ಹುಳಿಯಾರು:
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು ಪರೀಕ್ಷೆಗೆ ಕುಳಿತಿದ್ದ 265 ವಿದ್ಯಾರ್ಥಿಗಳ ಪೈಕಿ 242 ವಿದ್ಯಾರ್ಥಿಗಳು ಉತ್ತಿರ್ಣರಾಗುವ ಮೂಲಕ ಶೇ.91.3 ಫಲಿತಾಂಶ ಲಭಿಸಿದೆ. ಇವರಲ್ಲಿ 34 ಮಂದಿ ಅತ್ಯುನ್ನತ ಶ್ರೇಣಿ, 177 ಮಂದಿ ಪ್ರಥಮ ಶ್ರೇಣಿ, 25 ಮಂದಿ ದ್ವಿತೀಯ ಶ್ರೇಣಿ ಹಾಗೂ 6 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಿಂದ 75 ಮಂದಿ ಪರೀಕ್ಷೆಗೆ ಕುಳಿತಿದ್ದು 70 ಮಂದಿ ಉತ್ತೀರ್ಣರಾಗುವ ಮೂಲಕ ಶೇ.93.3 ಫಲಿತಾಂಶ ಲಭಿಸಿದೆ. ಇದರಲ್ಲಿ 9 ಮಂದಿ ಅತ್ಯುನ್ನತ, 51 ಮಂದಿ ಪ್ರಥಮ, 8 ಮಂದಿ ದ್ವಿತೀಯ ಹಾಗೂ ಇಬ್ಬರು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಎನ್.ಆರ್.ಹೇಮಂತ್ (551), ಕೆ.ದೀಪಿಕಾ (538), ಆರ್.ಎ.ಮಂಜುನಾಥ್ (531) ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ವಾಣಿಜ್ಯ ವಿಭಾಗದಿಂದ 131 ಮಂದಿ ಪರೀಕ್ಷೆ ಬರೆದಿದ್ದು ಇವರಲ್ಲಿ 123 ಮಂದಿ ಉತ್ತೀರ್ಣರಾಗುವ ಮೂಲಕ ಶೇ.93.9 ಫಲಿತಾಂಶ ಲಭಿಸಿದೆ. ಇದರಲ್ಲಿ 22 ಮಂದಿ ಅತ್ಯುನ್ನತ, 86 ಮಂದಿ ಪ್ರಥಮ, 11 ದ್ವಿತೀಯ ಹಾಗೂ 4 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಎನ್.ಎಸ್.ಗೀತಾ (566), ಟಿ.ಎಸ್.ನಂದಿನಿ (562), ಡಿ.ಡಿ.ಹರೀಶ್ (555) ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ವಿಜ್ಞಾನ ವಿಭಾಗದಿಂದ 59 ಮಂದಿ ಪರೀಕ್ಷೆಗೆ ಕುಳಿತಿದ್ದು 49 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 83.1 ಫಲಿತಾಂಶ ಲಭಿಸಿದೆ. ಇದರಲ್ಲಿ 3 ಮಂದಿ ಅತ್ಯುನ್ನತ, 40 ಮಂದಿ ಪ್ರಥಮ, 6 ಮಂದಿ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಎಸ್.ಬಿ.ವಸಂತಲಕ್ಷ್ಮೀ (541), ಕೆ.ಎಸ್.ಹೇಮಲತಾ (524), ಎಸ್.ಆರ್.ರಂಜಿತಾ (510) ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಅಲ್ಲದೆ ಎಸ್.ಬಿ.ವಸಂತಲಕ್ಷ್ಮೀ ಅವರು ಗಣಿತ ವಿಷಯದಲ್ಲಿ, ಎಚ್.ಎಸ್.ಸಾಧಿಕಾ ಅವರು ಅರ್ಥಶಾಸ್ತ್ರ ವಿಷಯದಲ್ಲಿ, ಟಿ.ಎಸ್.ನಂದಿನಿ ಅವರು ವ್ಯವಹಾರ ಅಧ್ಯಯನದಲ್ಲಿ, ಎನ್.ಎಸ್.ಗೀತಾ ಅವರು ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಜೊತೆಗೆ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಐಶ್ಚಿಕ ಕನ್ನಡದಲ್ಲಿ ಪರೀಕ್ಷೆ ಬರೆದವರೆಲ್ಲರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಲಭಿಸಿದೆ.ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಚಾರ್ಯ ಪ್ರಸನ್ನಕುಮಾರ್ ಹಾಗೂ ಬೋಧಕ, ಭೋದಕೇತರ ಸಿಬ್ಬಂಧಿ ಹರ್ಷ ವ್ಯಕ್ತಪಡಿಸಿದೆ.