ಬಿಜೆಪಿಗೆ ಮತ ನೀಡಿ ದೇಶದ ಅಭಿವೃದ್ಧಿಗೆ ಶ್ರಮಿಸಲು ಕರೆ

ಗುಬ್ಬಿ

       ದೇಶದ ರಕ್ಷಣೆಯ ವಿಚಾರದಲ್ಲಿ ಪ್ರಧಾನಿ ಮೋದಿಯವರ ಕೊಡುಗೆ ಮಹತ್ತರವಾದುದಾಗಿದೆ. ಕಳೆದ 5 ವರ್ಷದ ಅವಧಿಯಲ್ಲಿ ಬಜೆಟ್‍ನ ಗಾತ್ರವು ಸಹ 37 ಲಕ್ಷ ಕೋಟಿಗೆ ಏರಿದೆ. ಇನ್ನೂ 5 ವರ್ಷಗಳು ಬಿಜೆಪಿಗೆ ಅಧಿಕಾರ ನೀಡಿದಲ್ಲಿ ಖಂಡಿತವಾಗಿ ವಿಶ್ವದ ಪ್ರಮುಖ ದೇಶದಲ್ಲಿ ಒಂದಾಗಿ ಭಾರತ ಬೆಳೆಯುತ್ತದೆ. ಹಾಗಾಗಿ ಹಿಂದುಳಿದ ಸಮುದಾಯದ ಬಾಂಧವರು ಬಿಜೆಪಿಗೆ ಮತ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮನವಿ ಮಾಡಿದರು.

      ಪಟ್ಟಣದ ರುದ್ರೇಶ್ವರ ಟವರ್‍ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಲ್ಲಿಕಾರ್ಜನ ಖರ್ಗೆ ಹಾಗೂ ಪರಮೇಶ್ವರ ಕಾಂಗ್ರೆಸ್‍ನಲ್ಲಿ ಎಲ್ಲಾ ರೀತಿಯ ಅಧಿಕಾರ ಸೌಲಭ್ಯಗಳನ್ನು ಪಡೆದು ದಲಿತರ ಕೋಟಾದಲ್ಲಿ ಉದ್ದಾರವಾಗಿದ್ದಾರೆ ಹೊರತು ಇವರಿಂದ ದಲಿತ ಸಮುದಾಯಕ್ಕೆ ಯಾವುದೆ ಅನುಕೂಲಗಳು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸದಾಶಿವ ಆಯೋಗವನ್ನು ಜಾರಿ ಮಾಡಲು ಇವರಿಂದ ಈವರೆಗೂ ಸಾಧ್ಯವಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಇದರ ನೆನಪು ಬರುವುದು, ಆಮೇಲೆ ಇದರ ನೆನಪು ಕೂಡ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

        ಬಿಜೆಪಿ ಸರಕಾರವನ್ನು ಕೋಮುವಾದಿ ಎಂದು ಕರೆಯುವ ಕಾಂಗ್ರೆಸ್ಸಿಗರು ಯೋಚನೆ ಮಾಡಬೇಕಾಗಿದೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಯಾರು, ಹಿಂದುಳಿದ ವರ್ಗದ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದು ಯಾರು ಎಂಬುದನ್ನು ಅರಿತು ಮಾತನಾಡಲಿ. ಮುದ್ರಾ ಅಂತ ಯೋಜನೆಯು ಕೇವಲ ಕೆಲವರಿಗೆ ಮಾತ್ರ, ಈ ಯೋಜನೆ ಮಾಡಿಲ್ಲ ಪ್ರತಿಯೊಬ್ಬರಿಗೂ ಇದರಿಂದ ಅನುಕೂಲವಾಗಿದೆ. ನೂರಾರು ಯೋಜನೆಗಳು ಎಲ್ಲಾ ಸಮುದಾಯಗಳಿಗೂ ಅನುಕೂಲವಾಗಿದೆ. ಆದರೆ ಕಾಂಗ್ರೆಸ್ ಕೇವಲ ಹಿಂದುಳಿದ ವರ್ಗವನ್ನು ಮತ ಬ್ಯಾಂಕ್ ಮಾಡಿಕೊಂಡು ಬಂದಿರುವುದು ಬಿಟ್ಟರೆ ಬೇರೆ ಏನು ಮಾಡಿಲ್ಲ ಎಂದು ತಿಳಿಸಿದರು.

       ತಾಲ್ಲೂಕು ಬಿಜೆಪಿ ಅಧ್ಯಕ್ಷ ಅ.ನಾ.ಲಿಂಗಪ್ಪ ಮಾತನಾಡಿ, ಕಳೆದ 5 ವರ್ಷದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲದೆ ಅಧಿಕಾರವನ್ನು ಯಶಸ್ವಿಯಾಗಿ ನಮ್ಮ ಕೇಂದ್ರ ಸರಕಾರ ಮಾಡಿದೆ. ಮೋದಿಯವರು ಈ ದೇಶದ ರಕ್ಷಣೆಯ ವಿಚಾರದಲ್ಲಿ ಮುಂದಾಗಿ ಕೆಲಸ ಮಾಡಿದ್ದಾರೆ. ಮೋದಿಯವರು ನೀಡಿರುವ ಪ್ರತಿಯೊಂದು ಯೋಜನೆಯು ಸಹ ಎಲ್ಲಾ ಸಮುದಾಯದವರಿಗೂ ದಕ್ಕಿದೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಎಂದರೆ ಅದು ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಬಿಜೆಪಿ ಬೆಂಬಲಿಸಬೇಕು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಾಗರನಹಳ್ಳಿ ವಿಜಯ್‍ಕುಮಾರ್, ರಾಜಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಕುಮಾರ್, ಗಂಗಾಧರ್ ಇತರರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap