ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು: ಕುಮಾರಸ್ವಾಮಿ

ಬೆಂಗಳೂರು

         ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಸೇರಿ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

          ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಸಂಸ್ಥೆಯಗಳಿಗೆ ಖಸಗಿ ಕಂಪನಿಗಳು ಸಂಸ್ಥೆಗಳು ಅಧ್ಯಾತ್ಮಿಕ ಕೇಂದ್ರಗಳಿಂದ ಕೋಟ್ಯಾಂತರರೂ ದೇಣಿಗೆ ಬರಲಿದ್ದು ಅದನ್ನು ಸಮರ್ಥವಾಗಿ ಬಳಸಿಕೊಂಡು ಸರ್ಕಾರದ ನೆರವು ಹೆಚ್ಚಿಸಿ ಜಾಗತಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು ಎಂದರು.

         ನಗರದಲ್ಲಿಂದು ಹೊಸೂರು ರಸ್ತೆಯ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ಆವರಣದಲ್ಲಿ ಆರ್.ಕೆ.ಸಿಪಾನಿ ಬ್ಲಾಕ್ ಮತ್ತು ಧನರಾಜ್ ಡಾಗಾ ಬ್ಲಾಕ್ ನಲ್ಲಿಒಳರೋಗಿಗಳಿಗೆ ಪ್ರತ್ಯೇಕ ವಾಗಿ ನಿರ್ಮಿಸಿರುವ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ ಕ್ಯಾನ್ಸರ್ ತಪಾಸಣೆ ಪ್ರಕ್ರಿಯೆ ಸಂಬಂಧ ರಾಜ್ಯ ಸರ್ಕಾರದಿಂದ ಇನ್ನೂ ಹಲವು ಬಸ್ ಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.

          ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಗುರುತಿಸುವುದು ಬಹಳ ಮುಖ್ಯ.ಈ ವಿಚಾರದಲ್ಲಿ ಬಿಇಎಲ್ ಸಂಸ್ಥೆ ಕೊಟ್ಟಿರುವ ಮೊಬೈಲ್ ಕ್ಯಾನ್ಸರ್ ತಪಾಸಣಾ ವಾಹನ ಬಹಳ ಉಪಯುಕ್ತ. ಇನ್ನೂ, ಆರೋಗ್ಯ ಇಲಾಖೆ ಕಡೆಯಿಂದಲೂ ಒಂದೆರಡು ಬಸ್ ಗಳನ್ನು ನೀಡಲಾಗುತ್ತದೆ ಎಂದು ಸ್ಥಳದಲ್ಲೇ ಕಾರ್ಯದರ್ಶಿ ಜಾವೇದ್ ಅವರಿಗೆ ಸಿಎಂ ಸೂಚಿಸಿದರು. 

          ಇಂದು ಕಿದ್ವಾಯಿ ಆಸ್ಪತ್ರೆಯ ಮತ್ತೊಂದು ಕಟ್ಟಡ ಇದಕ್ಕೆ ಸೇರ್ಪಡೆಯಾಗಿದೆ. ನಮ್ಮ ರಾಜ್ಯವು ದೇಶದಲ್ಲೇ ಹಲವು ಆರೋಗ್ಯಕ್ಕೆ ಉತ್ತಮವಾದ ಸೇವೆ, ಕೊಡುಗೆ ನೀಡಿದೆ ಇದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ನುಡಿದರು

          ಕಿದ್ವಾಯಿ ಸಂಸ್ಥೆ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಬೋನ್ ಮಾರೋ ಟ್ರಾನ್ಸ್ ಪ್ಲಾಂಟ್‍ಗೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯ ನೀಡಲಾಗಿದೆ. ಅಂಗಾಗ ಕಸಿಗೆ ಸರ್ಕಾರದಿಂದ 30 ಕೋಟಿ ಹಣವನ್ನು ಮೀಸಲಿಡಲಾಗಿದೆ.ಸರ್ಕಾರದಿಂದ ಸಿಫಾನಿಯ ವಯೋವೃದ್ಧ ಟ್ರಸ್ಟ್ ಗೆ ಜಾಗವನ್ನು ನೀಡುತ್ತೇವೆ ಎಂದು ಕುಮಾರ ಸ್ವಾಮಿ ವಿವರಿಸಿದರು.

          ಹಣ ನೀಡಿ ಎಲ್ಲವನ್ನು ಖರೀದಿ ಮಾಡುವವರು ಈ ಕಾಲದಲ್ಲಿ ಇದ್ದಾರೆ. ನಾನು ನೇರವಾಗಿ ಹೇಳುತ್ತೇನೆ ಆ ರೀತಿಯ ಜನ ವರ್ಗ ಹೆಚ್ಚಿದೆ. ಆದರೆ ನಾನು ಕೆಲವು ವಿಚಾರವನ್ನು ನೇರವಾಗಿ ಹೇಳೋದಿಲ್ಲ. ಒಂದು ವೇಳೆ ಹೇಳಿದರೆ, ನಾಳೆ ಬೆಳಿಗೆ ನೋಟೀಸ್ ಬರುತ್ತೆ ಎಂದು ಅವರು ತಿಳಿಸಿದರು. 

           ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕುರಿತ ತಂಬಾಕು ತರವಲ್ಲ ಸಾಕ್ಷ್ಯಚಿತ್ರ ಹಾಗೂ ಕಿದ್ವಾಯಿ ಆಸ್ಪತ್ರೆಯ ನೂತನ ವೆಬ್ ಸೈಟ್ ಬಿಡುಗಡೆ ಲೋಕಾರ್ಪಣೆ ಮಾಡಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap