ಭೂಮಿಗೆ ತಕ್ಕ ಬೆಲೆ ಕೊಡುವಲ್ಲಿ ವಿಫಲವಾದ ಸರ್ಕಾರ : ಯೋಗೀಶ್

ತಿಪಟೂರು
      ಸರ್ಕಾರಕ್ಕೆ ರೈತರ ಭೂಮಿ ಬೇಕು ಆದರೆ ಆ ಭೂಮಿಗೆ ತಕ್ಕ ಬೆಲೆ ಕೊಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೃಷಿ ಬಂದು ವೇದಿಕೆಯ ಜಿಲ್ಲಾಧ್ಯಕ್ಷ ಯೋಗೀಶ್ ಆರೋಪಿಸಿದರು.
 
      ನಗರದ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಯಾವುದೇ ಸರ್ಕಾರಗಳು ಬಂದರೂ ರೈತರಿಗೆ ಯಾವುದೇ ರೀತಿಯಾದ ಸಹಕಾರ ನೀಡದೇ ಕೇವಲ ಅವರ ಜಮೀನನ್ನು ಪಡೆದುಕೊಳ್ಳುವುದೇ ಮೂಲ ಉದ್ದೇಶವಾಗಿದ್ದು ಅದಕ್ಕೆ ಉತ್ತಮವಾದ ಬೆಲೆ ನೀಡದೇ ಇರುವುದು ಸರ್ಕಾರವು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಪಾದಿಸಿದ ಅವರು ಈ ಭಾಗದಲ್ಲಿ ಹೋಗುತ್ತಿರುವ ಎತ್ತಿನಹೊಳೆ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇನ್ನೂರ ಆರರಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತವಾದ ಬೆಲೆಯನ್ನು ನೀಡದೆ ಸರಕಾರ ಅನ್ಯಾಯವೆಸಗುತ್ತಿದೆ .
 
      ಅದಷ್ಟೇ ಅಲ್ಲದೆ ರೈತರಿಗೆ ಒದಗಿಸುವ ರಸಗೊಬ್ಬರವನ್ನು ಕೂಡ ಕಾಳಸಂತೆಯಲ್ಲಿ ಖಾಸಗಿ ವ್ಯಕ್ತಿಗಳು ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ಗೊಬ್ಬರವನ್ನು ಕೊಂಡುಕೊಳ್ಳುವುದು ಕಷ್ಟಕರವಾಗಿರುವುದರಿಂದ ಸರ್ಕಾರವು ಗೊಬ್ಬರದ ಬೆಲೆಯನ್ನು ಕಡಿಮೆಗೊಳಿಸಿ ಆ ಮೂಲಕ ಸಾರ್ವಜನಿಕವಾಗಿ ವಿತರಣೆಯಾಗುವಂತೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಇದೇ ವೇಳೆ ಆಗ್ರಹಿಸಿದ ಅವರು ಯಾವುದೇ ಕಾರಣಕ್ಕೂ ರೈತರ ಜೊತೆಗೆ ಸದಾ ಇದ್ದು ರೈತರ ಹೋರಾಟಗಳಿಗೆ ನಮ್ಮ ವೇದಿಕೆಯು ಸಂಪೂರ್ಣವಾಗಿ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದರು.
      ಕೃಷಿ ರೈತ ಬಂದು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಚಿನ್ ಮಾಯಸಂದ್ರ ಮಾತನಾಡಿ ದೀಪದ ಕೆಳಗೆ ಕತ್ತಲು ಇರುವಂತೆ ರೈತರು ತಾವು ಬೆಳೆದ ಬೆಳೆಗಳಿಗೆ ನಿರ್ದಿಷ್ಟವಾದ ಬೆಂಬಲ ಬೆಲೆಯನ್ನೂ ನೀಡದೆ ಹಾಗೂ ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳುವುದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು ಯಸಳೂರುರ ಭೂಸ್ವಾಧೀನ ಪ್ರಕ್ರಿಯೆಯು ಯಾವ ಪುರುಷಾರ್ಥಕ್ಕಾಗಿ ಎಂದು ಇದೇ ವೇಳೆ ಪ್ರಶ್ನಿಸಿದರು.
      ಭೂಸ್ವಾಧೀನ ಪ್ರಕ್ರಿಯೆಯು ಯಾವುದೇ ರೈತರಿಗೆ ಪ್ರಯೋಜನವಾಗಿಲ್ಲ ಬದಲಾಗಿ ರಿಯಲ್ ಎಸ್ಟೇಟ್  ಏಜೆಂಟರುಗಳಿಗೆ. ದಲ್ಲಾಳಿಗಳಿಗೆ ಮಧ್ಯವರ್ತಿಗಳಿಗೆ ಸಹಕಾರಿಯಾಗಿದೆ ಹೊರತು ಯಾವುದೇ ಕಾರಣಕ್ಕೂ ರೈತರಿಗೆ ಇದರಿಂದ ಅನುಕೂಲವಾಗಿಲ್ಲ ಎಂದು ಆಪಾದಿಸಿದ ಅವರು ಈ ಬಗ್ಗೆ ರಾಜ್ಯಪಾಲರ ಗಮನಕ್ಕೂ ತರುವುದಾಗಿ ತಿಳಿಸಿದರು, ಯಾವುದೇ ಕಾರಣಕ್ಕೂ ರೈತರ ಜೊತೆಗೆ ತಾವಿದ್ದು ಅವರ ಹೋರಾಟದಲ್ಲಿ ನಾವು ಕೂಡ ಭಾಗಿಯಾಗುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
        ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ದಿಲ್ದಾರ್ ಪಾಷಾ ತಾಲ್ಲೂಕು ಅಧ್ಯಕ್ಷ ತಿಮ್ಲಾಪುರ ಸ್ವಾಮಿ. ದಸಂಸ ವಿಭಾಗೀಯ ಅಧ್ಯಕ್ಷ ಕಲ್ಲೇಶ ಶೆಟ್ಟಿಹಳ್ಳಿ. ದಸಂಸ ತಾಲ್ಲೂಕು ಅಧ್ಯಕ್ಷ ಪ್ರಸನ್ನ, ಸಂಘದ ರಾಜ್ಯ ಪತ್ರಿಕಾ ಸಲಹೆಗಾರ ಡಿ ಮಂಜುನಾಥ್ ಹಾಗೂ ಮತ್ತಿತರರು ಹಾಜರಿದ್ದರು
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap