ಸರ್ಕಾರಿ ನೌಕರರಲ್ಲಿ ಹೆಚ್ಚುತ್ತಿರುವ ಮನೋದೈಹಿಕ ಖಾಯಿಲೆಗಳು

ತುಮಕೂರು

      ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಯಿಂದ, ಸಮಾಜದ ಎಲ್ಲಾ ವರ್ಗದ ಜನರಂತೆ ಸರಕಾರಿ ನೌಕರರು ಅತೀ ಹೆಚ್ಚು ಮಾನಸಿಕ ಒತ್ತಡಗಳನ್ನು ಅನುಭವಿಸುತ್ತಿದ್ದಾರೆ, ಮಾನಸಿಕ ಒತ್ತಡದಿಂದ ಅನೇಕ ಮನೋ ದೈಹಿಕ ಖಾಯಿಲೆಗಳು ಹೆಚ್ಚಾಗುತ್ತಿದ್ದುಇದರಿಂದ ಸರ್ಕಾರಿ ನೌಕರರಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚುತ್ತಿದೆ. ಎಂದು ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ವಿಭಾಗ ನಿಯಂತ್ರಣಾಧಿಕಾರಿಗಳಾದ ಗಜೇಂದ್ರಕುಮಾರ್‍ರವರು ತಿಳಿಸಿದರು.

     ಇತ್ತಿಚಿನ ದಿನಗಳಲ್ಲಿ ನೌಕರರುಜೀವನದಲ್ಲಿ ಸಹಜವಾಗಿ ಉಂಟಾಗುವ ಸಣ್ಣ ಪುಟ್ಟ ಬದಲಾವಣೆಯಿಂದ ಉಂಟಾಗುವ ತೋಂದರೆಗಳನ್ನು ನಿವಾರಿಸಿಕೊಂಡು ಒತ್ತಡರಹಿತ ಸಮಾಧಾನಕರ ಜೀವನವನ್ನು ನಡೆಸಲು ಕಷ್ಟ ಪಡುತ್ತಿದ್ದಾರೆ ಎಂದು ಅ13 ರಂದು ಶನಿವಾರದಂದು, ಕರ್ನಾಟಕ ರಾಜ್ಯ ಸಾರಿಗೆ ನಿಗಮ ಕಛೇರಿಯಲ್ಲಿ, ಸ್ನೇಹ ಮನೋವಿಕಾಸ ಕೇಂದ್ರ, ಸೇಜಲ್ ನ್ಯೂ ಲೈಫ್ ಫೌಂಡೇಷನ್ ಮತ್ತು ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ವತಿಯಿಂದ ಹಮ್ಮಿಕೊಂಡಿದ್ದು ಮಾನಸಿಕ ಒತ್ತಡ ನಿರ್ವಹಣೆ ಕಾರ್ಯಾಗಾರದಲ್ಲಿಅಭಿಪ್ರಾಯ ಪಟ್ಟರು.

       ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮುಸಿದ ಸ್ನೇಹ ಮನೋವಿಕಾಸ ಕೇಂದ್ರದ ಮನೋಚಿಕಿತ್ಸಕರಾದ ಚೇತನ್ ಬಿ.ವಿ.ಬಿ ರವರುದೇಹ, ಮನಸ್ಸು, ಮತ್ತು ನಡೆವಳಿಕೆಗಳ ಮಧ್ಯಇರುವ ಸಂಬಂಧವನ್ನು ವೈಜ್ಞಾನಿಕವಾಗಿ ವಿವರಿಸಿದರು, ಮನುಷ್ಯನ ದೇಹ, ತಂದೆ ತಾಯಿಗಳ ವಂಶವಾಹಿಗಳಿಂದ ಬಂದ ಬಳುವಳಿಯಾಗಿದ್ದು, ಪ್ರತಿಯೊಬ್ಬರು ತಮ್ಮ ದೇಹವನ್ನು ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ ಹಾಗೂ ಸರಿಯಾದ ಜೀವನಕ್ರಮದಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಮನುಷ್ಯನ ಮನಸ್ಸು ಸಮಾಜ ಮತ್ತು ಪುಸ್ತಕಗಳಿಂದ, ಚಿಂತಕದಿಂದ ಹಾಗೂ ಅತ್ಯುನ್ನತ ಶಿಕ್ಷಣದಿಂದ ತಮ್ಮ ಮನಸ್ಸಿನಲ್ಲಿ ಸದಾ ಆರೋಗ್ಯಕರ, ಸದೃಢ ಹಾಗೂ ಧನಾತ್ಮಕವಾದ ಪ್ರಾಯೋಗಿಕ ಆಲೋಚನೆಗಳನ್ನು ಅಳವಡಿಸಿಕೊಂಡು ಒತ್ತಡರಹಿತಜೀವನ ನಡೆಸಬೇಕೆಂದುಕರೆಕೊಟ್ಟರು.

        ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾರ್ಮಿಕಕಲ್ಯಾಣಾಧಿಕಾರಿ ಹಂಸವೀಣಾರವರು ಒತ್ತಡರಹಿತ ಜೀವನದ, ಮನೋ ದೈಹಿಕ ಖಾಯಿಲೆಗಳಾದ ಅತಿರಕ್ತದೊತ್ತಡ, ಮಧುಮೇಹ, ಗ್ಯಾಸ್ಟ್ರಿಕ್, ಇನ್ನು ಮುಂತಾದ ಖಾಯಿಲೆಗಳನ್ನು ಸರ್ಕಾರಿ ನೌಕರರು ತಡೆಗಟ್ಟಬಹುದು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap