ತುಮಕೂರು:
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಕೆ ಕಂಡಿದೆ. ಕೆಲವು ರಾಜ್ಯಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಬುಧವಾರದಂದು ಗ್ರಾಂ ಚಿನ್ನಕ್ಕೆ 45 ರೂ. ಏರಿಕೆಯಾಗಿ 4015 ರೂ. ಕಂಡಿತು. ಬೆಳ್ಳಿ ಕೆ.ಜಿ.ಗೆ 51 ಸಾವಿರ ರೂ. ಗಡಿ ತಲುಪಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗ್ರಾಂಗೆ 3860 ರೂ.ಗಳಷ್ಟಿತ್ತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 40,100 ರೂಪಾಯಿ ತಲುಪಿದ್ದು, 1 ಕೆ.ಜಿ. ಬೆಳ್ಳಿ ದರ 51,000 ರೂ.ಗಳಾಗಿವೆ. ತಮಿಳುನಾಡಿನ ಚೆನ್ನೈನಲ್ಲಿ 10 ಗ್ರಾಂ ಬಂಗಾರಕ್ಕೆ 39,270 ರೂ.ಗಳಷ್ಟಿದ್ದು, ಕೆ.ಜಿ. ಬೆಳ್ಳಿ ದರ 51,000 ರೂ.ಗಳಷ್ಟಿತ್ತು. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 38,600 ರೂ.ಗಳಷ್ಟು, 1 ಕೆ.ಜಿ. ಬೆಳ್ಳಿ ಬೆಲೆ 51,000 ಗಡಿ ಮುಟ್ಟಿದೆ.
ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗುತ್ತಲೇ ಇದ್ದು, ಗ್ರಾಹಕರು ಚಿನ್ನ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಗುರುವಾರ ದೇಶದಲ್ಲಿ ಗ್ರಾಂ ಚಿನ್ನಕ್ಕೆ 3821 ರೂ.ಗಳಷ್ಟಿತ್ತು. ಬೆಂಗಳೂರಿನಲ್ಲಿ ಗ್ರಾಂಗೆ 3666 ರೂಪಾಯಿಗಳಷ್ಟಿತ್ತು.
