ಬೆಂಗಳೂರು
ಚುನಾವಣೆ ಹತ್ತಿರ ಬಂದಾಗ ಐಟಿ ಸಿಬಿಐ ದಾಳಿ ನಡೆಸುವ ಹೊಸ ಪ್ರವೃತ್ತಿ ಪ್ರಾರಂಭವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮೇಲಿನ ದಾಳಿ ರಾಜಕೀಯ ದುರುದ್ದೇಶ ಎಂದು ಕಿಡಿಕಾರಿದರು.
ಸರ್ಕಾರದ ನಡೆಯನ್ನು ಪ್ರಶ್ನಿಸುವ ವಿಪಕ್ಷ ನಾಯಕರ ಮೇಲೆ ದಾಳಿ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಡಿಕೆಶಿ ಅಧ್ಯಕ್ಷರಾದ ನಂತರ ಇದು ಹೆಚ್ಚಾಗಿದೆ. ಶಿವಕುಮಾರ್ ವೈಫಲ್ಯ ಖಂಡಿಸಿ ಸರ್ಕಾರದ ವಿರುದ್ಧ ಹೋರಾಟ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಪರ ಜನತ ಒಲವಿದೆ ಎನ್ನುವ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ.
ಯಡಿಯೂರಪ್ಪ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಇದನ್ನು ಮರೆಮಾಚಲು ಸಿಬಿಐ ದಾಳಿ ನಡೆಸಲಾಗುತ್ತಿದೆ. ಏಳೂವರೆ ಕೋಟಿ ಆರ್ ಟಿಜಿಎಸ್ ಮೂಲಕ ಸಿಎಂ ಕುಟುಂಬ ಹಣ ವರ್ಗಾಯಿಸಿದೆ. ಆದರೂ ಈ ಬಗ್ಗೆ ಸಿಬಿಐ, ಐಟಿ ಏಕೆ ಕೇಸ್ ದಾಖಲಿಸಿಲ್ಲ. ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.ಸಿಬಿಐ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರವನ್ನು ತನಿಖೆ ಮಾಡುವಂತೆ ಒತ್ತಾಯಿಸಿ ಜನರ ಬಳಿ ಹೋಗುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
