ಬೆಂಗಳೂರು
ಸೋಪ ಹಾಸಿಗೆ ಇನ್ನಿತರ ಪೀಠೋಪಕರಣಗಳ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಕಾರ್ಮಿಕನೊಬ್ಬ ಮೃತಪಟ್ಟು ನಾಲ್ವರು ಅಸ್ವಸ್ಥರಾಗಿರುವ ದುರ್ಘಟನೆ ದೇವರ ಜೀವನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ.ಮೃತಪಟ್ಟ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಮುಲ್ಲಾರ್ (25)ಎಂದು ಗುರುತಿಸಲಾಗಿದೆ.ಬೆಂಕಿ ಹೊಗೆಗೆ ಸಿಲುಕಿ ಅಸ್ವಸ್ಥರಾಗಿರುವ ಗುಲ್ಮಾರ್ (24) ನಜೀರ್ (25) ಮುನಿರ್, ಹಾಗೂ ಮುಲರಾಪ್ (25) ನನ್ನು ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವರ ಜೀವನಹಳ್ಳಿಯ ಉರ್ದು ಶಾಲೆ ಬಳಿಯ ಮೂರು ಅಂತಸ್ತಿನ ಕಟ್ಟಡದಲ್ಲಿ ಮನ್ಸೂರ್ ಖಾನ್ ಎಂಬಾತ ಗೋದಾಮು ಇಟ್ಟುಕೊಂಡು ಅಲ್ಲಿಯೇ ಸೋಫಾ, ಚೇರು, ಹಾಸಿಗೆ, ಮಂಚ, ಇನ್ನಿತರ ಪೀಠೋಪಕರಣಗಳನ್ನು ಸಿದ್ದಪಡಿಸುವ ಕೆಲಸ ಮಾಡಿಸುತ್ತಿದ್ದ.
ಗೋದಾಮಿನಲ್ಲಿ ಉತ್ತರ ಪ್ರದೇಶ ಮೂಲದ ಸುಮಾರು 10 ಮಂದಿ ಕಾರ್ಮಿಕರು ಕೆಲಸ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತಿದ್ದರು. ಕಾರ್ಮಿಕರಲ್ಲಿ ಐವರು ಬೇರೆ ಕಡೆ ಹೋಗಿದ್ದು ರಾತ್ರಿ ಕೆಲಸ ಮುಗಿಸಿಕೊಂಡು ಉಳಿದ ಐವರು ಮಂದಿ ಅಲ್ಲಿಯೇ ಮಲಗಿದರು.
ವಿದ್ಯುತ್ ಶಾರ್ಟ್ ಸಕ್ಯೂರ್ಟಿನಿಂದ ಮುಂಜಾನೆ 3.03 ರ ವೇಳೆ ಗೋದಾಮಿಗೆ ಬೆಂಕಿ ತಗುಲಿ ಹಾಸಿಗೆ, ಫೋಮ್, ಸೋಫದ ರೆಗ್ಸಿನ್ ಗೆ ತಗುಲಿ ಬೆಂಕಿಯ ಜೊತೆಗೆ ದಟ್ಟ ಹೊಗೆ ಆವರಿಸಿದೆ. ಸಿಹಿ ನಿದ್ರೆಯಲ್ಲಿದ್ದ ನಜೀರ್, ಮುನಿರ್ ಹಾಗೂ ಮುಲರಾಪ್ ಎಚ್ಚರಗೊಂಡು ಹೊರ ಬಲಲಾಗದೇ ಓದ್ದಾಡುತ್ತಿದ್ದರು.
ಶೌಚಾಲಯದ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಮುಲಾರ್ ಹಾಗೂ ಗುಲ್ಮಾರ್ ಚಿಲಕ ತೆಗೆಯಲಾಗದೇ ಒಳಗೆ ಉಳಿದುಕೊಂಡಿದ್ದು ಸ್ಥಳೀಯರು ಗೋದಾಮಿನಿಂದ ದಟ್ಟ ಹೊಗೆ ಬೆಂಕಿ ಹೊರ ಬರುತ್ತಿರುವುದನ್ನು ಗಮನಿಸಿ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ 2 ವಾಹನಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಜೀರ್, ಮುನಿರ್ ಹಾಗೂ ಮುಲರಾಪ್ ನನ್ನು ರಕ್ಷಿಸಿ ಹೊರಗೆ ಕರೆ ತಂದಿದ್ದಾರೆ.
ಶೌಚಾಲಯದ ಬಾಗಿಲು ಒಡೆದು ಮುಲ್ಲಾರ್ ಹಾಗೂ ಗುಲ್ಮಾರ್ ನನ್ನು ಹೊರ ತರುವಷ್ಟರಲ್ಲಿ ಉಸಿರು ಕಟ್ಟಿಕೊಂಡು ಅಸ್ವಸ್ಥವಾಗಿದ್ದು ಕೂಡಲೇ ಅವರನ್ನು ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮುಲ್ಲಾರ್ ಮೃತಪಟ್ಟಿದ್ದಾರೆ. ಗುಲ್ಮಾರ್ ಸ್ಥಿತಿ ಕೂಡ ಗಂಭೀರವಾಗಿದ್ದು ಪ್ರಾಣಾಪಾಯದಿಂದ ಪಾರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿ ಪರಿಹಾರ ಕೈಗೊಂಡಿದ್ದ ದೇವರ ಜೀವನಹಳ್ಳಿ ಪೊಲೀಸರು ಪ್ರಕರಣದ ಸಂಬಂಧ ಗೋದಾಮು ಮಾಲೀಕ ಮನ್ಸೂರ್ ಖಾನ್ ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರಾಹುಲ್ ಕುಮಾರ್ ಶಹಪುರ ವಾಡ ತಿಳಿಸಿದ್ದಾರೆ.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
