ರೈತರಿಗೆ ಮಂಜೂರಾದ ಹಣ ದುರ್ಬಳಕೆ ಆರೋಪ

ಚಳ್ಳಕೆರೆ

       ಕಳೆದ ಹಲವಾರು ವರ್ಷಗಳ ಬರದ ಹಿನ್ನೆಲ್ಲೆಯಲ್ಲಿ ಇಲ್ಲಿನ ರೈತ ಸಮುದಾಯ ಹೆಚ್ಚಿನ ಸಂಕಷ್ಟಗಳನ್ನು ಎದುರಿಸಿ ಜೀವನ ನಿರ್ವಹಿಸುತ್ತಿದ್ದು, ತಮ್ಮ ಜಮೀನಿನ ಅಭಿವೃದ್ಧಿ ಹಾಗೂ ಬೆಳೆ ಸಾಲ ಸಿಗುವ ಹಿನ್ನೆಲ್ಲೆಯಲ್ಲಿ ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್‍ಗೆ ಭೇಟಿ ನೀಡಿ ಮಧ್ಯವರ್ತಿ ಸಹಾಯದಿಂದ ಪಡೆದ ಸಾಲದಲ್ಲಿ ರೈತರ ಅರಿವಿಗೆ ಬಾರದಂತೆ ಹೆಚ್ಚು ಹಣವನ್ನು ರೈತರ ಖಾತೆಯಿಂದ ಪಡೆದ ಘಟನೆ ನಡೆದಿದೆ. ರಾಜ್ಯ ಸರ್ಕಾರ ರೈತರು ಪಡೆದ ಎಲ್ಲಾ ಸಾಲ ಮನ್ನಾ ಮಾಡಲಿದೆ ಎಂಬ ಆಲೋಚನೆಯಿಂದ ಬ್ಯಾಂಕ್‍ಗೆ ಮುಗಿಬಿದ್ದ ರೈತರು ಸಾಲದ ಹೆಸರಿನಲ್ಲಿ ಅಲ್ಪಹಣಕ್ಕೆ ಹೆಚ್ಚು ಹಣ ಪಾವತಿಸಬೇಕಾದ ಸ್ಥಿತಿ ಒದಗಿದೆ.

         ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ತಮ್ಮ ಜಮೀನುಗಳ ಅಭಿವೃದ್ಧಿ, ಬೆಳೆ ಸಾಲವೂ ಸೇರಿದಂತೆ ಹಲವಾರು ವಿಧಗಳಲ್ಲಿ ಸಾಲ ಪಡೆಯುವುದು ಸ್ವಾಭಾವಿಕ. ಸಾಲ ಪಡೆಯುವ ಸಂದರ್ಭದಲ್ಲಿ ಕೆಲವೊಮ್ಮೆ ಬ್ಯಾಂಕ್‍ನ ವ್ಯವಸ್ಥಾಪಕರು ರೈತರಿಗೆ ಸೂಕ್ತವಾಗಿ ಸ್ಪಂದಿಸದ ಕಾರಣ ಕೆಲವೆಡೆ ರೈತರು ಮದ್ಯವರ್ತಿಯ ಮೊರೆ ಹೋಗುತ್ತಾರೆ. ಈ ಹಿನ್ನೆಲ್ಲೆಯಲ್ಲಿ ಮದ್ಯವರ್ತಿಯೇ ರೈತರಿಗೆ ಸಾಲ ಕೊಡಿಸುವ ನೆಪದಲ್ಲಿ ರೈತರಿಗೆ ನೀಡಬೇಕಾದ ಹಣವನ್ನು ರೈತರ ಗಮನಕ್ಕೆ ಬಾರದೆ ಪಡೆದುಕೊಂಡಿರುವುದಾಗಿ ರೈತರು ಆರೋಪಿಸಿದ್ಧಾರೆ.

        ತಾಲ್ಲೂಕಿನ ಮೀರಸಾಬಿಹಳ್ಳಿ, ಹೊಟ್ಟೆಪ್ಪನಹಳ್ಳಿ, ಮದಕರಿನಗರ, ಗೌರಸಮುದ್ರ, ಚನ್ನಮ್ಮನಾಗತಿಹಳ್ಳಿ, ಪಗಡಲಬಂಡೆ, ಸಿದ್ದಾಪುರ ಗ್ರಾಮದ ರೈತರು ನಮಗೆ ಬ್ಯಾಂಕ್‍ನಿಂದ ಮಂಜೂರಾರ ಸಾಲದ ಮೊತ್ತ ನಮ್ಮ ಖಾತೆಗೆ ಪೂರ್ಣ ಪ್ರಮಾಣದ ಜಮಾವಾಗದೆ ನಮ್ಮ ಸಹಿಯನ್ನು ಮಾಡಿ ಮದ್ಯವರ್ತಿಯೊಬ್ಬರು ಲಪಟಾಯಿಸಿದ್ಧಾರೆಂದು ಹೇಳಿಕೆ ನೀಡಿದ್ಧಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಲು ರೈತರು ನಿರ್ಧರಿಸಿದ್ಧಾರೆ.

        ಈ ಬಗ್ಗೆ ಕೂಲಂಕುಷ ತನಿಖೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಇನ್ನೂ ಹೆಚ್ಚಿನ ರೈತರು ಮೊಸಹೋದ ಬಗ್ಗೆ ಆಕ್ರೋಶಗೊಂಡಿದ್ದು, ತಮಗೆ ನ್ಯಾಯಯುತವಾಗಿ ದೊರೆಯಬೇಕಾದ ಸಾಲದ ಹಣವನ್ನು ಕೊಡಿಸಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದು ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‍ನ ಅಧಿಕಾರಿಗಳು ಹಾಗೂ ಮದ್ಯವರ್ತಿ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸಿದ ನಂತರ ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಪ್ರಕರಣ ದಾಖಲಿಸುವುದಾಗಿ ಪಿಎಸ್‍ಐ ಕೆ.ಸತೀಶ್‍ನಾಯ್ಕ ಮಾಹಿತಿ ನೀಡಿದ್ಧಾರೆ.

       ಮೀರಸಾಬಿಹಳ್ಳಿಯ ಓಂಕಾರಮೂರ್ತಿಗೆ 11 ಲಕ್ಷ ಸಾಲ ಮಂಜೂರಾಗಿದ್ದು, 7 ಲಕ್ಷ ಮಾತ್ರ ನೀಡಿ, ಉಳಿದ ಹಣ 4 ಲಕ್ಷ ತನಗೆ ನೀಡಿಲ್ಲವೆಂದು ಆರೋಪಿಸುತ್ತಾನೆ. ಹೊಟ್ಟೆಪ್ಪನಹಳ್ಳಿಯ ಚಂದ್ರಶೇಖರಯ್ಯ 9.50 ಲಕ್ಷ ನನಗೆ ಮಂಜೂರಾಗಿದ್ದು, 3.25 ಲಕ್ಷ ಮಾತ್ರ ನನಗೆ ನೀಡಿ ಉಳಿದ ಹಣ ನೀಡದೆ ನನಗೆ ವಂಚಿಸಿದ್ಧಾರೆಂದು ಆರೋಪಿಸಿದ್ದಾನೆ. ಮದಕರಿನಗರದ ವಿರೇಶ್ ನನಗೆ 7.50 ಲಕ್ಷ ಸಾಲ ಮಂಜೂರಾಗಿದ್ದು, 2.35 ಲಕ್ಷ ಮಾತ್ರ ನನಗೆ ನೀಡಿ, ಉಳಿದ 5.15 ಲಕ್ಷ ಹಣ ನೀಡದೆ ವಂಚಿಸಲಾಗಿದೆ ಎಂದಿದ್ಧಾನೆ. ಪಗಡಲಬಂಡೆ ಸಿದ್ದಲಿಂಗಪ್ಪ 12.5 ಲಕ್ಷ ಸಾಲ ಮಂಜೂರಾಗಿದ್ದು 6.80 ಲಕ್ಷ ನೀಡಿ, ಉಳಿದ 5.70 ಲಕ್ಷ ಹಣವನ್ನು ವಂಚಿಸಲಾಗಿದೆ ಎಂದು ದೂರಿದ್ದಾನೆ.

         ಚನ್ನಮ್ಮನಾಗತಿಹಳ್ಳಿಯ ಭೀಮಪ್ಪ 14.50 ಲಕ್ಷ ಮಂಜೂರಾಗಿದ್ದು, 5.50 ಲಕ್ಷ ಮಾತ್ರ ನನಗೆ ನೀಡಿದ್ದು, ಉಳಿದ 8.50 ಲಕ್ಷ ಹಣ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದ್ದಾನೆ. ಗೌರಸಮುದ್ರದ ಚಿತ್ತಕ್ಕ 7.80 ಲಕ್ಷ ಹಣ ಮಂಜೂರಾಗಿದ್ದು, 3 ಲಕ್ಷ ಮಾತ್ರ ನೀಡಿ, ಉಳಿದ 4.80 ಲಕ್ಷ ಹಣ ವಂಚಿಸಿದ್ದಾರೆಂದು ದೂರಿದ್ದಾನೆ. ಪಗಡಲಬಂಡೆಯ ಎಸ್.ಸಿದ್ದಲಿಂಗಪ್ಪ, 16 ಲಕ್ಷ ಮಂಜೂರಾಗಿದ್ದು, 2 ಲಕ್ಷ ನೀಡಿ ಉಳಿದ 14 ಲಕ್ಷ ಹಣವನ್ನು ವಂಚಿಸಲಾಗಿದೆ ಎಂದು ದೂರಿದ್ದಾನೆ. ಹೀಗೆ ಅನೇಕ ರೈತರು ವಂಚಿತರಾಗಿದ್ದು, ಸುಮಾರು 1 ಕೋಟಿಗೂ ಹೆಚ್ಚು ಹಣವನ್ನು ರೈತರಿಗೆ ವಂಚಿಸಲಾಗಿದ್ದು, ಸೋಮವಾರ ಮತ್ತಷ್ಟು ರೈತರು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡುವರು ಎಂದು ರೈತರು ಮಾಹಿತಿ ನೀಡಿದ್ಧಾರೆ.

        ಈ ಬಗ್ಗೆ ಮಾಹಿತಿ ನೀಡಿದ ಚಂದ್ರಶೇಖರಪ್ಪ, ಕಳೆದ 2017ರಲ್ಲಿ ಎಲ್ಲಾ ವ್ಯವಹಾರಗಳು ನಡೆದಿದ್ದು, ಇತ್ತೀಚೆಗೆ ರೈತರೊಬ್ಬರು ಸಾಲದ ಬಗ್ಗೆ ಮಾಹಿತಿ ಪಡೆಯುವ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಹೆಚ್ಚು ಸಾಲದ ಹಣವಿತ್ತು. ಇದರಿಂದ ವಿಚಲಿತನಾದ ಅವರು ಇತರೆ ರೈತರಿಗೂ ಸಹ ಮಾಹಿತಿ ನೀಡಿ ನಂತರ ಬ್ಯಾಂಕ್‍ನ ಕೇಂದ್ರ ಕಚೇರಿಗೆ ಭೇಟಿ ನೀಡಿದಾಗ ಈ ಮೋಸದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link