ಮಾಗಡಿ:
ಇಲ್ಲಿಗೆ ಸಮೀಪದ ಕಾಳಿಂಗಯ್ಯನ ಪಾಳ್ಯದ ಬಳಿ ಭಾನುವಾರ ನಡೆದ ಅಪಘಾತದಲ್ಲಿ ತಲಕಾಡು ಮಠದ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿ ಶಿವಶಂಕರ್ ತಿಳಿಸಿದರು. ಹೊನ್ನುಡಿಕೆ ಗ್ರಾಮದ ಭಕ್ತರ ಮನೆಯಲ್ಲಿ ನಡೆಯಲಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಾಮೀಜಿ ಕುದೂರು ಮಾರ್ಗವಾಗಿ ಹೊನ್ನುಡಿಕೆಗೆ ಹೋಗುವಾಗ ಅಪಘಾತ ನಡೆದಿದೆ.
ರಸ್ತೆ ದಾಟುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟೆಂಪೊ ಟ್ರಾವಲರ್ಸ್‍ನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಹಿಂದೆ ಬರುತ್ತಿದ್ದ ಸ್ವಾಮಿಜಿ ಕಾರಿನ ಚಾಲಕ ಟಿಟಿ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ್ದಾನೆ. ಸ್ವಾಮೀಜಿ ಕಾರು ಜಖಂಗೊಂಡಿದೆ. ಸ್ವಾಮೀಜಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಚಾಲಕ ಗಾಯಗೊಂಡಿದ್ದಾನೆ. ಹೊನ್ನುಡಿಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








