ಬೆಂಗಳೂರು
IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಬಾಂಳ್ಕರ್ ಹಾಗೂ ಅಜಯ್ ಹಿಲೋರಿ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಸಿಬಿಐಗೆ ಅನುಮತಿ ನೀಡಿದೆ. ಹಲವು ದಿನಗಳಿಂದ ಪ್ರಾಸಿಕ್ಯೂಷನ್ ಗೆ ಸಿಬಿಐ ಅಧಿಕಾರಿಗಳು ಅನುಮತಿ ಕೇಳುತ್ತಲೇ ಬಂದಿದ್ದರು.
ಇಂದು ಕೊನೆಗೆ ರಾಜ್ಯಪಾಲರು ಹಾಗೂ ರಾಜ್ಯದ ಗೃಹ ಇಲಾಖೆಯಿಂದ ಆರೋಪಿತರ ಸ್ಥಾನದಲ್ಲಿರುವ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಸಿಬಿಐಗೆ ಅನುಮತಿ ನೀಡಿದೆ. ಈ ಮೂಲಕ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಬಾಂಳ್ಕರ್ ಹಾಗೂ ಅಜಯ್ ಹಿಲೋರಿ ಹಾಗೂ ಇತರೆ ಅಧಿಕಾರಿಗಳಿಗೆ ಈಗ ಸಂಕಷ್ಟ ಎದುರಾಗಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಕಿಂಗ್ ಪಿನ್ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಬಂಧನದ ವೇಳೆ ಕೆಲವು ಅಧಿಕಾರಿಗಳು ನನಗೆ ಅನುಕೂಲ ಮಾಡಲು ಇತ್ತಿಷ್ಟು ಹಣ ಪಡೆದಿದ್ದರು ಎಂದು ಆರೋಪಿಸಿದ್ದ. ಸಿಬಿಐ ತನಿಖೆ ವೇಳೆ ಹೇಮಂತ್ ನಿಬಾಂಳ್ಕರ್ ,ಅಜಯ್ ಹಿಲೋರಿ,ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಹಾಗೂ ಪಿಎಸ್ ಐ ಗೌರಿ ಶಂಕರ್ ಹಾಗೂ ಸಿಐಡಿ ಡಿವೈಎಸ್ಪಿ ಶ್ರೀಧರ್ ಹಣ ತಪ್ಪು ಮಾಡಿರೋದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಈ ಮಾಹಿತಿಯನ್ನು ಆಧರಿಸಿ ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳ ಮನೆ ಮೇಲೂ ದಾಳಿ ಮಾಡಲಾಗಿತ್ತು. ಸುದೀರ್ಘ ವಿಚಾರಣೆ ಕೂಡ ನಡೆದಿತ್ತು. ಸದ್ಯ ಸರ್ಕಾರದ ಅನುಮತಿಗೆ ಕಾಯುತ್ತಿದ್ದರು.ಅದು ಕೂಡ ಸಿಬಿಐಗೆ ಸಿಕ್ಕಿದ್ದು ಮುಂದೆ ಏನೆಲ್ಲಾ ಆಗುತ್ತೆ ಅನ್ನೋದು ಕೂತುಹಲ ಮೂಡಿಸಿದೆ. ತಪ್ಪಿತಸ್ಥ ಸ್ಥಾನದಲ್ಲಿರುವ ಅಧಿಕಾರಿಗಳ ವಿಚಾರಣೆ ಬಳಿಕ ಬಂಧನ ಕೂಡ ಆಗೋ ಸಾಧ್ಯತೆ ಇದೆ ಹಾಗೂ ಮೇಲ್ನೋಟಕ್ಕೆ ಆರೋಪ ಸಾಭೀತಾಗಿದ್ದು,ನ್ಯಾಯಾಲಯಕ್ಕೆ ಸದ್ಯದಲೇ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಕೆ ನಂತರ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ.. ಇನ್ನು ಐಎಂಎ ಬಹುಕೋಟಿ ವಂಚನೆಯಲ್ಲಿ ಸಾವಿರಾರು ಮಂದಿ ಹಣ ಹಾಕಿ ಕಳೆದುಕೊಂಡಿದ್ದರು..ಬರೋಬ್ಬರಿ 4000 ಸಾವಿರ ಕೋಟಿ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿತ್ತು. ಮೊದಲು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸರ್ಕಾರ ಎಸ್ ಐಟಿ ತನಿಖೆಗೆ ಕೇಸ್ ವರ್ಗಾವಣೆ ಮಾಡಿತ್ತು. ನಂತರ ಬಹುಕೋಟಿ ವಂಚನೆ ಪ್ರಕರಣವಾಗಿದ್ದರಿಂದ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಿತ್ತು. ಬಹುಕೋಟಿ ವಂಚನೆ ಪ್ರಕರಣವನ್ನು ಇಡಿ ಕೂಡ ತನಿಖೆ ನಡೆಸಿತ್ತು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
