ನಗರದ ಪೊಲೀಸ್ ಕಮೀಷನರ್ ಬದಲಾವಣೆಗೆ ಸರ್ಕಾರ ಚಿಂತನೆ..!!

ಬೆಂಗಳೂರು

    ಅಧಿಕಾರಕ್ಕೆ ಬಂದ ಕೂಡಲೇ ಆಡಳಿತ ಚುಕ್ಕಾಣಿಯ ಮೇಲೆ ಬಿಗಿ ಹಿಡಿದ ಸಾಧಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ ನಗರದ ಪೋಲೀಸ್ ಕಮೀಷ್ನರ್ ಅವರನ್ನು ಬದಲಿಸಲು ತೀರ್ಮಾನಿಸಿದ್ದು,ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ,ಕಮಲ್‍ಪಂಥ್ ಹಾಗೂ ಭಾಸ್ಕರರಾವ್ ಅವರ ಹೆಸರುಗಳು ನೂತನ ಪೋಲೀಸ್ ಕಮೀಷ್ನರ್ ಹುದ್ದೆಗೆ ಕೇಳಿ ಬಂದಿವೆ.

    ಹಾಲಿ ಪೋಲೀಸ್ ಕಮೀಷ್ನರ್ ಅಲೋಕ್ ಕುಮಾರ್ ಅವರನ್ನು ಬದಲಿಸಿ,ಆ ಜಾಗಕ್ಕೆ ತಮಗೆ ಬೇಕಾದವರನ್ನು ತಂದು ಕೂರಿಸಲು ಯಡಿಯೂರಪ್ಪ ಬಯಸಿದ್ದು ಈ ಹಿನ್ನೆಲೆಯಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ರೇಸಿಗೆ ಬಂದಿವೆ.ಇದೇ ರೀತಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹುದ್ದೆಯ ರೇಸಿಗೂ ಹಲವರ ಹೆಸರುಗಳು ಕೇಳಿ ಬಂದಿದ್ದು,ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಕಾರ್ಯ ಆಗಲೇ ಶುರುವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ