ರೈತ ದೇಶದ ಬೆನ್ನೆಲುಬು ಎಂಬುದನ್ನು ಸರ್ಕಾರಗಳು ಮರೆಯಬಾರದು

ಪಾವಗಡ

       ಆಡಳಿತದಲ್ಲಿ ಯಾವುದೇ ಸರ್ಕಾರ ಇದ್ದರೂ ರೈತ ದೇಶದ ಬೆನ್ನೆಲುಬು ಎನ್ನುವುದು ಮರೆಯಬಾರದೆಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ತಿಳಿಸಿದರು.ತಾಲ್ಲೂಕಿನ ಗುಂಡಾರ್ಲಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಘಟಕಕ್ಕೆ 100 ಕ್ಕೂ ಹೆಚ್ಚು ಜನ ರೈತರನ್ನು ಹಸಿರು ಶಾಲು ಹೊದಿಸುವುದರ ಮೂಲಕ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ರೈತರು ಕೃಷಿಯನ್ನು ಆಶ್ರಯವಾಗಿ ಇಟ್ಟುಕೊಂಡು ಜೀವನ ಸಾಗುತ್ತಿದ್ದಾರೆ. ಪಾವಗಡ ತಾಲ್ಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಮಳೆ ಬೆಳೆ ಯಾಗದೆ ಕಂಗಾಲಾಗಿದ್ದಾರೆ. ಇದನ್ನು ಗಮನಿಸಬೇಕಾದ ಜವಾಬ್ದಾರಿ ಜನಪ್ರತಿನಿಧಿಗಳಿಗಿರಬೇಕು ಎಂದು ತಿಳಿಸಿದರು.

      ದೇಶದಲ್ಲಿ ರೈತನ ಸ್ಥಿತಿ ಚಿಂತಾಜನಕವಾಗಿದೆ. ಆಹಾರ ಪದಾರ್ಥಗಳನ್ನು ನೈಸರ್ಗಿಕವಾಗಿ ಬೆಳೆಚಿದೆ, ಕೃತಕವಾಗಿ ಬೆಳೆದು ತಿಂದು ಅವುಗಳಿಂದ ಹಲವು ಪ್ರಾಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಪಾವಗಡ ತಾಲ್ಲೂಕಿನ ರೈತರಿಗೆ ನೈಸರ್ಗಿಕ ಕಾರ್ಯಾಗಾರಗಳು ದೇಸಿಬೀಜ ಬಿತ್ತನೆ ರಾಸುಗಳಿಗೆ ಮೇವು ಬ್ಯಾಂಕ್ ದೇಸಿ ದನ ಕರುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಸರ್ಕಾರ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದರು.

      ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ತಿಮ್ಮರಾಯಪ್ಪ, ಪ್ರಧಾನಕಾರ್ಯದರ್ಶಿ ತಿಮ್ಮರಾಯ, ಕಾರ್ಯದರ್ಶಿ ಕರಿಯಣ್ಣ ವೈಎನ್ ಹೋಸಕೋಟೆ ಹೋಬಳಿ ಘಟಕದ ಅಧ್ಯಕ್ಷ ಗೋಪಾಲ್, ನಿಡಗಲ್ ಅಧ್ಯಕ್ಷ ವೀರಭದ್ರಪ್ಪ, ರಾಜಕುಮಾರ್, ಸಿದ್ದಪ್ಪ, ಹನುಮಂತರಾಯಪ್ಪ ಹಾಗೂ ನೂರಾರು ರೈತರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link