ಸರ್ಕಾರದ ಆದೇಶವನ್ನು ಧಿಕ್ಕರಿಸಿದ ಸಂತ ಅಲೋಶಿಯಸ್ ಕಾಲೇಜು

ಹರಿಹರ :

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದ ಕಾರಣ ಸರ್ಕಾರ ಹೊರಡಿಸಿದ್ದ ರಜೆ ಆದೇಶವನ್ನು ಧಿಕ್ಕರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನೆಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

     ಸೋಮವಾರದಂದು ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್(81)ವರ್ಷ ವಿಧಿವಶರಾದ ಹಿನ್ನೆಲೆಯಲ್ಲಿ ಸರ್ಕಾರವು ಗೌರವ ಸೂಚಕವಾಗಿ ಮೂರು ದಿನ ಶೋಕಾಚರಣೆ ಹಾಗೂ ಒಂದು ದಿನ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

      ನಗರದ ಹೊರವಲಯದಲ್ಲಿರುವ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸಿ, ಎಂದಿನಂತೆ ಕಾಲೇಜನ್ನು ಪ್ರಾರಂಭಿಸಿ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾಲೇಜು ಪ್ರಾಂಶುಪಾಲರಿಗೆ ಒಬ್ಬ ಜ್ಞಾನಪೀಠ ಪುರಸ್ಕೃತ ವ್ಯಕ್ತಿ ನಿಧನ ಹೊಂದಿರುವುದು ತಿಳಿದಿದ್ದರೂ ಕೂಡ ತಮ್ಮ ಕಾಲೇಜಿನಲ್ಲಿ ಸಂಭ್ರಮದ ಆಚರಣೆಗಳನ್ನು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ. ಸರ್ಕಾರದ ರಜೆ ಘೋಷಣೆ ಮಾಡಿದ್ದರೂ ಕೂಡ ಕಾಲೇಜಿಗೆ ರಜೆ ಕೊಡದೆ ತಮ್ಮ ಕಾರ್ಯಕ್ರಮಗಳನ್ನು ನೆಡೆಸಿದ್ದಾರೆ.

      ತಾಲೂಕಿನ ಎಲ್ಲಾ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಿಗು ರಜೆ ಘೋಷಣೆಯಾಗುತ್ತಿದ್ದಂತೆ ರಜೆ ಘೋಷಿಸಲಾಗಿತ್ತು. ಆದರೆ ಶಿಷ್ಟಾಚಾರವಿಲ್ಲದ ಕಾಲೇಜುಗಳಲ್ಲಿ ಜ್ಞಾನಪೀಠ ಪುರಸ್ಕೃತ ವ್ಯಕ್ತಿಗಿಂತ ಕಾಲೇಜಿನ ಕಾರ್ಯಕ್ರಮಗಳು ಮುಖ್ಯವಾಗಿವೆ. ಇದನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಹಾಗೂ ಅಧ್ಯಾಪಕರು ಅರ್ಥ ಮಾಡಿಕೊಳ್ಳಬೇಕಾಗಿತ್ತು.

      ನಾಡಿನ ಹೆಸರಾಂತ ಹಿರಿಯ ಸಾಹಿತಿ ನಿಧನ ಹೊಂದಿರುವುದು ಇಡಿ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಮಾಡಿರುವುದು ಮುರ್ಖತನವೆನಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link