ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ..!

ಬೆಂಗಳೂರು

      ಸದ್ಯ  ಕೊರೋನಾದಿಂದ ಸಂಕಷ್ಟದಲ್ಲಿರುವ ಕೃಷಿಯೇತರ ಚಟುವಟಿಕೆಯನ್ನೆ ಆಧರಿರಿಸಿರುವ ರೈತರಿಗೆ ಅದರಲ್ಲೂ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೋವಿಡ್-19 ಲಾಕ್ ಡೌನ್ ನಿಂದ ರೇಷ್ಮೆ ಬೆಳೆಗಾರರ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದ್ದು ಮಾರುಕಟ್ಟೆಯಲ್ಲಿ ವ್ಯವಹಾರ ಸಹಜ ಸ್ಥಿತಿಗೆ ಬರುವವರೆಗೆ ರೇಷ್ಮೆ ಗೂಡುಗಳಿಗೆ ಪ್ರತಿ ಕೆಜಿಗೆ 50 ರೂಪಾಯಿ ಬೆಂಬಲ ಬೆಲೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

     ಕೊರೋನಾ ಲಾಕ್ ಡೌನ್ ಗೆ ಮೊದಲು ರೇಷ್ಮೆಗೂಡುಗಳ ಬೆಲೆ ಕೆಜಿಗೆ 350 ರೂಪಾಯಿಗಳಿಂದ 500 ರೂಪಾಯಿಗಳಷ್ಟಿತ್ತು. ಅದೀಗ ಕಿಲೋಗೆ 270 ರೂಪಾಯಿಗಳಿಂದ 250 ರೂಪಾಯಿಗೆ ಇಳಿದಿದೆ. ರೇಷ್ಮೆ ಹುಳಗಳ ಮೊಟ್ಟೆಗೆ ದುಪ್ಪಟ್ಟು ಬೆಲೆ ಕೊಡಬೇಕಾದ ಪರಿಸ್ಥಿತಿ ನಡುವೆ ರೇಷ್ಮೆಗೂಡುಗಳಿಗೆ ಬೆಲೆ ಕುಸಿದಿರುವುದು ರೈತರನ್ನು ತೀವ್ರ ಆರ್ಥಿಕ ಸಂಕಷ್ಟ ತಂದೊಡ್ಡಿದೆ.

    ಇತ್ತೀಚೆಗೆ ರೇಷ್ಮೆ ಬೆಳೆಗಾರರು ಸಚಿವ ನಾರಾಯಣ ಗೌಡ ಅವರನ್ನು ಭೇಟಿ ಮಾಡಿ ಸಂಕಷ್ಟ ಬಗ್ಗೆ ವಿವರಿಸಿದಾಗ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ 10 ಕೋಟಿ ರೂಪಾಯಿ ಬೆಂಬಲ ಬೆಲೆ ಬಿಡುಗಡೆ ಮಾಡುವಂತೆ ಆದೇಶ ನೀಡಿದರು.

ಇದು ಈ ವರ್ಷ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ರೇಷ್ಮೆ ನೂಲು ನೇಯ್ಗೆಗಾರರ ಸಾಲದ ಮೊತ್ತವನ್ನು 2 ಲಕ್ಷದವರೆಗೆ ಹೆಚ್ಚಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link