ತುಮಕೂರು ಕಸಾಪದಲ್ಲಿ ಸೋಮವಾರದಂದು ಸುವರ್ಣ ಸಂಭ್ರಮ

ತುಮಕೂರು

     ತುಮಕೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ 50 ವರ್ಷ ಕಳೆದ ಹಿನ್ನಲೆಯಲ್ಲಿ ಇದೇ ಸೋಮವಾರದಂದು ಸುವರ್ಣ ಸಂಭ್ರಮ, ಸುವರ್ಣ ಸಾಹಿತ್ಯ ಸಭಾಂಗಣ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಬಾ.ಹ ರಮಾಕುಮಾರಿ ತಿಳಿಸಿದರು.

    ಸುದ್ದಿಗೋಷ್ಟಿ ಮಾತನಾಡಿದ ಅವರು ತುಮಕೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ 12 ಜನ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ನಾನು 13ನೇಯವರು. 13 ಬಾರಿ ಸಾಹಿತ್ಯ ಸಮ್ಮೇಳನಗಳು ನಡೆದಿವೆ. 50ವರ್ಷ ತುಂಬಿದ ಸಂದರ್ಭದಲ್ಲಿ ಸುವರ್ಣ ಸಂಭ್ರಮ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸುವರ್ಣ ಸಾಹಿತ್ಯ ಸಭಾಂಗಣವನ್ನು ಉದ್ಘಾಟಿಸಲಾಗುವುದು.

     ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಸಾಹಿತ್ಯ, ಕಲೆಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಆಯ್ದ ಗಣ್ಯರಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಲಾಗುವುದು ಎಂದರು ಸೋಮವಾರ 11 ಗಂಟೆ ಗೆ ಕನ್ನಡ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಖ್ಯಾತ ಲೇಖಕರು ಹಾಗು ಚಿಂತಕರ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಸಭಾಂಗಣವನ್ನು ಉದ್ಘಾಟಿಸುವರು, ಇದೇ 20 ರಂದು ನಮ್ಮ ನಾಡಿನ ಚಿಂತಕರೂ ಸಾಹಿತಿಗಳೂ ಚಲನಚಿತ್ರ ನಿರ್ದೇಶಕರೂ ಆದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪನವರು ಉದ್ಘಾಟಿಸುವರು.

     ಇವೆಲ್ಲದರ ಹಿಂದೆ ಅನೇಕರ ಸೇವೆ ಶ್ರಮ ಅಡಗಿದ್ದು, ಕಟ್ಟಡ ಸಮಿತಿಯ ಕಾರ್ಯಧ್ಯಕ್ಷರಾದ ಎಸ್. ನಾಗಣ್ಣ, ಹಾಲಿ ಪದಾಧಿಕಾರಿಗಳು, ಸಂಸದರು, ಶಾಸಕರು, ಮುಖ್ಯವಾಗಿ ಕೆ.ಎನ್.ರಾಜಣ್ಣನವರ ಕೊಡುಗೆ ಅನನ್ಯವಾಗಿದೆ ಎಂದರಲ್ಲದೆ, ಜಿಲ್ಲಾ ಲೇಖಕರ ಪುಸ್ತಕವನ್ನು ತುಮಕೂರು ವಿವಿಯ ಡಾ.ವೈ.ಎಸ್ ಸಿದ್ದೇಗೌಡ ಬಿಡುಗಡೆಗೊಳಿಸುವರು ಎಂದು ತಿಳಿಸಿದರು

       1971 ರಲ್ಲಿ ಬಿ.ಶಿವಮೂರ್ತಿಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಮೊದಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆಯಿತು. 2ನೇ ಅಧ್ಯಕ್ಷರಾಗಿದ್ದ ಡಿ.ಪಾಶ್ರ್ವನಾಥ್ ಅವರ ಅವಧಿಯಲ್ಲಿ ತಿಪಟೂರಿನಲ್ಲಿ ಕೆ.ವೆಂಕಟರಾಮಪ್ಪ ಅವರ ಅಧ್ಯಕ್ಷತೆಯಲ್ಲಿ 2ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಿತು. 3ನೇ ಅಧ್ಯಕ್ಷರಾದ ಶಾಂತಾಸನ್ಮತಿಕುಮಾರ್ ಅವರ ಅವಧಿಯಲ್ಲಿ 1982ರಲ್ಲಿ 3ನೇ ಅಖಿಲ ಭಾರತ ಲೇಖಕಿಯರ ಸಮ್ಮೇಳನ ನಡೆದು ರಾಜ್ಯಮಟ್ಟದಲ್ಲಿ ಅಭೂತಪೂರ್ವ ಹೆಸರು ಪಡೆಯಿತು.

ಹೀಗೆ ಇಲ್ಲಿಯವರೆಗು ಒಟ್ಟು 13 ಜನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. 13ನೆಯ ಅಧ್ಯಕ್ಷರಾಗಿ ಬಾ.ಹ.ರಮಾಕುಮಾರಿ ಕಾರ್ಯನಿರ್ವಹಿಸುತ್ತಿದ್ದು, 13 ಜಿಲ್ಲಾ ಸಮ್ಮೇಳನಗಳು ನಡೆದಿವೆ ಎಂದರು.
ಮೇ20ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ “ಸುವರ್ಣ ಸಂಭ್ರಮ’’ದಲ್ಲಿ ನೆಲಮಹಡಿಯಲ್ಲಿ “ಸುವರ್ಣ ಸಾಹಿತ್ಯ ಸಭಾಂಗಣ”ದ ಉದ್ಘಾಟನೆ, ತುಮಕೂರು ಜಿಲ್ಲಾ ಸಾಹಿತಿಗಳ ಮಾಹಿತಿಕೋಶ ಬಿಡುಗಡೆ, “ತುಮಕೂರು ಜಿಲ್ಲಾ ಲೇಖಕರ ಪುಸ್ತಕಗಳ ಕಣಜ” ಉದ್ಘಾಟನೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರು, ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದವರಿಗೆ, ಎಲ್ಲಾ ತಾಲ್ಲೂಕುಗಳ ಎಲ್ಲಾ ಮಾಜಿ ಅಧ್ಯಕ್ಷರುಗಳು, ಕಸಾಪದ ಹಿರಿಯ ಸದಸ್ಯರುಗಳು ಹಾಗೂ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಜಿಲ್ಲೆಯ ಎಲ್ಲಾ ಆಜೀವ ಸದಸ್ಯರು, ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.ಪತ್ರಿಕಾ ಗೋಷ್ಠಿಯಲ್ಲಿ ಮರುಳಯ್ಯ, ರಾಕ್‍ಲೈನ್ ರವಿಕುಮಾರ್, ಗೋವಿಂದಪ್ಪ, ನಂ. ರಾಜು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link