ಹೋಂ ಕ್ವಾರಂಟೈನ್ ಗಳ ಮೇಲೆ ನಿಗಾ ವಹಿಸಲು ಹೊಸ ಮಾರ್ಗ ಕಂಡು ಹಿಡಿದ ಸರ್ಕಾರ..!?

ಬೆಂಗಳೂರು

    ಕೊರೊನಾ ಹರಡುವಿಕೆ ನಿಯಂತ್ರಿಸಲು ವಿಧಿಸಿರುವ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿರುವುದರ ಮೇಲೆ ನಿಗಾವಹಿಸುದಕ್ಕೆ ರಾಜ್ಯ ಸರ್ಕಾರ ಆಸಕ್ತಿಕರ ಮಾರ್ಗವೊಂದನ್ನು ಕಂಡುಹಿಡಿದಿದೆ.ಹೋಮ್ ಕ್ವಾರಂಟೈನ್ ಅಲ್ಲಿ ಇರುವವರು ಗಂಟೆಗೊಂದು ಸೆಲ್ಫಿ ತೆಗೆದು ಆರೋಗ್ಯ ಇಲಾಖೆಗೆ ಕಳಿಸುವುದು ಕಡ್ಡಾಯವೆಂದು ಸರ್ಕಾರ ಹೇಳಿದೆ.

    ಸರ್ಕಾರದ ಆದೇಶದ ಪ್ರಕಾರ, ಸೆಲ್ಫಿಗಳು ಜಿಪಿಎಸ್ ನಿರ್ದೇಶಾಂಕಗಳನ್ನು ಒಳಗೊಂಡಿವೆ. ವ್ಯಕ್ತಿಯೊಬ್ಬ ಇರುವ ಸ್ಥಳ ಮತ್ತು ಚಲನವಲನಗಳ ಮೇಲ್ವಿಚಾರಣೆ ಮಾಡಲು ಇದು ಸಹಾಯ ಮಾಡುತ್ತದೆ.ಈ ಸೆಲ್ಫಿ ನಿಯಮ ಪಾಲನೆ ಮಾಡದವರನ್ನು ಹೋಮ್ ಕ್ವಾರಂಟೈನ್‌ನಿಂದ ಮಾಸ್ ಕ್ವಾರಂಟೈನ್ ಅಲ್ಲಿ ಇರಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

    ಒಂದು ವೇಳೆ ಕೆಲವರು ಸಂಜೆಯಲ್ಲಿ ಹಲವು ಸೆಲ್ಫಿಗಳನ್ನು ತೆಗೆದು ಬೇರೆ ಬೇರೆ ಸಮಯಕ್ಕೆ ಕಳುಹಿಸಿದರೆ ಏನು ಮಾಡಿತ್ತೀರೆಂದು ಕೇಳಿದ್ದಕೆ ಉತ್ತರಿಸಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ’ಫೋಟೊಗಳ ಮೇಲೆ ಸಮಯವಿರುತ್ತದೆ. ಆದ್ದರಿಂದ ಅವರು ಪ್ರತಿ ಗಂಟೆಗೊಮ್ಮೆ ಕಳುಹಿಸಲೇಬೇಕು’ ಎಂದು ಹೇಳಿದರು.

    ಕೆಲವರಿಗೆ ಮಧ್ಯಾನ್ಹದಲ್ಲಿ ಕಿರು ನಿದ್ರೆ ಮಾಡುವ ಅಭ್ಯಾಸವಿರುತ್ತದೆ. ಈ ನಿಯಮದಿಂದ ಅಂತವರಿಗೆ ತೊಂದರೆ ಆಗುವುದಿಲ್ಲವೇ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರನ್ನು ಕೇಳಿದಾಗ, ’ಮಧ್ಯಾನ್ಹದ ಊಟ ಮತ್ತು ಕಿರುನಿದ್ರೆಗೆ ಎರಡು ಗಂಟೆ ತೆಗೆದುಕೊಳ್ಳಬಹುದು. ನಾವಿಂದು ಕಟ್ಟಿನಿಟ್ಟಿನ ನಿಯಮ ಪಾಲನೆ ಮಾಡಬೇಕಾದ ಪರಿಸ್ಥಿತಿ ಇದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಲೇಬೇಕು’ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link