ಶಿವಕುಮಾರಸ್ವಾಮಿಗಳ ಪುಣ್ಯಾರಾಧನೆಗೆ ಅಕ್ಕಿ ನೀಡಿದ ವೀರಶೈವ ವರ್ತಕ ವೃಂದ

ಚಳ್ಳಕೆರೆ

        ವಿಶ್ವಮಟ್ಟದಲ್ಲಿ ನಡೆದಾಡುವ ದೇವರಾಗಿ ಸಮಸ್ತ ಜನರ ಆದರ್ಶಮಯ ವ್ಯಕ್ತಿಯಾಗಿ 111 ವರ್ಷಗಳ ಕಾಲ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ ಶಿಕ್ಷಣ, ದಾಸೋಹಿ ಹಾಗೂ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಲಿಂಗೈಕ ಜಗದ್ಗುರು ಸಿದ್ದಗಂಗಾ ಮಠದ ಶ್ರೀಶಿವಕುಮಾರಸ್ವಾಮಿಯವರ ಪುಣ್ಯಾರಾಧನೆ ಕಾರ್ಯಕ್ರಮ ಜ.31ರ ಗುರುವಾರ ನಡೆಯಲಿದೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುವ ಈ ಕಾರ್ಯಕ್ಕೆ ಚಳ್ಳಕೆರೆ ನಗರದ ಭಕ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳು ಒಂದು ಲೋಡ್ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ಶ್ರೀಮಠಕ್ಕೆ ಮಂಗಳವಾರ ಕಳುಹಿಸಿಕೊಟ್ಟರು.

        ಈ ಬಗ್ಗೆ ಮಾಹಿತಿ ನೀಡಿದ ತಾಲ್ಲೂಕು ವೀರಶೈವ ಸೇವಾ ಸಮಾಜದ ಅಧ್ಯಕ್ಷ ಎಚ್.ಗಂಗಣ್ಣ, ಪೂಜ್ಯ ಸ್ವಾಮೀಜಿಯವರ ಶಿಕ್ಷಣ ಹಾಗೂ ದಾಸೋಹ ಕಾರ್ಯಕ್ರಮ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿದೆ. ಅವರ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ವೀರಶೈವ ಸಮಾಜದ ಎಲ್ಲಾ ಸಂಘಟನೆ, ದಲ್ಲಾಲರ ಸಂಘ ಮತ್ತು ವರ್ತಕ ವೃಂದ ಒಂದು ಲೋಡ್ ಅಕ್ಕಿ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಲಾರಿಯ ಮೂಲಕ ಶ್ರೀಮಠಕ್ಕೆ ನೀಡಿದ್ದಾರೆ. ಇಲ್ಲಿನ ಎಲ್ಲಾ ಭಕ್ತರು ಈ ಕಾರ್ಯಕ್ಕೆ ತುಂಬಾ ಸಹಕಾರ ನೀಡಿದ್ದು, ಎಲ್ಲರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.

         ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ.ಅರವಿಂದ್, ಉಪಾಧ್ಯಕ್ಷ ಡಿ.ಎಂ.ತಿಪ್ಪೇಸ್ವಾಮಿ, ವೃಷಬೇಂದ್ರಪ್ಪ, ಕಿರಣ್‍ಕುಮಾರ್, ಕೆ.ಎಂ.ಜಗದೀಶ್, ಎಸ್.ರೇವಣ್ಣ, ವಂದನಾ ಮಿಲ್ ರಾಜು, ಈಶ್ವರಪ್ಪ, ಹೊಟ್ಟೆಪ್ಪನಹಳ್ಳಿ ಪ್ರಸನ್ನಕುಮಾರ್, ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap