ತುರುವೇಕೆರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಎನ್.ಆರ್.ಜಾದವ್ ಸಂಸ್ಥೆಯ ವತಿಯಿಂದ ತಾಲ್ಲೂಕಿನ ಎ.ಹೊಸಹಳ್ಳಿ ಗ್ರಾಮದಲ್ಲಿ ಮಾದರಿ ಕೆ.ವಿ.ಐ.ಸಿ ಗೋಬರ್ ಗ್ಯಾಸ್ ಘಟಕದ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ನೀಡಲಾಯಿತು.
ಜಿಲ್ಲಾ ನಿರ್ದೇಶಕರಾದ ಪಿ.ರಾಧಕೃಷ್ಣರಾವ್ ಮಾತನಾಡಿ ಬದಲಿ ಇಂಧನ ಪರ್ಯಾಯವಾಗಿ ಸದಸ್ಯರ ಮನೆಯಲ್ಲಿ ದನಗಳ ಸಗಣಿಯಿಂದ ಗೋಬರ್ ಗ್ಯಾಸ್ ಘಟಕ ರಚನೆಯ ಅನೂಕೂಲಗಳ ಬಗ್ಗೆ ಹಾಗೂ ಯೋಜನೆಯಿಂದ ದೊರೆಯುವ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಗೋಬರ್ ಗ್ಯಾಸ್ ಘಟಕದ ಎನ್.ಆರ್.ಜಾದವ್ ಸಂಸ್ಥೆಯ ಮಾಲೀಕರಾದ ಹಿಮ್ಮತ್ ಜಾದವ್ ಮತ್ತು ಮೇಲ್ವಿಚಾರಕರಾದ ಶಿವಶಂಕರ್‍ರಾವ್‍ರವರು ಪ್ರಾತ್ಯಕ್ಷಿತೆ ಮೂಲಕ ಸದಸ್ಯರಿಗೆ ಅರ್ಥಪೂರ್ಣವಾಗಿ ಮಾಹಿತಿಯನ್ನು ನೀಡಿದರು ಹಾಗೂ ಕೇಂದ್ರ ಮತ್ತು ರಾಜ್ಯಸರ್ಕಾರದ ವತಿಯಿಂದ ಘಟಕ ಒಂದಕ್ಕೆ ರೂ.18000 ಸಬ್ಸಿಡಿ ದೊರೆಯುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ತುಮಕೂರಿನ ಸಿ.ಹೆಚ್.ಎಸ್.ಸಿ ಪ್ರಾದೇಶಿಕ ಸಮನ್ವಯಾಧಿಕಾರಿ ಮಾಧವಗೌಡ, ಕೇಂದ್ರ ಒಕ್ಕೂಟ ಅಧ್ಯಕ್ಷ ಎಂ.ಕೆ.ರಾಮು, ವಲಯ ಅಧ್ಯಕ್ಷ ಶಿವರಾಜ್, ಕೃಷಿ ಮೇಲ್ವಿಚಾರಕ ಆರ್.ಅಶೋಕ್, ವಲಯ ಮೇಲ್ವಿಚಾರಕರಾದ ಹೆಚ್.ಕೆ.ರಾಜು. ಹಾಗೂ ಪ್ರಗತಿಬಂಧು ಮತ್ತು ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.