ತಿಪಟೂರು :
ಕೊರೊನಾ ಮಹಾಮಾರಿಗೆ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಬಳಸಿ ಎಂದು ಹೇಳಿ ಮದ್ಯಪಾನದ ಅಂಗಡಿಗಳನ್ನು ಲಾಕ್‍ಡೌನ್ ನೆಪದಲ್ಲಿ ಬಂದ್‍ಮಾಡಿದ್ದರು. ಆದರೆ ಮೇ 4 ರಂದು ಮದ್ಯ ದೊರೆಯುತ್ತದೆ ಎಂದು ತಿಳಿದ ಮದ್ಯಪ್ರಿಯರು ಇಂದು ಖುಷಿಯಿಂದ ಬೆಳ್ಳಂಬೆಳಗ್ಗೆಯೇ ಎದ್ದು ಬಾರ್ ಮುಂದೆ ಹಾಜರಾಗಿ ನಾಜುಕಾಗಿ ಸರತಿಯಲ್ಲಿ ನಿಂತಿದ್ದರು.
ಇದೆಲ್ಲದರ ಮದ್ಯೆಯೇ ತಾಲ್ಲೂಕಿನಲ್ಲಿ ಮಾತ್ರ ಜಿಲ್ಲೆಯಲ್ಲಿ ಲಾಕ್‍ಡೌನ್ ನಡುವೆಯೇ ಕದ್ದು ಮದ್ಯವನ್ನು ಮಾರಿದ್ದಾರೆಂದು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಕಂದಾಯ ಇಲಾಖೆ, ಅಬಕಾರಿ ನಿರೀಕ್ಷಕರು ಮತ್ತು ಆರಕ್ಷಕರು ಮದ್ಯದಂಗಡಿಗಳಲ್ಲಿ ಇರುವ ಸರಕನ್ನು ಲೆಕ್ಕ ತೆಗೆದುಕೊಂಡ ಮೇಲೆ ಮದ್ಯವನ್ನು ಮಾರಾಟಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಆರಕ್ಷಕ ಸಿಬ್ಬಂದಿ ಧ್ವನಿವರ್ದಕದ ಮೂಲಕ ಮಾಹಿತಿ ನೀಡುತ್ತಿದ್ದಂತೆಯೇ ಮದ್ಯಪ್ರಿಯರೆಲ್ಲರೂ ನಿರಾಸೆಯಿಂದ ಸಿಕ್ಕಸಿಕ್ಕ ಸ್ಥಳಗಳಲ್ಲನ್ನು ಆಶ್ರಯಿಸಿದರು.
ಇನ್ನು ನಗರಕ್ಕೆ ಬೆಳಗ್ಗೆಯೇ ಹಾಜರಾದ ಮದ್ಯಪ್ರಿಯರು ಸಾಮಾಜಿಕ ಅಂತರಕ್ಕಾಗಿ ಹಾಕಿದ್ದ ಬಾಕ್ಸ್‍ಗಳಲ್ಲಿ, ಬಟ್ಟೆ, ಬ್ಯಾಗ್, ಚಪ್ಪಲಿ ಕಲ್ಲು ಮತ್ತು ತಮಗೆ ಬೇಕಾದ ವಸ್ತುಗಳನ್ನು ಇಟ್ಟು ಸರತಿಯಲ್ಲಿ ನಿಂತಿದ್ದರು. ಇನ್ನು ಬಾರ್‍ಗಳ ಮುಂದೆ ದಬ್ಬೆಗಳನ್ನು ಕಟ್ಟಿ ಸರತಿಗಾಗಿ ವ್ಯಸವಸ್ಥೆಮಾಡಲಾಗಿತ್ತು.
ಇಲ್ಲಿ ನಿಂತಿದ್ದ ಪಾನಪ್ರಿಯರು ಯಾವಾಗ ಆರಕ್ಷಕರು ಬಂದರೋ ಆವಾಗಿನಿಂದ ಬಾರ್‍ನ ಸುತ್ತಮುತ್ತಲ ಅಂಗಡಿಗಳ ಹತ್ತಿರ ಮತ್ತು ತಂಗುದಾಣ, ದೇವಾಲಯಗಳ ಬಳಿ ಆಶ್ರಯ ಪಡೆದು ತಾವು ಇಟ್ಟಿರುವ ಸರತಿಯನ್ನು ಯಾರಾದೂ ಮೀರುತ್ತಾರೋ ಎಂದು ಕಾಯುತ್ತಾ ಕುಳಿತಿರುವ ದೃಶ್ಯ ಬಿ.ಹೆಚ್.ರಸ್ತೆಯಲ್ಲಿರುವ ತಿರುಮಲ ಬಾರ್ ಮುಂದೆ ಕಾಣುತ್ತಿದೆ.
ಆದರೆ ಸಾರ್ವಜನಿಕರು ಹೇಳುವಂತೆ ಇಷ್ಟುದಿನ ಸರ್ಕಾರವು ಮಾಡಿದ್ದ ಲಾಕ್‍ಡೌನ್ ಅನ್ನು ಕಟ್ಟು ನಿಟ್ಟಾಗಿ ಪಾಲಿಸಿದ ನಮಗೆ ಸರ್ಕಾರ ಏಕಾಏಕಿ ಮದ್ಯಪಾನದ ಅಂಗಡಿಗಳನ್ನು ತೆರೆದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದ. ಇನ್ನು ಜನರ ಕೈನಲ್ಲಿ ಹಣವಿಲ್ಲ ಸಿಕ್ಕ ಸಿಕ್ಕ ವಸ್ತುಗಳನ್ನು ಮಾರುತ್ತಾರೆ ಇಲ್ಲ ಮದ್ಯಕ್ಕಾಗಿ ಕಳ್ಳತನಕ್ಕೆ ಇಳಿದರು ಆಶ್ಚರ್ಯವಿಲ್ಲವೆನ್ನುತ್ತಿದ್ದಾರೆ.
ಬಡವರ ಟೀ, ಕ್ಷೌರಿಕರ ಅಂಗಡಿಯಿಂದ ಮಾತ್ರ ಕೊರೊನಾ ಹರಡುತ್ತದೆಯೇ:
ಸರ್ಕಾರ ತನ್ನ ಆದಾಯದ ಆಸೆಗಾಗಿ ಮದ್ಯದಂಗಡಿಗಳನ್ನು ತೆರೆದಿದೆ. ಆದರೆ ಸರ್ಕಾರಕ್ಕೆ ಲೆಕ್ಕಕ್ಕೇ ಇಲ್ಲದ ಬಡವರ ಗೂಡಂಗಡಿಗಳು ಮತ್ತು ಟೀ ಅಂಗಡಿಗಳನ್ನು ಮಾತ್ರ ತೆರೆಯುವಂತೆ ಇಲ್ಲ. ಇಲ್ಲಿ ಟೀ ಕುಡಿದ ಲೋಟಗಳು ಮತ್ತು ಸಾರ್ವಜನಕರು ಗುಂಪುಗೂಡುತ್ತಾರೆ ಎಂಬ ಉದ್ದೇಶದಿಂದ ಈ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಆದರೆ ಇಲ್ಲಿ ಜನರು ಸರಿಯಾಗಿ ನಿಂತಿರುತ್ತಾರೆ ಮತ್ತು ಹೇಳಿದ ಮಾತನ್ನು ಅರ್ಥಮಾಡಿಕೊಳ್ಳುತ್ತಾರೆ.
ಆದರೆ ಒಂದು ಬಾರಿ ಮದ್ಯವು ಬಾಯಿಗೆ ಬಿದ್ದರೆ ಶೂರಂತೆ ಆಡುವ ಮದು ಪ್ರಿಯರು ತಮ್ಮ ಮಾತನ್ನು ತಾವೇ ಕೇಳದೆ ಹೇಗೆ ಬೇಕೋ ಆಗೆ ವರ್ತಿಸುತ್ತಾ ಕಂಡಕಂಡಲ್ಲಿ ಉಗುಳುತ್ತಾ, ಸಿಕ್ಕಸಿಕ್ಕಲ್ಲಿ ಮದ್ಯದ ಬಾಲು ಲೋಟಗಳನ್ನು ಎಸೆಯುತ್ತಾರೆ ಇದರಿಂದ ಕೊರೊನಾ ಸೊಂಕು ಇನ್ನು ಹೆಚ್ಚಾಗುವುದಿಲ್ಲವೇ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇನ್ನು ಸಮಾಜವನ್ನು ಪುರುಷರನ್ನು ಸುಂದರವಾಗಿ ಮಾಡುವ ಕೆಲಸವನ್ನು ಮಾಡುವ ಕೌರಿಕರು ಲಾಕ್‍ಡೌನ್ ಆದಾಗಿನಿಂದ ತುಂಬಾ ಸಂಕಷ್ಟಕ್ಕೆ ಈಡಾಗಿದ್ದು ಅಂಗಡಿಯ ಬಾಡಿಗೆಯನ್ನು ಕಟ್ಟಲು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದ್ದು ಇಂತಹ ಅಂಗಡಿಗಳನ್ನು ಮಾತ್ರ ಹುಡುಕಿ ಹುಡುಕಿ ಮುಚ್ಚಿಸುತ್ತಿದ್ದಾರೆ. ಇಲ್ಲಿ ಯಾರು ಸಾಮಾಜಿಕ ಅಂತರವನ್ನು ಕಾಪಾಡುವುದಿಲ್ಲ ಎಂಬುದು ತಿಪಟೂರು ಸವಿತಾ ಸಮಾಜದ ಕಾರ್ಯದರ್ಶಿ ವಿಜಯ್‍ಕುಮಾರ್ ತಿಳಿಸಿದರು.
ದಯವಿಟ್ಟು ಗುಜರಿ, ಲೇವಾದೇವಿ ಅಂಗಡಿಗಳನ್ನು ತೆರಸಬೇಡಿ : ಬಾರ್‍ಗಳನ್ನು ತೆರೆದಿರುವುದು ಮೊದಲೇ ತೊಪ್ಪು ಅದಕ್ಕೋಸ್ಕರ ವಾದರು ಗುಜರಿ ಮತ್ತು ಲೇವಾದೇವಿ ಅಂಗಡಿಗಳನ್ನು ಮಾತ್ರ ತೆರೆಯಬೇಡಿ. ಇವುಗಳನ್ನು ತೆರೆದರೆ ಮೊದಲೇ ಕೆಲಸವಿಲ್ಲದೇ ಕೈನಲ್ಲಿ ನಾಲ್ಕು ಕಾಸಿಲ್ಲ ಇವುಗಳನ್ನು ತೆರೆದರೆ ಮನೆಯಲ್ಲಿರು ಬೆಲೆಬಾಳು ಪಾತ್ರೆಗಳು ಮತ್ತು ಒಡವೆಗಳನ್ನು ಎಲ್ಲಿಯಾದರ ಅಡಮಾನವಿಟ್ಟು ಕೊಡಿಯಲು ಹೋಗುತ್ತಾರೆಂದು ನೊಂದ ಮಹಿಳೆಯರು ತಿಳಿಸುತ್ತಾರೆ.
ದೇವಸ್ಥಾನ, ಚರ್ಚ್, ಮಸೀದಿಯಿಂದ ಕೊರೊನಾ ಹರಡುತ್ತದೆ ಇಲ್ಲಿ ಜನರು ಸಾಮೂಹಿಕವಾಗಿ ಸೇರಿ, ಪೂಜೆ, ಪ್ರಾರ್ಥನೆ, ನಮಾಜ್‍ಮಾಡಿದರೆ ಸಾಮಾಜಿಕ ಅಂತರವಿಲ್ಲದೇ ಕೊರೊನಾ ಹೆಚ್ಚಾಗುತ್ತದೆ ಎಂದಿತ್ತು ಆದರೆ ಇಂದು ಮದ್ಯದಂಗಡಿಗಳನ್ನು ತೆರೆದು ಸಾಮಾಜಿಕ ಜನರ ಭಾವನೆಗಳಿಗೆ ಸರ್ಕಾರ ಆದಾಯಕ್ಕೋಸ್ಕರ ಏನು ಬೇಕಾದರು ಮಾಡುತ್ತದೆನೋ ಎಂಬ ಭಾವನೆಯನ್ನು ತಂದಿದೆ.
ಎಣ್ಣೆ ಸಿಗುತ್ತಿದೆ ಆದರೆ ಸೈಡ್ಸ್ ಬೇಡವೇ :
ಇನ್ನು ಸರ್ಕಾರಕ್ಕೆ ನೇರವಾಗಿ ಪ್ರಶ್ನೆಯನ್ನು ಎಸೆದಿರುವ ಹೆಸರೇಳಲಿಚ್ಚ್ಚಿದ ಕುಡುಕೊನೊಬ್ಬ ಇಂದು ಸರ್ಕಾರವು ನಮಗೆ ಎಣ್ಣೆಯನ್ನೇನೊ ಕೊಳ್ಳು ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಎಣ್ಣೆಗೆ ಸೂಕ್ತವಾದ ಸೈಡ್ಸ್‍ಗಳಾದ ಮಾಂಸಾಹಾರ, ಚರುಮುರಿ ಬೋಂಡ, ಮೊಟ್ಟೆ, ಮುಂತಾದವುಗಳ ಅಂಗಡಿಗಳನ್ನು ತೆರೆಯದಿರುವುದು ನಮಗೆ ಸಮಾದಾನವಾಗಿಲ್ಲವೆನ್ನುತ್ತಾನೆ.
ಲಾಕ್‍ಡೌನ್ ಆದಾಗಿನಿಂದ ಕೌಟುಂಬಿಕ ಕಲಹಗಳು ಕಡಿಮೆಯಾಗಿವೆ, ಇಂತಹ ಸಮಯದಲ್ಲಿ ಮದ್ಯವನ್ನು ನಿಲ್ಲಿಸಿದ್ದು ಸ್ವಾಗತಾರ್ಹ ಆದರೆ ಇಂದಿನಿಂದ ಮದ್ಯವನ್ನು ಸರ್ಕಾರ ನೀಡುತ್ತಿರುವುದು ಇಲ್ಲದ ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತದೆ.
ನಂದಕುಮಾರ್
ನಿರ್ದೇಶಕರು ಬದುಕು ಸಹಾಯವಾಣಿ, ತಿಪಟೂರು
ಸಾಮಾಜಿಕ ಜಾಲತಾಣದಲ್ಲಿ ಹಾಕಿರುವಂತೆ ಮದ್ಯಪ್ರಿಯರಿಗೆ ಅಳಿಸಲಾಗದ ಷಾಹಿಯಿಂದ ಗುರುತು ಹಾಕಿ, ಅಂತಹ ವರಿಗೆ ಸರ್ಕಾರದಿಂದ ನೀಡುವ ರೇಷನ್ ನೀಡಬೇಡಿ, ದಿನಕ್ಕೆ ನೂರಾರು ರೂ ವ್ಯಯಿಸಿ ಮದ್ಯಪಾನ ಮಾಡುವವರಿಗೆ ಸಂಸಾರಕ್ಕೆ ಸಾಕಾಗುವಷ್ಟು ದಿನಸಿಯನ್ನು ಕೊಳ್ಳಲು ಆಗುವುದಿಲ್ಲವೇ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ