ಭಾಷೆ ಮೇಲೆ ಹಿಡತ ಇದ್ದಲ್ಲಿ ಸಾಧನೆ ಸಾಧ್ಯ

ದಾವಣಗೆರೆ:

    ಬಾಷೆಯ ಮೇಲೆ ಹಿಡಿತವಿದ್ದರೆ ಮಾತ್ರ ವ್ಯಕ್ತಿಯು ಉನ್ನತ ಮಟ್ಟಕ್ಕೆ ಬರಲುಸಾಧ್ಯವಿದೆ ಎಂದು ಮಿಲ್ಲತ್ ವಿದ್ಯಾಸಂಸ್ಥೆಯ ಗೌರವಕಾರ್ಯದರ್ಶಿ ಸೈಯದ್ ಸೈಪುಲ್ಲಾ ತಿಳಿಸಿದರು.

    ಮಿಲ್ಲತ್ ವಿದ್ಯಾಮತ್ತು ಕಲ್ಯಾಣ ಸಂಸ್ಥೆಯ ಎಸ್.ಕೆ.ಎ.ಹೆಚ್.ಪದವಿಪೂರ್ವ ಕಾಲೇಜಿನಲ್ಲಿ ಹಿಂದಿ-ದಿವಸ್ ಕಾರ್ಯಕ್ರಮವನ್ನು ಉದ್ಗಾಡಿಸಿಮಾತನಾಡಿದ ಅವರು ಮಾತೃಬಾಷೆ ಹಾಗೂ ರಾಷ್ಟ್ರ ಭಾಷೆಗಳ ಮಹತ್ವದ ಬಗ್ಗೆ ವಿಧ್ಯಾರ್ಥಿಗಳಿಗೆ ಸವಿವಿರವಾಗಿ ಮನದಟ್ಟಾಗುವಂತೆ ತಿಳಿಸುತ್ತಾ.

    ಸ್ಪಷ್ಟ ಉಚ್ಚಾರಣೆ ಹಾಗೂ ಬಾಷೆಯ ಮೇಲಿನ ಹಿಡಿತವುದ್ದರೆ.ಮಾತ್ರ ನಾವು ಆಧುನಿಕಹಾಗೂ ಸ್ಷರ್ಧಾತ್ಮಕ ಜಗತ್ತಿನಲ್ಲಿ ಉನ್ನತಮಟ್ಟಕ್ಕೆ ಬರಲುಸಾದ್ಯವಿದೆ ಎಂದುಹೇಳಿದರು.ಉತ್ತರ ಬಾರತದವರು ತಮ್ಮ ಮಾತೃಭಾಷೆಯ ಮೇಲೆ ಹಿಡಿತವಿದ್ದುದರಿಂದಲೇ.ಐಎಸ್,ಮತ್ತು ಐಪಿಎಸ್,ಸ್ಫರ್ದಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಾಗಿ ತೇರ್ಗಡೆಯಾಗುತ್ತಿದ್ದಾರೆಂದು ತಿಳಿಸಿದರು.

     ಮಹಾನಗರಪಾಲಿಕೆಯ ಉಪಮೇಯರ್ ಚಮನ್ ಸಾಬ್ ಇವರುಮುಖ್ಯ ಅತಿಥಿಯಾಗಿ ಆಗಮಿಸಿ ತಮ್ಮ ವಿದ್ಯಾರ್ಥಿ ಕಾಲದಲ್ಲಿ ಹಿಂದಿ ಭಾಷೆಯನ್ನು ಅಭ್ಯಾಸ ಮಾಡಿದುದರಬಗ್ಗೆ ತಿಳಿಸಿದರು.ಕಾಲೇಜಿನ ಪ್ರಾಚಾರ್ಯರಾಧ ಡಾ.ದಾವೂದ್ ಮೋಸಿನ್ ರವರು ಹಿಂದಿಉರ್ದು ಭಾಷೆಯ ಪ್ರಸಿದ್ದ ಕಾದಂಬರಿಕಾರ ಮುಂಶಿ ಪ್ರೇಮಚಂದರ ಭಾಷೆಯ ಸೊಗಡು ಹಾಗೂ ಅವರಲ್ಲಿದ್ದಂತಹ ಸಮಾಜ ಸುಧಾರಣೆಯ ಕೃತಿಗಳಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

       ಕಾರ್ಯಕ್ರಮದಲ್ಲಿ ಡಾ.ಜುಲ್ಕರ್‍ನೈಟ್ ಬಾಷ ಸಂಸ್ಥೆಯ ಆಡಳಿತಾಧಿಕಾರಿ ಸೈಯದ್ ಅಲಿಸಾಬ್.ಉಪನ್ಯಾಸಕರಾಧ ಸಿದ್ದಪ್ಪ.ಶೇಖರಪ್ಪ. ಡಾ!ಹೇಮರೆಡ್ಡಿ ಗಂಗಪ್ಪಳವರ,ಮುಹೀಬುಲ್ಲಾ,ಬಷೀರ್ ಮೊಹಮ್ಮದ್,ವಿಜಯ್,ಎಂ.ಆರ್. ರಹಮ್ಮತ್ ಉಲ್ಲಾಖಾನ್ . ಹನುಮಂತರಾವ್ . ಉಪಸ್ಥಿತರಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link