ಹೆಚ್ಚಿನ ಮತಗಳನ್ನು ಹಾಕಿಸುವಂತಹ ಕೆಲಸ ಹಿಂದಿನಿಂದಲೇ ಮಾಡಬೇಕಾಗಿದೆ. ಐದು ವರ್ಷಗಳಲ್ಲಿ ಕೇಂದ್ರ ಸರಕಾರ ಮಾಡಿರುವ ಜನಾ ವಿರೋಧ ಪಕ್ಷಕ್ಕೆ ಯಾರು ಸಹ ಬೆಂಬಲ ನೀಡಬಾರದು.
   
         ಸ್ವಲ್ಪ ಯುವಕರು ಮೋದಿಯನ್ನು ನಂಬಿ ಮತಗಳನ್ನು ಹಾಕುವುದಕ್ಕೆ ಮುಂದಾಗಿದ್ದಾರೆ ದಯವಿಟ್ಟು ಅರ್ಥ ಮಾಡಿಕೊಳ್ಳಿ ಯುವಕರಿಗೆಲ್ಲಾರಿಗೂ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಭರವಸೆ ನೀಡಿದ ಮೋದಿ ಇಂದು ವಿಫಲರಾಗಿದ್ದಾರೆ. ಆದ್ದರಿಂದ ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ದೇವೇಗೌಡ ರವರು  ಈ ಬಾರಿ ಸೂರ್ಯ ಪಶ್ಚಿಮದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಈ ಬಾರಿ ದೇವೇಗೌಡ ರವರು ಗೆಲುವು ಸಾಧಿಸುವುದು ಅಷ್ಟೇ ಸತ್ಯ ಎಂದರು.
         ಜಿಲ್ಲಾ ಪಂಚಾಯಿತಿ ಹಾಲಿ ಸದಸ್ಯರಾದ ಕೆಂಚಾಮರಣ್ಣ ಮಾತನಾಡಿ ದಲಿತರಿಗೆ ಸಂವಿಧಾನ ಉಳಿಯಬೇಕಾದರೆ ದೇವೇಗೌಡರಿಗೆ ಮತ ನೀಡಬೇಕು. ಇಲ್ಲದಿದ್ದರೆ ಬಿಜೆಪಿ ಪಕ್ಷದವರು ಜಾತಿ ಜಾತಿಗಳ ನಡುವೆ ವಿಭಾಗಗಳನ್ನಾಗಿ ಮಾಡುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ಎಲ್ಲಾ ಜಾತಿಯವರು ಒಂದೇ ಎಂಬ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳ ಮುಖಂಡರು ಒಗ್ಗಟ್ಟಾಗಿದ್ದರೆ.
   
           ಆದ್ದರಿಂದ ದಲಿತರು.ಹಿಂದುಳಿದವರು.ಅಲ್ಪಸಂಖ್ಯಾತರು. ಮನಸ್ಸು ಮಾಡಿದರೆ ಬಿಜೆಪಿಯನ್ನು ಸುಲಭವಾಗಿ ತೊಲಗಿಸಬಹುದು. ಬಿಜೆಪಿ ಪಕ್ಷ ಎಂದೆಂದಿಗೂ ಸಹ ಕೋಮುವಾದಿ ಪಕ್ಷ. ಬಿಜೆಪಿ ಪಕ್ಷದ ಶಾಸಕ ಬಹಿರಂಗವಾಗಿಯೇ ನಾವು ಅಧಿಕಾರಕ್ಕೆ ಬಂದಿರುವುದು ಸಂವಿಧಾನವನ್ನು ನಾಶ ಮಾಡುವುದಕ್ಕೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕೆ. ಇಂತಹ ವಿಷಯವನ್ನು ಗಂಭೀರವಾಗಿ ಚರ್ಚಿಸಿ ಬಿಜೆಪಿಯನ್ನು ತೊಲಗಿಸಿ. ಈ ಬಾರೀ ಎಲ್ಲಾ ದಲಿತ ಮತಗಳನ್ನು  ಜೆಡಿಎಸ್ ಪಕ್ಷದ ಅಭ್ಯರ್ಥಿ ದೇವೇಗೌಡರಿಗೆ ಹೆಚ್ಚಿನ ಮತ ನೀಡಬೇಕು ಎಂದರು.
           ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಭಾರತೀಯ ಸೇನೆ ನಮ್ಮೆಲ್ಲರ ಹೆಮ್ಮೆ ಸೇನೆಯ ಕಾರ್ಯಚಟುವಟಿಕೆಗಳು ದೇಶಕ್ಕೆ ಸಂಬಂಧಿಸಿದ ವಿಚಾರ. ದೇಶವನ್ನು ಆಳಿದ ಎಲ್ಲ ಸರಕಾರಗಳು ಭಾರತೀಯ ಸೇನೆಯ ಕಾರ್ಯಚಟುವಟಿಕೆಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಲಿಲ್ಲಾ ಆದರೆ ಮೋದಿ ಸರಕಾರ ಮಾತ್ರ ಸೇನೆಯ ಪ್ರತಿ ಕಾರ್ಯಾಚರಣೆಯನ್ನ ತಾನೇ ಮಾಡಿರುವ ರೀತಿಯಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದು ನಮ್ಮ ದೇಶದ ವೀಚಾರ ಆದ್ದರಿಂದ ಯುವಕರು ಇಂತಹ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
          ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ನರಸಿಂಹ ಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಕೆ.ರೆಡ್ಡಿ, ರಂಗಾರೆಡ್ಡಿ , ಹೋಬಳಿ ಅಧ್ಯಕ್ಷ ರಾಮಚಂದ್ರಪ್ಪ, ಜಿಲಾನ್, ನವೀನ್, ಮಂಜುನಾಥ್ ರೆಡ್ಡಿ, ರಾಜ್ ಮೋಹನ್, ಗೋವಿಂದರಾಜು, ಅಶ್ವತಪ್ಪ , ಯುವ ಮುಖಂಡರಾದ ಹೂವಿನಹಳ್ಳಿ ಮಂಜಣ್ಣ, ಮಧು, ಎಸ್ಸಿ ಘಟಕದ ಯುವ ಅಧ್ಯಕ್ಷ ಅನಂತ್ ರಾಜು, ನಟರಾಜು , ನಾಗಭೂಷಣ್ , ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಹಾಜರಿದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link