ಭರಣಿ ಹಾಗೂ ಆರಿದ್ರಾ ಮಳೆ : ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತ

ಮಿಡಿಗೇಶಿ

     ನಮ್ಮ ಹಿರಿಯರ ಅನುಭವದಂತೆ ಭರಣಿ ಮಳೆ ಬಂದಲ್ಲಿ ಧರಣಿಯೆಲ್ಲಾ ಸಂತೃಪ್ತ ಬೆಳೆಯಾಗಲಿದೆ ಎಂಬ ಗಾದೆಯಂತೆ ಈ ವರ್ಷ ಸ್ವಲ್ಪ ಮಟ್ಟಿಗೆ ಕಾಲಕಾಲಕ್ಕೆ ಅಲ್ಪಸ್ವಲ್ಪ ಮಳೆಯು ಮಧುಗಿರಿ ತಾಲ್ಲೂಕಿನಲ್ಲಿ ಬಂದಿರುತ್ತದೆ. ಪ್ರತಿ ವರ್ಷವು ಆಷಾಢ ಮಾಸದಲ್ಲಿ ಆರಿದ್ರಾ ಮಳೆಯು ರೈತರು ಬಿತ್ತಿದ ಬೀಜಗಳ ಮೊಳಕೆಯೊಡೆಯುವ ಸಂದರ್ಭದಲ್ಲಿ ಮಳೆ ಬಾರದೆ ಕೈ ಕೊಡುತ್ತಿತ್ತು.

      ಆದರೆ ಈ ವರ್ಷ ಮೂರ್ನಾಲ್ಕು ದಿನಗಳಿಂದ ಅಲ್ಪಸ್ವಲ್ಪ ಮಳೆ ಬಂದು ರೈತಾಪಿ ವರ್ಗದವರು ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಿದ ಬೀಜ ಬಿತ್ತಿದ್ದಾರೆ. ಈ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಿಂದ ಉತ್ತಮ ಫಸಲು ಬೆಳೆಯಬಹುದೆಂದು ಸಂತಸದಲ್ಲಿದ್ದಾರೆ. ಆದರೆ ತಾಲ್ಲೂಕಿನ ಎಲ್ಲಾ ರೈತರಲ್ಲಿ, ಜನಸಾಮಾನ್ಯರಲ್ಲಿ ಬಹುದೊಡ್ಡ ಆತಂಕ ಕೋವಿಡ್-19 ಎಂಬ ಮಹಾಮಾರಿ ಕಾಯಿಲೆಗೆ ಹೆದರುವಂತಾಗಿದೆ.

     ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ಕೋವಿಡ್-19ರ ಕಾಯಿಲೆ ಬರದಂತೆ ಪ್ರತಿಯೊಬ್ಬ ನಾಗರಿಕರೂ ಸಹ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ ಬಳಸುವಂತೆ, ಮಾಸ್ಕ್‍ನ್ನು ಮುಖಕ್ಕೆ ಹಾಕಿಕೊಳ್ಳುವುದನ್ನು ಮರೆಯಬಾರದಷ್ಟೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap