ತಿಪಟೂರು :
ಭೀಕರ ಬರಗಾಲದಲ್ಲಿ ಇರುವ ನಾಡನ್ನು ಅಲ್ಪಸ್ವಲ್ಪ ನೀರಿನಿಂದ ಭತ್ತವನ್ನು ಬೆಳದ ರೈತರ ಬೆಳೆಯನ್ನು ಕಾಪಾಡುವ ಜವಾಬ್ದಾರಿ ಈಗ ಅಧಿಕಾರಿಗಳ ಕೈನಲ್ಲಿದೆ.
ತಾಲ್ಲೂಕಿನ ನೊಣವಿನಕೆರೆಯು ಹೇಮಾವತಿ ನಾಲಾ ನೀರಿನಿಂದ ನೈಸರ್ಗಿಕವಾಗಿ ತುಂಬಿದ್ದು ಈ ನೀರನ್ನು ಬಳಸಿಕೊಂಡು ರೈತರು ಉತ್ತಮವಾದ ಭತ್ತದ ಬೆಳಯನ್ನು ನೊಣವಿನಕೆರೆ ಗದ್ದೆಬೈಲಿನಲ್ಲಿ ಬೆಳೆಸಿದ್ದಾರೆ. ಆದರೆ ಈಗ ಮುಂಗಾರು ಸಹ ಕೈಕೊಟ್ಟಿದ್ದು ಕೆರೆಯ ನೀರು ಮುಕ್ಕಾಲು ಖಾಲಿಯಾಗಿದ್ದು ಇನ್ನೂ ಸುಮಾರು ಹದಿನೈದು ದಿನಗಳಷ್ಟು ಭತ್ತಕ್ಕೆ ನೀರುಸಿಗದೇ ಹೋದರೆ ರೈತರ ಪರಿಶ್ರಮಕ್ಕೆ ಬೆಲೆಯೇ ಇಲ್ಲದಂದಾಗುತ್ತದೆ.
ಸುಮಾರು ಜನರು ಅನಧಿಕೃತವಾಗಿ ಕೆರೆಗೆ ಮೋಟರ್‍ಗಳನ್ನು ಅಳವಡಿಸಿಕೊಂಡು ತಮ್ಮ ತೋಟಕ್ಕೆ ನೀರನ್ನು ಯಾವುದೇ ಅಡೆತಡೆಯಿಲ್ಲದೇ ಹೊಡೆದುಕೊಳ್ಳುತ್ತಿದ್ದು ಇವರನ್ನು ಕಂದಾಯ ಇಲಾಖೆÉಯವರಾಗಲಿ, ಹೇಮವತಿ ನಾಲಾ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿ ಇವರಲ್ಲಾ ಏಕೆ ಬೆಸ್ಕಾಂನವರು ಸಹ ಏನು ಮಾಡಲಾಗದೆ ಸುಮ್ಮನಿರುವುದರಿಂದ ಕೆರೆಯ ನೀರನ್ನು ಅವ್ಯಾಹತವಾಗಿ ಅಕ್ರಮವಾಗಿ ತಮ್ಮ ತೋಟಗಳಿಗೆ ಹೊಡೆದುಕೊಳ್ಳುತ್ತಿದ್ದರು ಕೇಳುವರಿಲ್ಲದಂತಾಗಿದೆ ಎಂದು ಸ್ಥಳೀಯ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.