ಹುಳಿಯಾರು
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ವಿವಿಧೆಡೆಗಳಲ್ಲಿ ಭಾನುವಾರ ರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಗುಡುಗು ಮತ್ತು ಮಿಂಚಿನ ಆರ್ಭಟದೊಂದಿಗೆ ರಾತ್ರಿ 10-30 ರ ಸುಮಾರಿಗೆ ಆರಂಭವಾದ ಮಳೆಯು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ. ಪಟ್ಟಣದ ರಸ್ತೆಗಳಲ್ಲಿ ಮಳೆ ನೀರಿನ ಜೊತೆ ಚರಂಡಿಗಳು ತ್ಯಾಜ್ಯಾ ಹೋಟಲ್‍ಗಳ ಟೀ ಲೋಟಗಳು ಹರಿದವು.
ತೀವ್ರವಾದ ಬಿಸಿಯ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಸ್ವಲ್ಪ ತಂಪೆರೆದಂತಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿ ಕೃಷಿ ಚಟುವಟಿಕೆಗಳ ಆರಂಭಕ್ಕೆ ಚಿಂತನೆ ಮಾಡಿದ್ದಾರೆ.
ಮುಂಗಾರಿನ ಆರಂಭದಲ್ಲೆ ಉತ್ತಮ ಮಳೆಯ ಮುನ್ಸೂಚನೆ ಇರುವ ಕಾರಣ ಈ ಬಾರಿ ಕೆರೆ ಕುಂಟೆಗಳಿಗೆ ನೀರು ಬಂದು ಅಂತರ್ಜಲದ ಮಟ್ಟ ವೃದ್ಧಿಯಾಗಿ ನೀರಿನ ಬವಣೆ ತಪ್ಪಿದರೆ ಸಾಕು ಎನ್ನುತ್ತಾರೆ ನಾಗರಿಕರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








