ಬೆಂಗಳೂರು
ವಿಧಾನ ಪರಿಷತ್ 5 ಸ್ಥಾನಗಳಿಗೆ ನಾಮನಿರ್ದೇಶನಗೊಳಿಸಿ ರಾಜ್ಯಪಾಲ ವಜೂಬಾಯಿ ರುಡಾಬಾಯಿ ವಾಲಾಅಂಕಿತ ಹಾಕಿದ್ದಾರೆ.ಇಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರ ಭೇಟಿ ಬೆನ್ನಲ್ಲೆ ಅಧಿಕೃತ ಆದೇಶ ಹೊರಬಿದ್ದಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಲು ಕಳೆದ ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿತ್ತು.ಅಂತೆಯೇ ರಾಜಕೀಯ ವ್ಯಕ್ತಿಗ ಳಾಗಿದ್ದ ಭಾರತಿ ಶೆಟ್ಟಿ,ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಆಯ್ಕೆ ಬಗ್ಗೆ ಪಕ್ಷದಲ್ಲಿ ಭಾರೀ ಚೆರ್ಚೆಗೆ ಹುಟ್ಟು ಹಾಕಿತ್ತು.
ಮಾಜಿ ಸಚಿವ ಹಾಗೂ ಚಿತ್ರನಟ ಸಿ.ಪಿ,ಯೋಗೇಶ್ವರ್ ಅವರನ್ನು ಕಲಾ ಕ್ಷೇತ್ರದಿಂದ,ಅಡಗೂರು ಎಚ್.ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ,ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ಅವರನ್ನು ಸಮಾಜ ಸೇವಾ ಕ್ಷೇತ್ರದಿಂದ,ಶಾಂತಾರಾಮ್ ಬುಡೇನ್ ಸಿದ್ಧಿ ಅವರನ್ನು ವಿಶೇಷ ಪ್ರಕರಣ ಹಾಗ ಸಿದ್ದಿ ಸಮುದಾಯದ ಅಭಿವೃದ್ದಿಗೆ ನೀಡಿದ ಕೊಡುಗೆಗಾಗಿ,ಹಾಗೂ ಡಾ.ತಳವಾರ್ ಸಾಬಣ್ಣ ಅವರನ್ನು ಶಿಕ್ಷಣ ಕ್ಷೇತ್ರದಿಂದ ಶಿಫಾರಸ್ಸು ಮಾಡಲಾಗಿತ್ತು ಎನ್ನಲಾಗಿದೆ.
ರಾಜ್ಯಪಾಲರು ಭಾರತೀ ಶೆಟ್ಟಿ,ಸಿ.ಪಿ.ಯೋಗೀಶ್ವರ್,ಎಚ್.ವಿಶ್ವನಾಥ್ ನೇಮಕಕ್ಕೆ ಅನುಮೋದನೆ ನೀಡಲು ಒಪ್ಪಿಗೆ ನೀಡರಲಿಲ್ಲ ಎನ್ನಲಾಗಿದೆ.ಇಂದು ಬೆಳೆಗ್ಗೆ ರಾಜಭವನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ರಾಜ್ಯ ಪಾಲರ ಜೊತೆ ಚೆರ್ಚಿಸಿ ರಾಜಕೀಯ ವ್ಯಕ್ತಿಗಳ ನೇಮಕಕ್ಕೂ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು ಎನ್ನ ಲಾಗಿದೆ.
ಇತ್ತೀಚಗೆ ನಿವೃತ್ತಿ ಹೊಂದಿದ್ದ 9 ವಿಧಾನ ಪರಿಷತ್ ಸದಸ್ಯರ ಚುನಾವಣೆ ವೇಳೆ ಎಚ್.ವಿಶ್ವನಾಥ್ ಹಾಗು ಸಿ.ಪಿ. ಯೋಗೇಶ್ವರ್ ಗೆ ಟಿಕೆಟ್ ಕೈತಪ್ಪಿತ್ತು.ಆದರೆ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಪಕ್ಷದ ನಾಯ ಕರು ಅವಕಾಶ ನೀಡಿದ್ದರು.ಮಹಿಳಾ ಕೋಟಾದಿಂದ ಯಾರಿಗೂ ಅವಕಾಶ ನೀಡಿರಲಿಲ್ಲ.ಹೀಗಾಗಿ ನಾಮ ನಿರ್ದೇ ಶನದ ವೇಳೆ ಮಾಜಿ ಸಚಿವರು,ಮಾಜಿ ವಿಧಾನ ಪರಿಷತ್ ಸದಸ್ಯರಿಗೆ ಮತ್ತೆ ನಾಮ ನಿರ್ದೇಶನ ಮಾಡಿರುವುದು ವಿವಾದ ಹುಟ್ಟು ಹಾಕುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Vidhana_Soudha_750_1.gif)