ಕೊರೋನಾ ಬಗ್ಗೆ ಸರ್ಕಾರ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ : ಕೆಎನ್‍ಆರ್

ಮಧುಗಿರಿ

    ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಮಪರ್ಕವಾಗಿ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

    ಅವರು ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿನ ತಮ್ಮ ನಿವಾಸದಲ್ಲಿಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿನ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಜನರ ನಿರೀಕ್ಷೆಯಂತೆ ಇನ್ನೂ ಸರಿಯಾದ ಸೌಲಭ್ಯಗಳು ದೊರೆಯುತ್ತಿಲ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದೆ ಒಂದಾದರೆ, ವಾಸ್ತವವೆ ಬೇರೆಯಾಗಿದೆ. ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿಗಳು ಜೀವ ಭಯದಿಂದ ಸರಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಮೇಲೆ ಒತ್ತಡ ಏರುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ ಹಾಗೂ ಹೆಚ್ಚಾಗಿ ಕೋವಿಡ್‍ನಿಂದಲೆ ಮೃತಪಟ್ಟಿದ್ದಾರೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ.

    ಮಧುಗಿರಿ-ತುಮಕೂರು ಕೆಶಿಪ್ ರಸ್ತೆಯಲ್ಲಿ ಟೋಲ್‍ಗಳನ್ನು ನಿರ್ಮಿಸಿ ಹಣ ಸಂಗ್ರಹಣೆ ಮಾಡುತ್ತಿರುವುದು ಅವೈಜ್ಞಾನಿಕದಿಂದ ಕೂಡಿದೆ. ಸರ್ಕಾರ ಮೊದಲು ಸರ್ವಿಸ್ ರಸ್ತೆ ನಿರ್ಮಿಸಿ, ಆ ನಂತರ ಟೋಲ್ ಸಂಗ್ರಹಣೆ ಮಾಡಬೇಕಿತ್ತು. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ವಾಹನ ಸವಾರರಿಗೆ ಆರ್ಥಿಕ ಹೊಡೆತ ಬೀಳುತ್ತಿದೆ. ಆದರೆ ಈಗಿನ ಸರ್ಕಾರ ಟೋಲ್ ನಿರ್ಮಾಣ ಮಾಡಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

    ಶಿರಾ ಉಪಚುನಾವಣೆಗೆ ಸ್ಪರ್ಧಿಸುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶಿರಾ ಉಪಚುನಾವಣೆ ಸಂಬಂಧ ಈಗ ಮಾತನಾಡುವುದು ಸರಿಯಲ್ಲ. ದಿವಂಗತ ಸತ್ಯನಾರಾಯಣ ಅವರ ಪುಣ್ಯತಿಥಿ ಮುಗಿದ ನಂತರ ಸ್ಥಳೀಯ ನಾಯಕರ ಹಾಗೂ ಅಭಿಮಾನಿಗಳ ಅಭಿಪ್ರಾಯ ಪಡೆದು ಉಪ ಚುನಾವಣೆ ಬಗ್ಗೆ ಮಾಧ್ಯಮಗಳ ಮುಖಾಂತರ ಪ್ರತಿಕ್ರಿಯೆ ನೀಡಲಾಗುವುದು. ರಾಜಕಾರಣಿಗಳು ಯಾರೂ ಸನ್ಯಾಸಿಗಳಲ್ಲ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ.

    ಲಾಕ್‍ಡೌನ್‍ನಿಂದಾಗಿ ಬೆಂಗಳೂರಿನಲ್ಲಿದ್ದ ಯುವಕರು ಸ್ವಗ್ರಾಮಗಳತ್ತ ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಸ್ವಾಗತಾರ್ಹ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ಕೃಷಿ ಸಾಲ ನೀಡಲಾಗುತ್ತಿದ್ದು, ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶಿರಾ ತಾಲ್ಲೂಕಿನಲ್ಲಿ ಶೇ.62ರಷ್ಟು ಫಲಿತಾಂಶ ದೊರೆತಿರುವುದರಿಂದ ಶೈಕ್ಷಣಿಕ ಜಿಲ್ಲೆ ಮಧುಗಿರಿಯು ರಾಜ್ಯದಲ್ಲಿಯೇ ಮೂರನೆ ಸ್ಥಾನ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಶೇ. 100ರಷ್ಟು ಫಲಿತಾಂಶದೊಂದಿಗೆ 1ನೇ ಸ್ಥಾನ ಪಡೆದುಕೊಳ್ಳಬೇಕಾಗಿದೆ.

    ನಮ್ಮ ತಾಲ್ಲೂಕಿನಲ್ಲಿನ ಹೆಣ್ಣು ಮಕ್ಕಳಿಗೆ ಬಹುಬೇಗ ವಿವಾಹ ಮಾಡುತ್ತಿರುವುದರಿಂದ ವಿದ್ಯಾಭ್ಯಾಸ ಕುಂಠಿತವಾಗುತ್ತಿದ್ದು, ಅವರ ಮುಂದಿನ ಜೀವನದಲ್ಲಿ ಬಹಳ ದುಷ್ಟಪರಿಣಾಮಗಳನ್ನು ಎದುರಿಸುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಇಂತಹವುಗಳಿಗೆ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಬೇಕಾಗಿದೆ. ಪ್ರಸ್ತುತ ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗಳು ಕುಂಠಿತವಾಗಿದ್ದು, ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ದಿಪಡಿಸಬೇಕೆಂಬ ನನ್ನ ಕನಸನ್ನು ನನಸು ಮಾಡಲು ಮತದಾರರು ಮುಂದಿನ ಚುನಾವಣೆಯಲ್ಲಿ ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

    ಈ ಸಂದರ್ಭದಲ್ಲಿ ಕೆಎನ್‍ಆರ್ ಮತ್ತು ಆರ್‍ಆರ್ ಅಭಿಮಾನಿಗಳ ವತಿಯಿಂದ ತಾಲ್ಲೂಕಿನ ಪತ್ರಕರ್ತರಿಗೆ ದಿನಸಿ ಕಿಟ್‍ಗಳನ್ನು ಆರ್.ರಾಜೇಂದ್ರರವರು ವಿತರಿಸಿದರು. ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಹಾಗೂ ಕ್ರಿಬ್ಕೊ ರಾಷ್ಟ್ರೀಯ ನಿರ್ದೇಶಕ ಆರ್.ರಾಜೇಂದ್ರ, ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಎನ್.ಗಂಗಣ್ಣ, ಎಪಿಎಂಸಿ ಅಧ್ಯಕ್ಷ ಡಿ.ಶ್ರೀನಿವಾಸ್, ಪುರಸಭಾ ಸದಸ್ಯರಾದ ತಿಮ್ಮರಾಯಪ್ಪ, ಲಾಲಾಪೇಟೆ ಮಂಜುನಾಥ್, ಎಂ.ವಿ.ಮಂಜುನಾಥ್ ಆಚಾರ್, ಮುಖಂಡರಾದ ರಾಜಗೋಪಾಲ್, ಎಂ.ಕೆ.ನಂಜುಂಡಯ್ಯ, ಬಿ.ಎನ್. ನರಸಿಂಹಮೂರ್ತಿ, ನಾಗೇಶ್ ಬಾಬು ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap